Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: ಸತತ ನಾಲ್ಕನೇ ದಿನವೂ ಚೇತರಿಕೆ ಕಂಡ ಶೇರುಪೇಟೆ ಸೂಚ್ಯಂಕ

ಸೆನ್ಸೆಕ್ಸ್
ಮುಂಬೈ , ಗುರುವಾರ, 14 ಜುಲೈ 2016 (12:34 IST)
ಏಷ್ಯಾ ಮಾರುಕಟ್ಟೆಗಳ ಚೇತರಿಕೆಯ ವಹಿವಾಟಿನಿಂದಾಗಿ ಸತತ ನಾಲ್ಕನೇ ದಿನವೂ ಚೇತರಿಕೆ ಕಂಡಿದ್ದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 51 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಕಳೆದ ಮೂರು ದಿನಗಳ ವಹಿವಾಟಿನಲ್ಲಿ 688.28 ಪಾಯಿಂಟ್‌ಗಳ ಏರಿಕೆ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 50.93 ಪಾಯಿಂಟ್‌ಗಳ ಏರಿಕೆ ಕಂಡು 27,866.14 ಅಂಕಗಳಿಗೆ ತಲುಪಿದೆ.
 
ಗೃಹೋಪಕರಣ ವಸ್ತುಗಳು, ವಿದ್ಯುತ್, ಬಂಡವಾಳ ವಸ್ತುಗಳು, ಪಿಎಸ್‌ಯು, ಬ್ಯಾಂಕಿಂಗ್ ಮತ್ತು ಉಕ್ಕು ಕ್ಷೇತ್ರಗಳ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ. 
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 8520.10 ಅಂಕಗಳಿಗೆ ತಲುಪಿದೆ.
 
ಹಾಂಗ್‌ಕಾಂಗ್‌ನ  ಹಾಂಗ್‌ಸೆಂಗ್ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.14 ರಷ್ಟು ಏರಿಕೆ ಕಂಡಿದ್ದರೆ, ಜಪಾನ್‌ನ ನಿಕೈ ಸೂಚ್ಯಂಕ ಶೇ.0.76 ರಷ್ಟು ಏರಿಕೆ ಕಂಡಿದೆ. ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ಕೂಡಾ ಶೇ.0.13 ರಷ್ಟು ಏರಿಕೆ ಕಂಡಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೆ.ಎಸ್.ಈಶ್ವರಪ್ಪರನ್ನು ಸದನದಿಂದ ಹೊರಹಾಕಿ ಎಂದ ಸಿಎಂ ಸಿದ್ದರಾಮಯ್ಯ