ಸಿಖ್ ಧರ್ಮದ ಎರಡನೇ ಗುರುವಾದ ಗುರು ಅಂಗದರು 1504ರಲ್ಲಿ ಜನಿಸಿದರು. ಗುರುಮುಖಿ ಸಾಹಿತ್ಯವನ್ನು ಸಿಖ್ ಧರ್ಮಕ್ಕೆ ಪರಿಚಯಿಸಿದರು.ಪಂಜಾಬಿ ಭಾಷೆಯನ್ನು ಮೂಲವಾಗಿಟ್ಟುಕೊಂಡು ಗುರುಮುಖಿ ಸಾಹಿತ್ಯವನ್ನು ರಚಿಸಿದರು.
ಗುರು ಅಂಗದ ಅವರು ತಮ್ಮ ನಿಸ್ವಾರ್ಥ ಸೇವೆಗೆ ಸಿಖ್ ಧರ್ಮೀಯರಲ್ಲಿ ಮಾದರಿಯಾಗಿದ್ದಾರೆ. ಭಕ್ತಿ ಪ್ರಾರ್ಥನೆಯನ್ನು ಸಂಗೀತದ ಮೂಲಕ ಮಾಡುವುದನ್ನು ತೋರಿಸಿಕೊಟ್ಟರು. ಅದು ಕೆಲ ಕಾಲದಲ್ಲಿ ಜಗತ್ತಿನಾದ್ಯಂತ ಪಸರಿಸಿತು.ಮಕ್ಕಳನ್ನು ಶಿಕ್ಷಿತರನ್ನಾಗಿ ಮಾಡಬೇಕೆನ್ನುವ ಹಂಬಲದಿಂದ ಅನೇಕ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣ ನೀಡಿದರು.ಇದರಿಂದಾಗಿ ವಿದ್ಯಾವಂತರ ಸಂಖ್ಯೆಯಲ್ಲಿ ಹೆಚ್ಚಳವಾಯಿತು.
ಯುವಕರಿಗಾಗಿ ಮಲ್ಲ ಆಖಾರಾವನ್ನು ಸ್ಥಾಪಿಸಿದರು.ಇದರಲ್ಲಿ ದೈಹಿಕ ಮತ್ತು ಅದ್ಯಾತ್ಮಿಕ ಭೋದನೆಗಳನ್ನು ನೀಡಲಾಗುತ್ತಿತ್ತು.ಗುರುನಾನಕರ ಪವಾಡಗಳನ್ನು ಸಂಗ್ರಹಿಸಿ ಅವರ ಜೀವನ ಚರಿತ್ರೆಯನ್ನು ಬರೆದರು.ತಮ್ಮ ಜೀವಿತಾವಧಿಯಲ್ಲಿ 63 ಶ್ಲೋಕಗಳನ್ನು ಬರೆದಿದ್ದು, ಅವುಗಳನ್ನು ಗುರು ಗ್ರಂಥ ಸಾಹೀಬ್ ಗ್ರಂಥದಲ್ಲಿ ಸೇರಿಸಲಾಗಿದೆ. ಗುರುನಾನಕರು ಸ್ಥಾಪಿಸಿದ "ಗುರು ಕಾ ಲಂಗರ್" ಸಂಸ್ಥೆಯನ್ನು ಜನಪ್ರಿಯಗೊಳಿಸಿದ್ದಲ್ಲದೇ ವಿಸ್ತರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು.