Select Your Language

Notifications

webdunia
webdunia
webdunia
webdunia

ನಷ್ಟದಲ್ಲಿ ಅಂತ್ಯಗೊಂಡ ಶೇರು ವ್ಯವಹಾರ

ನಷ್ಟದಲ್ಲಿ ಅಂತ್ಯಗೊಂಡ ಶೇರು ವ್ಯವಹಾರ

ರಾಜೇಶ್ ಪಾಲವೀಯಾ

ಮುಂಬೈ , ಬುಧವಾರ, 27 ಫೆಬ್ರವರಿ 2008 (19:49 IST)
ದಿನದ ಪ್ರಾರಂಭದಲ್ಲಿ ಚೇತರಿಕೆಯ ಶೇರು ವ್ಯವಹಾರ ದಾಖಲಿಸಿದ ಮುಂಬೈ ಶೇರು ವಿನಿಮಯ ಕೇಂದ್ರವು ಅದೇ ಚೇತರಿಕೆಯ ವಹಿವಾಟನ್ನು ದಿನದಲ್ಲಿ ಮುಂದುವರಿಸಿಕೊಳ್ಳಲಾಗದೆ ವ್ಯಾಪಾರವನ್ನು ನಷ್ಟದಲ್ಲಿ ಅಂತ್ಯಗೊಳಿಸಿತು.

20 ಅಂಶಗಳ ಏರಿಕೆಯೊಂದಿಗೆ 17,826ಕ್ಕೆ ತಲುಪಿದ ಸಂವೇದಿ ಸೂಚ್ಯಂಕವು ಒಟ್ಟಾರೆ 311 ಅಂಶಗಳ ನಷ್ಟವನ್ನು ದಾಖಲಿಸಿದ್ದು, ನಿಫ್ಟಿ 100 ಅಂಶಗಳ ನಷ್ಟದೊಂದಿಗೆ 5,268ಕ್ಕೆ ತಲುಪಿ ದಿನದ ವ್ಯವಹಾರವನ್ನು ಅಂತ್ಯಗೊಳಿಸಿತು.

ಇಂದಿನ ಶೇರು ವಹಿವಾಟಿನಲ್ಲಿ ಎಲ್&ಟಿ,ಮುಂದ್ರಾ ಪೋರ್ಟ್, ಟಾಟಾ ಪವರ್, ಐಆರ್‌ಬಿ, ಬಜಾಜ್ ಹಿಂದ್, ಆನ್‌ಮೊಬೈಲ್, ಎಲ್‌ಐಟಿಎಲ್, ಜೆ ಪಿ ಅಸೋಸಿಯೆಟ್ಸ್, ರಿಲೈಯನ್ಸ್ ಕ್ಯಾಪಿಟಲ್, ಪವರ್ ಗ್ರಿಡ್. ಟಾಟಾ ಕೆಮಿಕಲ್ಸ್ ಶೇರುಗಳು ಚುರುಕಿನ ವ್ಯವಹಾರ ನಡೆಸಿದವು.

ದಿ 29 ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿರುವ ಕಾರಣ ಮುಂಬೈ ಶೇರು ವಿನಿಮಯ ಕೇಂದ್ರದ ವಹಿವಾಟು ಅನಿಶ್ಚಿತತೆಯನ್ನು ಎದುರಿಸಬಹುದು. ಬಜೆಟ್ ಮುನ್ನ ಇರಬೇಕಾದ ವಾತಾವರಣ ಮುಂಬೈ ಶೇರು ವಿನಿಮಯ ಕೇಂದ್ರದಲ್ಲಿ ಕಂಡುಬರುತ್ತಿಲ್ಲ.

ತಾಂತ್ರಿಕ ದೃಷ್ಟಿಯಿಂದ ಗುರುವಾರದ ಶೇರು ವಹಿವಾಟು ಗಮನಿಸಿದಲ್ಲಿ ನಿಫ್ಟಿ 20-30 ಅಂಶಗಳ ನಷ್ಟ ಅನುಭವಿಸಬಹುದು.

Share this Story:

Follow Webdunia kannada