ಸಂತಾ ವಿಮಾನದಲ್ಲಿ ಅಮೃತಸರಕ್ಕೆ ತೆರಳಬೇಕಾಗಿತ್ತು. ಈ ಕುರಿತಂತೆ ವಿಚಾರಣೆ ಮಾಡಲು ಏರ್ ಇಂಡಿಯಾ ಕಛೇರಿಗೆ ಫೋನಾಯಿಸಿದ. ಅತ್ತ ಕಡೆ ಫೋನನ್ನು ಸ್ವೀಕರಿಸಿದ ಹುಡುಗಿಯೊಬ್ಬಳಿಗೆ ಸಂತಾ 'ಇಲ್ಲಿಂದ ಅಮೃತಸರಕ್ಕೆ ತೆರಳಲು ಎಷ್ಟು ಸಮಯವಾಗುತ್ತದೆ' ಎಂದು ಕೇಳಿದ, ಆಗ ಅವಳು 'ಜಸ್ಟ್ ಎ ಸೆಕೆಂಡ್' ಎನ್ನುತ್ತಿದ್ದಂತೆ ಸಂತಾ ಫೋನನ್ನು ಇಟ್ಟುಬಿಟ್ಟ-- ಕೇವಲ ಒಂದೇ ಸೆಕೆಂಡು ಅಂದುಕೊಂಡು..!