Select Your Language

Notifications

webdunia
webdunia
webdunia
webdunia

ಗಳಿಕೆ ಉಳಿಸಿಕೊಳ್ಳಲಾಗದ ಶೇರು ಪೇಟೆ

ನಿಫ್ಟಿ

ರಾಜೇಶ್ ಪಾಲವೀಯಾ

ಜಾಗತಿಕ ಶೇರು ಮಾರುಕಟ್ಟೆಯಲ್ಲಿ ಕಂಡ ಬಂದ ಚುರುಕಿನ ವಹಿವಾಟಿನ ಮೇಲೆ ತನ್ನ ವಹಿವಾಟನ್ನು ದಿನದ ಪ್ರಾರಂಭದಲ್ಲಿ ಉತ್ತೇಜಕರವಾಗಿ ಆರಂಭಿಸಿದ ಮುಂಬೈ ಶೇರು ವಿನಿಮಯ ಕೇಂದ್ರವು 17 ಸಾವಿರ ಗಡಿಯನ್ನು ದಾಟಿತು.

ಆದರೆ ದಿನದ ಶೇರು ವ್ಯವಹಾರದಲ್ಲಿ ಪ್ರಾರಂಭಿಕ ಗಳಿಕೆಯನ್ನು ಉಳಿಸಿಕೊಳ್ಳಲಾಗದೆ ಸಂವೇದಿ ಸೂಚ್ಯಂಕವು ನಷ್ಟದಲ್ಲಿ ಸಾಗಿತು. ನಿಫ್ಟಿ ಪುನಃ ಐದು ಸಾವಿರದ ಕೆಳಗೆ ವಹಿವಾಟು ಅಂತ್ಯಗೊಳಿಸಿತು.

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅನುಭವಿಸಿರುವ ನಷ್ಟದಲ್ಲಿ ಶೇ 57ರಷ್ಟನ್ನು ಹಂಚಿಕೊಳ್ಳಲು ಸಿದ್ದವಿಲ್ಲ ಎಂದು ಕೇಂದ್ರ ಹಣಕಾಸು ಇಲಾಖೆಯು ಸ್ಪಷ್ಟ ಪಡಿಸಿದ ನಂತರ ಶೇರು ಮಾರುಕಟ್ಟೆಯಲ್ಲಿ ತೈಲ ನಿಗಮ ಕಂಪನಿಗಳು ಶೇರುಗಳ ಮೌಲ್ಯವು ತಕ್ಷಣ ಕುಸಿತ ದಾಖಲಿಸಲು ಆರಂಭಿಸಿತು. ಇದು ಅಲ್ಲದೇ ಸರಕಾರ ತೈಲ ಬೆಲೆಯ ಹೆಚ್ಚಳ ಸದ್ಯಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಮತ್ತಷ್ಟು ಗೊಂದಲದ ವಾತಾವರಣವನ್ನು ಹುಟ್ಟು ಹಾಕಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಳೆದ ಒಂದು ವಾರದಿಂದ ಎರುತ್ತಿದೆ.

ಬುಧವಾರ ಶೇರು ಮಾರುಕಟ್ಟೆಯು ನಷ್ಟದಲ್ಲಿ ವಹಿವಾಟು ಪ್ರಾರಂಭಿಸುವ ಲಕ್ಷಣಗಳು ಇದ್ದು, ನಿಫ್ಟಿ 20-30 ಅಂಶಗಳ ನಷ್ಟ ದಾಖಲಿಸಬಹುದು. ಮಂಗಳವಾರದ ವಹಿವಾಟಿನಲ್ಲಿ ನಿಫ್ಟಿ 4930-4940ಗಳ ನಡುವೆ ವಹಿವಾಟು ನಡೆಸಿದೆ. ಒಂದು ಪಕ್ಷ ನಿಫ್ಟಿ ಸಂವೇದಿ ಸೂಚ್ಯಂಕವು 4955ಕ್ಕೆ ಸ್ಥಿರಗೊಂಡಲ್ಲಿ ಶೇರುಗಳ ಮಾರಾಟ ಭರದಿಂದ ಸಾಗಬಹುದು. ನಿಫ್ಟಿ ಸಂವೇದಿ ಸೂಚ್ಯಂಕವು 4985/5015/5040ಗೆ ಇದ್ದಲ್ಲಿ ಪ್ರತಿರೋಧ ವ್ಯಕ್ತಪಡಿಸಬಹುದು.

Share this Story:

Follow Webdunia kannada