ದುರ್ಬಲ ಏಷಿಯಾದ ಶೇರು ಮಾರುಕಟ್ಟೆ ಮತ್ತು ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆಯ ಕಾರಣ ಪ್ರಾರಂಭಿಕ ವಹಿವಾಟಿನಲ್ಲಿ ಮುಂಬೈ ಶೇರು ಪೇಟೆಯು ಸಾಕಷ್ಟು ನಷ್ಟಕ್ಕೆ ಒಳಗಾದರೂ ದಿನದ ವಹಿವಾಟಿನಲ್ಲಿ ಚೇತರಿಸಿಕೊಂಡು 17,230.20ಕ್ಕೆ ತಲುಪಿತು.
ಬ್ಯಾಂಕಿಂಗ್, ರಿಯಲ್ ಎಸ್ಟೇಟ್ ಶೇರುಗಳ ಲಾಭಾಂಶವನ್ನು ಹೂಡಿಕೆದಾರರು ಇಂದು ಹಿಂದೆ ಪಡೆದಿದ್ದರೂ ಕೂಡ ಶೇರು ಮಾರುಕಟ್ಟೆ ಉತ್ಸಾಹಕರವಾಗಿತ್ತು. ದಿನದ ಪ್ರಾರಂಭದಲ್ಲಿ 205 ಅಂಶಗಳ ನಷ್ಟವನ್ನು ದಾಖಲಿಸಿದ್ದ ಸೆನ್ಸೆಕ್ಸ್ ನಂತರದ ಅವಧಿಯಲ್ಲಿ ನೂರು ಅಂಶಗಳ ಗಳಿಕೆಯನ್ನು ಕಂಡಿತು. ನಿಫ್ಟಿ ಸಂವೇದಿ ಸೂಚ್ಯಂಕವು 53 ಅಂಶಗಳ ನಷ್ಟವನ್ನು ಅನುಭವಿಸಿ 5105ಕ್ಕೆ ವಹಿವಾಟು ಸ್ಥಗಿತಗೊಳಿಸಿತು.
ಬುಧವಾರ ಪ್ರಾರಂಭಿಕ ವಹಿವಾಟನ್ನು 5100-5090ರ ನಡುವೆ ನಡೆಸಬಹುದು. ಒಂದು ಪಕ್ಷ ನಿಫ್ಟಿ 5115ರ ಮೇಲೆ ಸಾಗಿದಲ್ಲಿ ಶೇರು ಮಾರುಕಟ್ಟೆಯಲ್ಲಿ ಖರೀದಿ ಪ್ರಕ್ರಿಯೆಗೆ ಚುರುಕಾಗಬಹುದು. ಖರೀದಿ ಪ್ರಕ್ರಿಯೆ ಚುರುಕುಗೊಂಡಲ್ಲಿ ನಿಫ್ಟಿ ದಿನದ ವ್ಯವಹಾರದ ನಂತರ 5140-5165ಕ್ಕೆ ಸ್ಥಗಿತಗೊಳ್ಳಬಹುದು.
ಬುಧವಾರದ ಶೇರು ವ್ಯವಹಾರದಲ್ಲಿ ಆಡ್ ಲ್ಯಾಬ್ಸ್, ಸಿಪ್ಲಾ, ಸುಜ್ಲಾನ್, ಭಾರತ್ ಫೋರ್ಜ್, ಎಚ್‌ಡಿಐಎಲ್, ಜಿಂದಾಲ್ ಸ್ಟೀಲ್ ಆಂಡ್ ಪವರ್ ಶೇರುಗಳ ಮೇಲೆ ಗಮನ ಕೇಂದ್ರಿಕರಿಸಬಹುದು.