Select Your Language

Notifications

webdunia
webdunia
webdunia
webdunia

ಶೇರು ಪೇಟೆ ಸಾವಿರ ಅಂಶದತ್ತ ಸೂಚ್ಯಂಕ

ಶೇರು ಪೇಟೆ

ರಾಜೇಶ್ ಪಾಲವೀಯಾ

ಮುಂಬೈ , ಮಂಗಳವಾರ, 25 ಮಾರ್ಚ್ 2008 (19:15 IST)
ಎರಡು ತಿಂಗಳ ನಂತರ ಮೊದಲ ಬಾರಿಗೆ ಮುಂಬೈ ಶೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕವು ಒಂದೇ ದಿನದ ಅವಧಿಯಲ್ಲಿ 928 ಅಂಶಗಳ ಭಾರಿ ಚೇತರಿಕೆ ದಾಖಲಿಸಿ 6,217.49ಕ್ಕೆ ತಲುಪಿ, ದಿನದ ಶೇರು ವಹಿವಾಟು ಅಂತ್ಯಗೊಳಿಸಿತು.

ದಿನದ ಪ್ರಾರಂಭಿಕ ವಹಿವಾಟನ್ನು ಶುಭಕರವಾಗಿ ಪ್ರಾರಂಭಿಸಿದ ಮುಂಬೈ ಶೇರು ವಿನಿಮಯ ಕೇಂದ್ರವು ಮಾಹಿತಿ ತಂತ್ರಜ್ಞಾನ ಬ್ಯಾಂಕಿಂಗ್ ಮತ್ತು ತೈಲ ಸಂಸ್ಕರಣಾ ವಲಯಗಳ ಶೇರುಗಳ ಮೌಲ್ಯದಲ್ಲಿ ಗಮನಾರ್ಹ ಹೆಚ್ಚಳ ವಹಿವಾಟಿನಲ್ಲಿ ಕಂಡುಬಂದಿತು.

ರಾಷ್ಟ್ರೀಯ ಶೇರು ವಿನಿಮಯ ಕೇಂದ್ರದ ನಿಫ್ಟಿಯು ದಿನದ ವಹಿವಾಟು ಪೂರ್ಣಗೊಳ್ಳುವ ಮುನ್ನವೇ 267. 65 ಅಂಶಗಳ ಏರಿಕೆ ದಾಖಲಿಸಿದ ನಂತರ ನಿಫ್ಟಿ ಸಂವೇದಿ ಸೂಚ್ಯಂಕವು 4877.50ಕ್ಕೆ ಎನ್ಎಸ್ಇ ಶೇರು ವ್ಯವಹಾರ ಸ್ಥಗಿತಗೊಂಡಿದೆ.

ಬುಧವಾರ ಶೇರು ಮಾರುಕಟ್ಟೆಯು ಚೇತರಿಕೆಯೊಂದಿಗೆ ವಹಿವಾಟು ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದ್ದು, ಪ್ರಾಥಮಿಕ ವಹಿವಾಟಿನಲ್ಲಿ ನಿಫ್ಟಿ 40-50 ಅಂಶಗಳ ಏರಿಕೆ ದಾಖಲಿಸಬಹುದು.

Share this Story:

Follow Webdunia kannada