ಒಮ್ಮೆ ಲಂಡನ್‌ನಲ್ಲಿ ಪ್ರಖ್ಯಾತ ಕಳ್ಳನೊಬ್ಬ ಕಳ್ಳತನದ ಕುರಿತಾಗಿ ವಿಶೇಷ ತರಗತಿಯನ್ನು ನಡೆಸುತ್ತಿದ್ದ. ಅವನಿಂದ ತರಬೇತಿಯನ್ನು ಪಡೆಯಲು ವಿವಿಧ ದೇಶಗಳಿಂದ ಅನೇಕ ವಿದ್ಯಾರ್ಥಿಗಳು ಬಂದಿದ್ದರು. ಭಾರತದ ಪರವಾಗಿ ಸರ್ದಾರ್ಜಿ ಹೋಗಿದ್ದ.
ಆ ಮಾಸ್ಟರ್ ತುಂಬಾ ಹೊತ್ತು ಹೇಗೆ ಕಳ್ಳತನ ಮಾಡುವುದು ಎಂಬುದರ ಕುರಿತಾಗಿ ಪಾಠ ಮಾಡಿ, ಮುಂದಿನ ತರಗತಿಯಲ್ಲಿ ನಿಮಗೆ ಕಳ್ಳತನ ಮಾಡುವ ಕುರಿತು ಪ್ರಾಯೋಗಿಕವಾಗಿ ತರಬೇತಿ ನೀಡುತ್ತೇನೆ ಎಂದು ಹೇಳಿದ.
ಮರುದಿನ ರಾತ್ರಿ ಆ ಮಾಸ್ಟರ್ ಅವರನ್ನೆಲ್ಲ ಒಬ್ಬ ಶ್ರೀಮಂತನ ಮನೆಗೆ ಕರೆದುಕೊಂಡು ಹೋದ. ಆದರೆ ಅಕಸ್ಮತ್ತಾಗಿ ಆ ಮನೆಯ ಯಜಮಾನನಿಗೆ ಸದ್ದು ಕೇಳಿ ಯಾರದು ಎಂದು ಕೂಗಿದರು. ಆಗ ಈ ಮಾಸ್ಟರ್ ತನ್ನ ಬುದ್ಧಿ ಉಪಯೋಗಿಸಿ ಮಿಯಾಂ ಮಿಯಾಂ.... ಎಂದು ಕೂಗಿದ. ನಿಜವಾಗಿಯೂ ಬೆಕ್ಕು ಎಂದು ಎಣಿಸಿ ಯಜಮಾನನು ಹೋಗಿ ಮಲಗಿಕೊಂಡ.
ಈ ಪ್ರಾಯೋಗಿಕ ಪರೀಕ್ಷೆಯಿಂದ ಅತ್ಯಂತ ಪ್ರಭಾವಿತನಾದ ಸರ್ದಾರ್ಜಿಯು ಮರಳಿ ಭಾರತಕ್ಕೆ ಬಂದು ತನ್ನೂರಿಲ್ಲಿ ಇಂತಹುದೇ ಒಂದು ತರಬೇತಿ ಶಿಬಿರವನ್ನು ಪ್ರಾರಂಭಿಸಿದ.
ಇವನ ತರಗತಿಗೆ ಬಂದ ವಿದ್ಯಾರ್ಥಿಗಳಿಗೂ ಇದೇ ಪ್ರಯೋಗವನ್ನು ಮಾಡುವ ಸಲುವಾಗಿ ನಡುರಾತ್ರಿಯಲ್ಲಿ ಇವರನ್ನೆಲ್ಲಾ ಒಬ್ಬ ಶ್ರೀಮಂತ ಸರ್ದಾರ್ಜಿಯ ಮನೆಗೆ ಕರೆದುಕೊಂಡು ಹೋದ.
ದುರಾದೃಷ್ಟಕ್ಕೆ ಇಲ್ಲಿಯೂ ಮನೆಯ ಯಜಮಾನ ಸರ್ದಾರ್ಜಿಗೆ ಸದ್ದು ಕೇಳಿ 'ಕೌನ್ ಹೈ' ಅಂತ ಬೊಬ್ಬೆ ಹಾಕಿದ.
ಲಂಡನ್ ಮಾಸ್ಟರ್‌ನಿಂದ ಮೊದಲೇ ಪ್ರಭಾವಿತನಾಗಿದ್ದ ಸರ್ದಾರ್ಜಿ 'ಮೈ ಬಿಲ್ಲೀ ಹೂಂ' ಎಂದು ಕಿರುಚಿದ.
ಓಹ್ ಬಿಲ್ಲಿ..... ಎಂದು ಹೇಳಿದ ಆ ಶ್ರೀಮಂತ ಸರ್ದಾರ್ಜಿ ನೆಮ್ಮದಿಯಿಂದ ಮಲಗಲು ಹೋದ.