Select Your Language

Notifications

webdunia
webdunia
webdunia
webdunia

7ನೇ ವೇತನ ಶಿಫಾರಸ್ಸು, ಜಿಎಸ್‌ಟಿ ನಿರೀಕ್ಷೆ: ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ

7ನೇ ವೇತನ ಶಿಫಾರಸ್ಸು, ಜಿಎಸ್‌ಟಿ ನಿರೀಕ್ಷೆ: ಚೇತರಿಕೆ ಕಂಡ ಶೇರುಸಂವೇದಿ ಸೂಚ್ಯಂಕ
ಮುಂಬೈ , ಬುಧವಾರ, 29 ಜೂನ್ 2016 (20:10 IST)
7ನೇ ವೇತನ ಶಿಫಾರಸ್ಸು ಜಾರಿ ಮತ್ತು ಮುಂಗಾರು ಅಧಿವೇಶನದಲ್ಲಿ ಜಿಎಸ್‌ಟಿ ಮಸೂದೆ ಜಾರಿಯಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 216 ಪಾಯಿಂಟ್‌ಗಳ ಏರಿಕೆ ಕಂಡಿದೆ. 
 
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 215.84 ಪಾಯಿಂಟ್‌ಗಳ ಏರಿಕೆ ಕಂಡು 26,740.39 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 76.15 ಪಾಯಿಂಟ್‌ಗಳ ಏರಿಕೆ ಕಂಡು  8,204.00 ಅಂಕಗಳಿಗೆ ತಲುಪಿದೆ.
 
ಹೀರೋ ಮೋಟಾರ್ಸ್, ಬಜಾಜ್ ಅಟೋ, ಎಂಆಂಡ್‌ಎಂ, ಮಾರುತಿ ಸುಜುಕಿ ಮತ್ತು ಟಾಟಾ ಮೋಟಾರ್ಸ್ ಸೇರುಗಳು ವಹಿವಾಟಿನಲ್ಲಿ ಶೇ.1.53 ರಷ್ಟು ಚೇತರಿಕೆ ಕಂಡಿವೆ.
 
ಜಪಾನ್‌ನ ನಿಕೈ ಶೂಚ್ಯಂಕ ಶೇ.1.59 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.1.31 ರಷ್ಟು ಏರಿಕೆ ಕಂಡಿದೆ. ಶಾಂಘೈ ಸೂಚ್ಯಂಕ ಶೇ.0.65 ರಷ್ಟು ಏರಿಕೆ ಕಂಡಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಿಲ್ಲಾ ಪ್ರಭಾರಿಗಳ ಪಟ್ಟಿ ಬಿಡುಗಡೆಗೊಳಿಸಿದ ಯಡಿಯೂರಪ್ಪ