ಶೇರುಪೇಟೆಯ ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 11 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ.
ಬಿಎಸ್‌ಇ ಸೂಚ್ಯಂಕ ಇಂದಿನ ವಹಿವಾಟಿನ ಅಂತ್ಯಕ್ಕೆ 10.99 ಪಾಯಿಂಟ್‌ಗಳ ಏರಿಕೆ ಕಂಡು 27,085.24 ಅಂಕಗಳಿಗೆ ತಲುಪಿದೆ.
ರಾಷ್ಟೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ವಹಿವಾಟಿನ ಮುಕ್ತಾಯಕ್ಕೆ 6.60 ಪಾಯಿಂಟ್‌ಗಳ ಏರಿಕೆ ಕಂಡು 8,273.05 ಅಂಕಗಳಿಗೆ ತಲುಪಿದೆ.
ಐಟಿ, ತಂತ್ರಜ್ಞಾನ ಮತ್ತು ಹೆಲ್ತ್‌ಕೇರ್ ಕ್ಷೇತ್ರಗಳು ಸೇರಿದಂತೆ ವಿದ್ಯುತ್, ಬಂಡವಾಳ ವಸ್ತುಗಳು, ಪಿಎಸ್‌ಯು, ವಾಹನೋದ್ಯಮ, ರಿಯಲ್ಟಿ, ಗೃಹೋಪಕರಣ ವಸ್ತುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.93 ರಷ್ಟು ಚೇತರಿಕೆಯಾಗಿದೆ. ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.14 ರಷ್ಟು ಏರಿಕೆ ಕಂಡಿದೆ. ಆದರೆ, ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.30 ರಷ್ಟು ಕುಸಿತ ಕಂಡಿದೆ.
ಬಿಎಚ್‌ಇಎಲ್, ಎಲ್‌ಆಂಡ್‌ಟಿ, ಐಸಿಐಸಿಐ ಬ್ಯಾಂಕ್, ಹೀರೋ ಮೋಟಾರ್ ಕಾರ್ಪೋರೇಶನ್, ಒಎನ್‌ಜಿಸಿ, ಎಕ್ಸಿಸ್ ಬ್ಯಾಂಕ್, ಸಿಪ್ಲಾ, ವಿಪ್ರೋ, ಟಾಟಾ ಮೋಟಾರ್ಸ್, ಎಚ್‌ಡಿಎಫ್‌ಸಿ, ಮಾರುತಿ ಸುಜುಕಿ ಮತ್ತು ಎಸ್‌ಬಿಐ ಶೇರುಗಳು ವಹಿವಾಟಿನಲ್ಲಿ ಲಾಭದತ್ತ ಸಾಗಿವೆ.
ಇನ್ಫೋಸಿಸ್, ಏಷ್ಯನ್ ಪೇಂಟ್, ಎಚ್‌ಡಿಎಫ್‌ಸಿ ಬ್ಯಾಂಕ್, ಆದಾನಿ ಪೋರ್ಟ್ಸ್, ಟಿಸಿಎಸ್, ಕೋಲ್ ಇಂಡಿಯಾ, ಬಜಾಜ್ ಅಟೋ, ಟಾಟಾ ಸ್ಟೀಲ್, ಲುಪಿನ್ ಎನ್‌ಟಿಪಿಸಿ ಮತ್ತು ಗೇಲ್ ಶೇರುಗಳು ವಹಿವಾಟಿನಲ್ಲಿ ನಷ್ಟ ಅನುಭವಿಸಿವೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.