Select Your Language

Notifications

webdunia
webdunia
webdunia
webdunia

ಐದು ಸಾವಿರ ಗಡಿ ದಾಟಿದ ನಿಫ್ಟಿ ಸೂಚ್ಯಂಕ

ಐದು ಸಾವಿರ

ರಾಜೇಶ್ ಪಾಲವೀಯಾ

ಮುಂಬೈ , ಬುಧವಾರ, 14 ಮೇ 2008 (19:00 IST)
ಸಾಫ್ಟವೇರ್, ಲೋಹ ಉದ್ಯಮ, ಟೆಲಿಕಾಮ್, ಫಾರ್ಮಾ ಮತ್ತು ಅಟೊ ಮೊಬೈಲ್ ಕಂಪನಿಗಳ ಶೇರುಗಳ ವಹಿವಾಟು ಭರ್ಜರಿಯಾಗಿ ಸಾಗಿದ ಪರಿಣಾಮವಾಗಿ ನಿಫ್ಟಿ ಸಂವೇದಿ ಸೂಚ್ಯಂಕವು ಐದು ಸಾವಿರಗಳ ಗಡಿಯನ್ನು ಸುಲಭವಾಗಿ ದಾಟಿ ವ್ಯವಹಾರ ಅಂತ್ಯಗೊಳಿಸಿತು.

ಬಿಸ್ಇ-30 ಸೂಚ್ಯಂಕವು ಬುಧವಾರದ ವಹಿವಾಟಿನಲ್ಲಿ 17 ಸಾವಿರದ ಗಡಿಯನ್ನು ದಾಟಿ ವ್ಯವಹಾರ ಅಂತ್ಯಗೊಳಿಸಿದರೆ ನಿಫ್ಟಿ ಸೂಚ್ಯಂಕವು ವಹಿವಾಟು ಅಂತ್ಯಗೊಳ್ಳುವವರೆಗೂ ಉತ್ತರಾಭಿಮುಖವಾಗಿ ಸಾಗಿತ್ತು. ಸರಕಾರಿ ಸ್ವಾಮ್ಯದ ತೈಲ ನಿಗಮದ ಕಂಪನಿಗಳು 2007-08ರ ಹಣಕಾಸು ವರ್ಷದಲ್ಲಿ ಅನುಭವಿಸಿದ ನಷ್ಟದ ಶೇ 50ರಷ್ಟನ್ನು ಸರಕಾರವು ಬಾಂಡ್ ಮೂಲಕ ನೀಡಲು ತೀರ್ಮಾನಿಸಿದ ಕಾರಣ ಸಾರ್ವಜನಿಕ ವಲಯದ ಕಂಪನಿಗಳ ಶೇರುಗಳ ಮೌಲ್ಯವು ಇಳಿಕೆಯಾಯಿತು.

ಗುರುವಾರದಂದು ಶೇರು ಮಾರುಕಟ್ಟೆಯು ಎರು ಗತಿಯಲ್ಲಿ ಸಾಗಬಹುದು ಎಂದು ನಿರೀಕ್ಷಿಸಲಾಗಿದ್ದು, ನಿಫ್ಟಿ ಪ್ರಾರಂಭಿಕ ವಹಿವಾಟಿನಲ್ಲಿ 15-20 ಅಂಶಗಳ ಹೆಚ್ಚಳವನ್ನು ದಾಖಲಿಸಬಹುದು. ಪ್ರಾರಂಭಿಕ ಅವಧಿಯ ಸೂಚ್ಯಂಕದ ಹೆಚ್ಚಳವನ್ನು ನಿಫ್ಟಿ ಕಾಯ್ದುಕೊಳ್ಳುವಲ್ಲಿ ಸಫಲವಾದಲ್ಲಿ ದಿನದ ಮಧ್ಯಂತರ ವ್ಯವಹಾರದಲ್ಲಿ ನಿಫ್ಟಿ 5055-5080ರ ವರೆಗೆ ತಲುಪಬಹುದು.

ಒಂದು ಪಕ್ಷ ನಿಫ್ಟಿ 4990ರ ಕೆಳಗೆ ಇಳಿಮುಖವಾದಲ್ಲಿ ಬಂಡವಾಳ ಹೂಡಿಕೆದಾರರು ಲಾಭಾಂಶವನ್ನು ಮಾರುಕಟ್ಟೆಯಿಂದ ಹಿಂದೆಗೆದುಕೊಳ್ಳುವುದಕ್ಕೆ ವಿಚಾರ ಮಾಡಬಹುದು. ಇದು ನೇರವಾಗಿ ನಿಫ್ಟಿ ಸಂವೇದಿ ಸೂಚ್ಯಂಕವು ಕೆಳಮುಖವಾಗುವಂತೆ ಮಾಡಬಲ್ಲದು.

ಗುರುವಾರದ ಶೇರು ವಹಿವಾಟಿನಲ್ಲಿ ಪ್ರಾಜ್ ಇಂಡಸ್ಟ್ರೀಸ್, ಐಎಫ್‌ಸಿಐ, ಟಿಸ್ಕೊ, ರಿಲಯನ್ಸ್ ಕಮ್ಯುನಿಕೇಷನ್ಸ್, ಹಿಂಡಾಲ್ಕೊ ಶೇರುಗಳ ಮೇಲೆ ಗಮನ ಕೇಂದ್ರಿಕರಿಸಬಹುದು.

Share this Story:

Follow Webdunia kannada