ಭಾರತೀಯ ರಿಸರ್ವ್ ಬ್ಯಾಂಕ್ ನಾಳೆ ಆರ್ಥಿಕ ಪರಿಷ್ಕರಣಾ ಸಭೆ ನಡೆಸಲಿರುವುದರಿಂದ ಅನಿಶ್ಚತತೆಯ ವಾತಾವರಣ ಎದುರಾಗಿದೆ. ಹೂಡಿಕೆದಾರರು ಕೂಡಾ ಕಾದು ನೋಡುವ ತಂತ್ರ ಅನುಸರಿಸಿದ್ದರಿಂದ ಸೂಚ್ಯಂಕ 66 ಪಾಯಿಂಟ್‌ಗಳ ಅಲ್ಪ ಕುಸಿತ ಕಂಡಿದೆ.
ಮಾಹಿತಿ ತಂತ್ರಜ್ಞಾನ, ಗೃಹೋಪಕರಣ ವಸ್ತುಗಳು, ಹೆಲ್ತ್‌ಕೇರ್ ಮತ್ತು ತೈಲ ಹಾಗೂ ಅನಿಲ ಕ್ಷೇತ್ರಗಳ ಖರೀದಿಗೆ ಹೂಡಿಕೆದಾರರು ನಿರಾಸಕ್ತಿ ತೋರಿಸಿದ್ದರಿಂದ ಸೂಚ್ಯಂಕ ಕುಸಿತ ಕಂಡಿದೆ ಎಂದು ಮೂಲಗಳು ತಿಳಿಸಿವೆ.
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 65.58 ಪಾಯಿಂಟ್‌ಗಳ ಇಳಿಕೆ ಕಂಡು 26,777.45 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 19.75 ಪಾಯಿಂಟ್‌ಗಳ ಕುಸಿತ ಕಂಡು 8,201.05 ಅಂಕಗಳಿಗೆ ತಲುಪಿದೆ.
ಭಾರ್ತಿ ಏರ್‌ಟೆಲ್, ಲುಪಿನ್, ಮಾರುತಿ ಸುಜುಕಿ, ಸನ್‌ಫಾರ್ಮಾ, ಎಕ್ಸಿಸ್ ಬ್ಯಾಂಕ್, ಹಿರೋ ಮೋಟಾರ್ ಕಾರ್ಪೋರೇಶನ್ ಮತ್ತು ಕೋಲ್ ಇಂಡಿಯಾ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.
ಆದಾಗ್ಯೂ, ಟಾಟಾ ಮೋಟಾರ್ಸ್, ಮಹೀಂದ್ರಾ ಆಂಡ್ ಮಹೀಂದ್ರಾ, ಗೇಲ್, ಸಿಪ್ಲಾ, ಐಟಿಸಿ ಮತ್ತು ಬಿಎಚ್‌ಇಎಲ್ ಶೇರುಗಳು ವಹಿವಾಟಿನಲ್ಲಿ ಶೇ.1.51 ರಷ್ಟು ಏರಿಕೆಯಾಗಿದೆ.
ಜಪಾನ್‌ನ ನಿಕೈ ಸೂಚ್ಯಂಕ ಶೇ.0.37 ರಷ್ಟು ಕುಸಿತ ಕಂಡಿದ್ದರೆ, ಶಾಂಘೈ ಶೇರುಪೇಟೆ ಶೇ.0.16 ರಷ್ಟು ಇಳಿಕೆಯಾಗಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.40 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.