Article Santa Banta Jokes %e0%b2%b5%e0%b3%88%e0%b2%b0%e0%b3%8d%e2%80%8c%e0%b2%b2%e0%b3%86%e0%b2%b8%e0%b3%8d 108092700013_1.htm

Select Your Language

Notifications

webdunia
webdunia
webdunia
webdunia

ವೈರ್‌ಲೆಸ್

ಹಾಸ್ಯ
WD
ಒಮ್ಮೆ ಸಂತಾಸಿಂಗ್ ಅಮೆರಿಕಕ್ಕೆ ಹೋದಾಗ, ಆತನ ಅಲ್ಲಿನ ಸ್ನೇಹಿತ ಅಮೆರಿಕದ ಬಗ್ಗೆ ಕೊಚ್ಚಿಕೊಳ್ಳಲು ಪ್ರಾರಂಭಿಸಿದ. ಅಮೆರಿಕದಲ್ಲಿ ತಂತ್ರಜ್ಞಾನ ಹೆಚ್ಚು ಬಳಕೆಯಾಗುತ್ತದೆ ಎಂದೆಲ್ಲಾ ಹೇಳಿ ಆತನನ್ನು ಒಂದು ಕಾಡಿಗೆ ಕರೆದುಕೊಂಡು ಹೋದ.

ಕಾಡಿನಲ್ಲಿ ಸಂತಾಸಿಂಗ್‌ಗೆ ಮಣ್ಣನ್ನು ಅಗೆಯಲು ಹೇಳಿದ. ಸುಮಾರು 100 ಅಡಿ ಅಗೆದಾಗ ಒಂದು ವಯರ್ ಸಿಕ್ಕಿತು. ಆಗ ಸಂತಾನ ಅಮೆರಿಕ ಗೆಳೆಯ ಹೇಳಿದ ನೋಡು, ಅಮೆರಿಕದಲ್ಲಿ 200 ವರ್ಷಗಳ ಹಿಂದೆಯೇ ಟೆಲಿಫೋನ್ ಸೌಲಭ್ಯವಿತ್ತು.

ನಂತರ ಸಂತಾಸಿಂಗ್ ಆತನನ್ನು ಭಾರತಕ್ಕೆ ಕರೆದುಕೊಂಡು ಬಂದು ಅವನು ಮಾಡಿದಂತೆಯೇ ಕಾಡಿಗೆ ಕರೆದುಕೊಂಡು ಹೋಗಿ ಮಣ್ಣನ್ನು ಅಗೆಸಿದ. ಆದರೆ, ಆತನಿಗೆ ಏನೂ ದೊರಕಲಿಲ್ಲ. ಸುಮಾರು 400 ಅಡಿ ಅಗೆದು ಸುಸ್ತಾದ ಅಮೆರಿಕ ಗೆಳೆಯನಿಗೆ ಸಂತಾ ಸಿಂಗ್ ಹೇಳಿದ. ಭಾರತದಲ್ಲಿ 400 ವರ್ಷಗಳ ಹಿಂದೆಯೇ ವೈರ್‌ಲೆಸ್ ಸೌಲಭ್ಯವಿತ್ತು!

Share this Story:

Follow Webdunia kannada