Select Your Language

Notifications

webdunia
webdunia
webdunia
webdunia

ಅಮೆರಿಕ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳ ನಿರೀಕ್ಷೆ: ಚೇತರಿಕೆ ಕಂಡ ಶೇರುಪೇಟೆ

ಅಮೆರಿಕ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಳ ನಿರೀಕ್ಷೆ: ಚೇತರಿಕೆ ಕಂಡ ಶೇರುಪೇಟೆ
ಮುಂಬೈ , ಗುರುವಾರ, 18 ಆಗಸ್ಟ್ 2016 (20:00 IST)
ಶೇರುಪೇಟೆಯ ಸೂಚ್ಯಂಕ ಸತತ ಮೂರು ದಿನಗಳ ಕುಸಿತದ ನಂತರ ಅಮೆರಿಕದ ರಿಸರ್ವ್ ಬ್ಯಾಂಕ್ ರೆಪೋ ದರಗಳಲ್ಲಿ ಹೆಚ್ಚಳಗೊಳಿಸುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಇಂದಿನ ವಹಿವಾಟಿನ ಮುಕ್ತಾಯಕ್ಕೆ 118 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 147.03 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ 118.07 ಪಾಯಿಂಟ್‌ಗಳ ಕುಸಿತ ಕಂಡು 28,214.17 ಅಂಕಗಳಿಗೆ ತಲುಪಿದೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 49.20 ಪಾಯಿಂಟ್‌ಗಳ ಕುಸಿತ ಕಂಡು 8,673.25 ಅಂಕಗಳಿಗೆ ತಲುಪಿದೆ.
 
ಏಷ್ಯಾ ಮಾರುಕಟ್ಟೆಗಳಾದ ಹಾಂಗ್‌ಕಾಂಗ್‌, ದಕ್ಷಿಣ ಕೊರಿಯಾ ಮತ್ತು ತೈವಾನ್ ಶೇರುಪೇಟೆಗಳು ವಹಿವಾಟಿನ ಮುಕ್ತಾಯಕ್ಕೆ ಶೇ.0.05 ರಿಂದ ಶೇ.0.98 ರಷ್ಟು ಚೇತರಿಕೆ ಕಂಡಿದ್ದರೆ, ಚೀನಾ,ಜಪಾನ್ ಮತ್ತು ಸಿಂಗಾಪೂರ್ ಶೇರುಪೇಟೆಗಳು ಶೇ.0.17 ರಿಂದ ಶೇ.1.55 ರಷ್ಟು ಕುಸಿತ ಕಂಡಿದೆ.
 
ಯುರೋಪ್ ಶೇರುಪೇಟೆಗಳಾದ ಫ್ರಾನ್ಸ್, ಜರ್ಮನಿ ಮತ್ತು ಯುಕೆ ಶೇರುಪೇಟೆಗಳು ಶೇ.0.20 ರಿಂದ ಶೇ.0.55 ರಷ್ಟು ಚೇತರಿಕೆ ಕಂಡಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಉಗ್ರ ಹಫೀಜ್ ಸಯೀದ್ ಇಸ್ಲಾಂ ವಿರೋಧಿ: ಫತ್ವಾ ಹೊರಡಿಸಿದ ಇಸ್ಲಾಮಿಕ್ ಸೆಮಿನರಿ