Publish Date: Mon, 20 Jun 2016 (18:10 IST)
Updated Date: Mon, 20 Jun 2016 (18:11 IST)
ಕೇಂದ್ರ ಸರಕಾರ ವಿದೇಶಿ ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಸುಧಾರಣಾ ನೀತಿಗಳನ್ನು ಘೋಷಿಸಿದ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 241 ಪಾಯಿಂಟ್ಗಳ ಏರಿಕೆ ಕಂಡಿದೆ.
ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 437 ಪಾಯಿಂಟ್ಗಳ ಚೇತರಿಕೆ ಕಂಡಿದ್ದ ಬಿಎಸ್ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 241.01 ಪಾಯಿಂಟ್ಗಳ ಏರಿಕೆ ಕಂಡು 26,866.92 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 68.30 ಪಾಯಿಂಟ್ಗಳ ಏರಿಕೆ ಕಂಡು 8,238.50 ಅಂಶಗಳಿಗೆ ತಲುಪಿದೆ.
ಎಫ್ಎಂಸಿಜಿ ಹೊರತುಪಡಿಸಿ ಐಟಿ, ತಂತ್ರಜ್ಞಾನ, ವಾಹನೋದ್ಯಮ, ಉಕ್ಕು ಮತ್ತು ಬಂಡವಾಳ ವಸ್ತುಗಳ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ