ಹಣದುಬ್ಬರದ ಎಫೆಕ್ಟ್:ಶೇರುಸೂಚ್ಯಂಕ 75 ಪಾಯಿಂಟ್ಸ್ ಕುಸಿತ
ಶೇರುಪೇಟೆಯಲ್ಲಿ ಹೂಡಿಕೆದಾರರು ಲಾಭದಾಯಕ ವಹಿವಾಟಿಗೆ ಮೊರೆಹೋಗಿದ್ದರಿಂದ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 75 ಪಾಯಿಂಟ್‌ಗಳ ಕುಸಿತ ಕಂಡಿದೆ.ಹಿಂದಿನ ವಹಿವಾಟಿನ ಮುಕ್ತಾಯಕ್ಕೆ 129.57 ಪಾಯಿಂಟ್‌ಗಳ ಕುಸಿತ ಕಂಡಿದ್ದ ಬಿಎಸ್ಇ ಸೂಚ್ಯಂಕ, ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ 74.52 ಪಾಯಿಂಟ್‌ಗಳ ಇಳಿಕೆ ಕಂಡು 18,600.66 ಅಂಕಗಳಿಗೆ ತಲುಪಿದೆ.ಅದರಂತೆ ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡ ಇಂದಿನ ವಹಿವಾಟಿನಲ್ಲಿ 25 ಪಾಯಿಂಟ್ಸ್‌ಗಳ ಕುಸಿತ ಕಂಡು 5,541.05 ಅಂಕಗಳಿಗೆ ತಲುಪಿದೆ.ಏತನ್ಮಧ್ಯೆ, ಜಪಾನ್‌ನ ನಿಕೈ ಮಾರುಕಟ್ಟೆ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಶೇ.0.44ರಷ್ಟು ಏರಿಕೆ ಕಂಡಿದೆ. ಆದರೆ, ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಸೂಚ್ಯಂಕ ಶೇ.0.67ರಷ್ಟು ಇಳಿಕೆ ಕಂಡಿದೆ.