ಹೂಡಿಕೆದಾರರು ಕೆಲ ಆಯ್ದ ಬ್ಲ್ಯೂ-ಚಿಪ್ ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 99 ಪಾಯಿಂಟ್‌ಗಳ ಅಲ್ಪ ಚೇತರಿಕೆ ಕಂಡಿದೆ.
ಏಷ್ಯಾ ಮಾರುಕಟ್ಟೆಯ ಚೇತರಿಕೆಯ ವಹಿವಾಟು ಕೂಡಾ ದೇಶಿಯ ಶೇರುಪೇಟೆಯ ಮೇಲೆ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕಳೆದ ಎರಡು ದಿನಗಳ ವಹಿವಾಟಿನ ಮುಕ್ತಾಯಕ್ಕೆ 379.89 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ 99 ಪಾಯಿಂಟ್‌ಗಳ ಏರಿಕೆ ಕಂಡು 25,498.95 ಅಂಕಗಳಿಗೆ ತಲುಪಿದೆ.
ಮಾಹಿತಿ ತಂತ್ರಜ್ಞಾನ, ಗೃಹೋಪಕರಣ ವಸ್ತುಗಳು, ಬಂಡವಾಳ ವಸ್ತುಗಳು, ತಂತ್ರಜ್ಞಾನ, ವಿದ್ಯುತ್, ವಾಹನೋದ್ಯಮ ಮತ್ತು ಬ್ಯಾಂಕಿಂಗ್ ಶೇರುಗಳು ವಹಿವಾಟಿನಲ್ಲಿ ಚೇತರಿಕೆ ಕಂಡಿವೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 27.70 ಪಾಯಿಂಟ್‌ಗಳ ಏರಿಕೆ ಕಂಡು 7,811.10 ಅಂಕಗಳಿಗೆ ತಲುಪಿದೆ.
ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಸೂಚ್ಯಂಕ ಶೇ.1.06 ರಷ್ಟು ಏರಿಕೆಯಾಗಿದ್ದರೆ, ಜಪಾನ್‌ನ ನಿಕೈ ಶೇರುಪೇಟೆ ಶೇ.0.24 ರಷ್ಟು ಏರಿಕೆಯಾಗಿದೆ. ಚೀನಾದ ಶಾಂಘೈ ಶೇರುಪೇಟೆ ಕೂಡಾ ಶೇ.0.10 ರಷ್ಟು ಏರಿಕೆ ಕಂಡಿದೆ.
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.52 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.