Select Your Language

Notifications

webdunia
webdunia
webdunia
webdunia

ಮಹಾ ಶಿವರಾತ್ರಿ : ಶಿವನನ್ನು ಸಂತ್ರಪ್ತಿಗೊಳಿಸಲು ಏನನ್ನು ಅರ್ಪಿಸಬೇಕು ? ಗೊತ್ತಾ ನಿಮಗೆ

ಮಹಾ ಶಿವರಾತ್ರಿ : ಶಿವನನ್ನು ಸಂತ್ರಪ್ತಿಗೊಳಿಸಲು ಏನನ್ನು ಅರ್ಪಿಸಬೇಕು ? ಗೊತ್ತಾ ನಿಮಗೆ
ಬೆಂಗಳೂರು , ಗುರುವಾರ, 9 ಫೆಬ್ರವರಿ 2017 (18:40 IST)
* ಮಹಾ ಶಿವರಾತ್ರಿ ದಿನದಂದು ಶಿವನಿಗೆ ಯಾವ ರೀತಿ ಪೂಜೆ ಸಲ್ಲಿಸಿದ್ದರೆ, ಯಾವ ರೀತಿ ಫಲಗಳು ಸಿಗುತ್ತವೆ ಎಂದು ತಿಳಿದುಕೊಳ್ಳೊಣ ಬನ್ನಿ. 
 
ಮಹಾಶಿವರಾತ್ರಿ ಹಿಂದುಗಳ ಪವಿತ್ರ ಹಬ್ಬವಾಗಿದೆ. ಈ ದಿನ ಶಿವ ಪಾರ್ವತಿಯ ಪೂಜೆ ನಡೆಯುತ್ತದೆ , ಈ ಪುಜೆಯಿಂದ ಶಿವನು ಭಕ್ತ ಬೇಡಿದ್ದನ್ನು ಶಿವನು ನೀಡುತ್ತಾನೆ ಎಂದು ನಂಬಲಾಗುತ್ತದೆ. ಈ ದಿನದಂದು ಮನಸ್ಸಿನ ಇಚ್ಛೆಗಳು ಈಡೇರುತ್ತದೆ. 
 
ಭಕ್ತ ತಮ್ಮ ಮನಸಿನ್ನ ಕಾಮನೆಗಳಿಗಾಗಿ ಶಿವನನ್ನು ಪೂಜಿಸುತ್ತಾರೆ. ಈ ರೀತಿ ವಿಶೇಷ ಪೂಜೆ ಮಾಡುವುದರಿಂದ ಮನಸ್ಸಿನ ಬೇಡಿಕೆಗಳೆಲ್ಲವನ್ನು ಶಿವನು ನೀಡುತ್ತಾನೆ . ಶಿವನಿಗೆ ನಾವು ವಿವಿಧ ವಸ್ತುಗಳನ್ನು ಕೂಡ ಅರ್ಪಿಸಬೇಕಾಗುತ್ತದೆ , ಇದರಿಂದ ಶಿವನು ಬೇಗನೇ ಒಲಿಯುತ್ತಾನೆ ಎಂದು ನಂಬಲಾಗುತ್ತದೆ. 
 
* ಮಹಾಶಿವರಾತ್ರಿಯಮದು ಶಿವಲಿಂಗ ಮಂದಿರದಲ್ಲಿ ಶಿವನಿಗೆ ಆಕಳಿನ ಹಸಿ ಹಾಲಿನಿಂದ ಅಭಿಷೇಕ ಮಾಡಿದರೆ ವಿಧ್ಯೆ ಪ್ರಾಪ್ತವಾಗುತ್ತದೆ. 
 
* ಶಿವನಿಗೆ ಕಬ್ಬಿನ ರಸದಿಂದ ಅಭಿಷೇಕ ಮಾಡುವುದರಿಂದ ಧನ ಪ್ರಾಪ್ತವಾಗುತ್ತದೆ. 
 
* ಶಿವನಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೆ ಮನಸಿನ್ನ ಎಲ್ಲ ಇಚ್ಛೆಗಳು ಪೂರ್ಣವಾಗುತ್ತವೆ.
 
* ಭಗವಾನ ಶಿವನಿಗೆ ಬಿಲ್ವ ಪತ್ರೆ , ಅಕ್ಷತೆ , ಹಾಲು, ಹಣ್ಣುಗಳು ಮತ್ತು ಹೂಗಳು ಅರ್ಪಿಸಬೇಕು ಇದರಿಂದ ಶಿವನಯ ಒಲಿಯುತ್ತಾನೆ ಎಂದು ನಂಬಲಾಗುತ್ತದೆ.
 
ಮಹಾ ಶಿವರಾತ್ರಿಯಂದು ಶಿವನನ್ನು ಆರಾಧಿಸಿದರೆ ಮನಸ್ಸಿನ ಎಲ್ಲ ಮನೋಕಾಮನೆಗಳು ಪುರ್ತಿಯಾಗುತ್ತವೆ. ಇಂದಿನ ದಿನ ಶಿವನಿಗೆ ಬಿಲ್ವ ಪತ್ರೆ ಮತ್ತು ಹೂವನ್ನು ಅರ್ಪಿಸಬೇಕಾಗುತ್ತದೆ. 
 
ತಟ್ಟೆಯಲ್ಲಿ ಕುಂಕುಮ, ಅರಸಿಣ, ಗುಲಾಲ, ಅಕ್ಷತೆ , ಪವಿತ್ರ ದಾರವನ್ನು ಮತ್ತು ಇದರ ಜೊತೆಗೆ ಅಷ್ಟಗಂಧ ಇಡಬೇಕು. ಶಿವ ಪಂಚಾಕ್ಷರಿ ಮಂತ್ರ ವಾದ ಓಂ ನಮಃ ಶಿವಾಯ ಎನ್ನುವ ಮಂತ್ರ ಪಠಿಸುವುದರ ಮೂಲಕ ಶಿವನಿಗೆ ಪಂಚಾಮೃತದ ಅಭಿಷೇಕ ಮಾಡಬೇಕು. ಕುಂಕುಮ ಮತ್ತು ಇತರ ವಸ್ತುಗಳು ಶಿವನಿಗೆ ಅರ್ಪಿಸಿ . ನಂಬಿಕೆ ಪ್ರಕಾರ ಶಿವನಿಗೆ ನೈವಿಧ್ಯವನ್ನು ಅರ್ಪಿಸಬೇಕು . 
 
ಪೂಜೆಯಲ್ಲಿ ಎಕ್ಕಿಯ ಹೂ , ದತ್ತೂರಿ ಹಣ್ಣು , ಪುಷ್ಫ ಇತ್ಯಾದಿ ಶಿವನಿಗೆ ಅರ್ಪಿಸಿ ಶಿವನಿಗೆ ಪೂಜೆಯನ್ನು ಸಲ್ಲಿಸಿ. ಬೆಳ್ಳಿಗ್ಗೆಯಿಂದ ಉಪವಾಸವಿದ್ದು ಸಂಜೆಯ ಹೊತ್ತಿಗೆ ಶಿವನೀಗೆ ಪೂಜೆಯನ್ನು ಮಾಡಿ ಸಂಜೆಯ ಹೊತ್ತಿಗೆ ಪ್ರಸಾದ ಸ್ವಿಕರಿಸಿ , ರಾತ್ರಿ ಶಿವನ ಹಾಡು ಹಾಡುತ್ತ, ಶಿವಮಹಾ ಪುರಾಣದ ಕಥೆಯನ್ನು ಕೇಳುತ್ತ ಅಥವಾ ಪಠಿಸುತ್ತ ಜಾಗರಣೆ ಮಾಡಿದರೆ ಶಿವನು ಓಲಿಯುತ್ತಾನೆ ಎಂದು ಪುರಾಣಗಳಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗವಿಗಂಧಾಧರನಿಗೆ ಸೂರ್ಯ ರಶ್ಮಿ ಸ್ಪರ್ಶ