Select Your Language

Notifications

webdunia
webdunia
webdunia
webdunia

ಸೆನ್ಸೆಕ್ಸ್: ಜಿಎಸ್‌ಟಿ ಅಂಗೀಕಾರ ನಿರೀಕ್ಷೆಯಿಂದ ಶೇರುಪೇಟೆ ಚೇತರಿಕೆ

ಸೆನ್ಸೆಕ್ಸ್: ಜಿಎಸ್‌ಟಿ ಅಂಗೀಕಾರ ನಿರೀಕ್ಷೆಯಿಂದ ಶೇರುಪೇಟೆ ಚೇತರಿಕೆ
ಮುಂಬೈ , ಮಂಗಳವಾರ, 19 ಜುಲೈ 2016 (12:01 IST)
ಜಾಗತಿಕ ಮಾರುಕಟ್ಟೆಗಳ ಮಿಶ್ರವಹಿವಾಟಿನ ಮಧ್ಯೆಯೂ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರವಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಹೂಡಿಕೆದಾರರು ಶೇರುಗಳ ಖರೀದಿಗೆ ಆಸಕ್ತಿ ತೋರಿದ್ದರಿಂದ ಶೇರುಪೇಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 58 ಪಾಯಿಂಟ್‌ಗಳ ಏರಿಕೆ ಕಂಡಿದೆ.
 
ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 58.07 ಪಾಯಿಂಟ್‌ಗಳ ಏರಿಕೆ ಕಂಡು 27,804.73 ಅಂಕಗಳಿಗೆ ತಲುಪಿದೆ.
 
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ ಇಂದಿನ ಆರಂಭಿಕ ವಹಿವಾಟಿನಲ್ಲಿ 17.25 ಪಾಯಿಂಟ್‌ಗಳ ಏರಿಕೆ ಕಂಡು  8,525.95 ಅಂಕಗಳಿಗೆ ತಲುಪಿದೆ.
 
ಅಮೆರಿಕ ಶೇರುಪೇಟೆ ಚೇತರಿಕೆಯ ವಹಿವಾಟು ಮತ್ತು ಏಷ್ಯಾ ಮಾರುಕಟ್ಟೆಗಳ ಮಿಶ್ರ ವಹಿವಾಟು ಹಾಗೂ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರವಾಗುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಶೇರುಪೇಟೆ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
  
ಜಪಾನ್‌ನ ನಿಕೈ ಶೇರುಪೇಟೆ ಸೂಚ್ಯಂಕ ಶೇ.0.47 ರಷ್ಟು ಏರಿಕೆ ಕಂಡಿದ್ದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.63 ರಷ್ಟು ಏರಿಕೆ ಕಂಡಿದೆ. ಶಾಂಘೈ ಶೇರುಪೇಟೆ ಸೂಚ್ಯಂಕ ಶೇ.0.57 ರಷ್ಟು ಕುಸಿತ ಕಂಡಿದೆ.
 
ಅಮೆರಿಕದ ಡೊ ಜೊನ್ಸ್ ಶೇರುಪೇಟೆ ಸೂಚ್ಯಂಕ ನಿನ್ನೆಯ ವಹಿವಾಟಿನ ಮುಕ್ತಾಯಕ್ಕೆ ಶೇ.0.09 ರಷ್ಟು ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ