Publish Date: Tue, 26 Apr 2016 (18:56 IST)
Updated Date: Tue, 26 Apr 2016 (18:59 IST)
ಜಾಗತಿಕ ಮಾರುಕಟ್ಟೆಗಳ ಸ್ಥಿರವಹಿವಾಟಿನಿಂದಾಗಿ ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ ಎರಡು ತಿಂಗಳ ಗರಿಷ್ಠ 234.75 ಪಾಯಿಂಟ್‌ಗಳ ಏರಿಕೆ ಕಂಡಿದೆ.
ತೈಲ ಮತ್ತು ಅನಿಲ, ಐಟಿ, ತಂತ್ರಜ್ಞಾನ, ಬಂಡವಾಳ ವಸ್ತುಗಳು, ಎಫ್‌ಎಂಸಿಜಿ ಮತ್ತು ಉಕ್ಕು ಶೇರುಗಳು ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿದ್ದರೆ, ಹೆಲ್ತ್‌ಕೇರ್, ಗೃಹೋಪಕರಣ ವಸ್ತುಗಳ ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಕುಸಿತ ಕಂಡಿವೆ.
ಕಳೆದ ಮೂರು ವಾರಗಳ ವಹಿವಾಟಿನಲ್ಲಿ 199844 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 234.75 ಪಾಯಿಂಟ್‌ಗಳ ಏರಿಕೆ ಕಂಡು 24,801.70 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 94.15 ಪಾಯಿಂಟ್‌ಗಳ ಚೇತರಿಕೆ ಕಂಡು 7,604.35 ಅಂಕಗಳಿಗೆ ತಲುಪಿದೆ.