ಸಿಖ್ ಧರ್ಮೀಯರ ಮೂರನೇ ಗುರುವಾದ ಗುರು ಅಮರ್‌ದಾಸ್‌ರು 1479ರಲ್ಲಿ ಜನಿಸಿದರು. ಜಾತಿ, ಪಕ್ಷಪಾತ ಮತ್ತು ಅಸ್ಪರ್ಶತೆ ವಿರುದ್ದ ಹೋರಾಟಕ್ಕೆ ಸ್ಪೂರ್ತಿ ನೀಡಿದರು.
ಗುರುನಾನಕರು ಆರಂಭಿಸಿದ ಗುರು ಕಾ ಲಂಗರ್ ಅನ್ನು ಇನ್ನಷ್ಟು ಬಲಿಷ್ಟಗೊಳಿಸಿ ,ಬಡವರಿರಲಿ, ಶ್ರೀಮಂತರಿರಲಿ,ದೊಡ್ಡವರಾಗಲಿ, ಚಿಕ್ಕವರಾಗಲಿ ಒಂದೇ ಸ್ಥಳದಲ್ಲಿ ಕುಳಿತು ಒಟ್ಟಾಗಿ ಉಟ ಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸಿದರು.ಜನತೆಯಲ್ಲಿ ಸಮಾನತೆಯ ಅಂಶಗಳನ್ನು ಬೋಧಿಸಿದರು.
ಗುರು ಅಮರ್‌ದಾಸ್ ಅವರು ಸಿಖ್ ಧರ್ಮೀಯರ ಮದುವೆಗೆ ಆನಂದ ಕರಾಜ್ ಎನ್ನುವ ಸಾಂಪ್ರದಾಯಕ ಆಚರಣೆಯನ್ನು ಜಾರಿಗೆ ತಂದರು.ಸತಿ ಸಹಗಮನ ಪದ್ದತಿಯನ್ನು ಆಚರಿಸದಂತೆ ಕರೆ ನೀಡಿದ್ದಲ್ಲದೇ ಪರ್ದಾ ಪದ್ದತಿಯನ್ನು ವಿರೋಧಿಸಿದರು.