ತನ್ನ ಎರಡೂ ಕಿವಿಗಳನ್ನು ಸುಟ್ಟುಕೊಂಡು ಸಂತ ಡಾಕ್ಟರ್ ಬಳಿ ಹೋದ. ಅವನ ಅವಸ್ಥೆ ನೋಡಿದ ಡಾಕ್ಟರ್ ಯಾಕಪ್ಪಾ ಹೀಗಾಯ್ತು ಅಂತ ಕೇಳಿದರು.
ಸಂತಾ ಬೇಸರದಿಂದಲೇ ತನ್ನ ಕಥೆಯನ್ನು ಹೇಳಿದ. ಏನು ಹೇಳಲಿ ಡಾಕ್ಟ್ರೇ, ಬೆಳಗ್ಗೆ ನನ್ನ ಬಟ್ಟೆಗಳಿಗೆ ಇಸ್ತ್ರಿಮಾಡ್ತಾ ಇದ್ದೆ. ಯಾರೋ ಒಬ್ಬ ಮೂರ್ಖ ಮಾಡಿದ. ಇವೆಲ್ಲದಕ್ಕೂ ಅವನೇ ಕಾರಣ ಎಂದ.
ಡಾಕ್ಟರಿಗೆ ಸಂತಾ ಏನು ಹೇಳುತ್ತಾನೆಂಬುದೇ ಅರ್ಥವಾಗಲಿಲ್ಲ. ಅಲ್ಲ ಕಣೋ, ನೀನು ಕಿವಿ ಸುಟ್ಟುಕೊಳ್ಳುವುದಕ್ಕೂ, ಅವನು ಫೋನ್ ಮಾಡುವುದಕ್ಕೂ ಏನೋ ಸಂಬಂಧ ಎಂದು ಕೇಳಿದರು.
ಅಲ್ಲೇ ಡಾಕ್ಟ್ರೇ ಎಡವಟ್ಟಾಗಿದ್ದು ಎಂದ ಸಂತ. ಫೋನ್ ರಿಂಗಾಗುತ್ತಿದ್ದುದನ್ನು ಕೇಳಿ ಗಡಿಬಿಡಿಯಿಂದ ಫೋನ್ ಕಿವಿಗೆ ಇಡುವ ಬದಲು ಇಸ್ತ್ರಿಪೆಟ್ಟಿಗೆಯ್ನನೇ ಕಿವಿಗೆ ಇಟ್ಟೆ ಎಂದ ಸಂತಾ ಬೇಸರದಿಂದ.
ಓಹೋ ಹೀಗಾ ಕಥೆ. ಹೋಗ್ಲಿ ಬಿಡು. ಇನ್ನೊಂದು ಕಿವಿ ಯಾಕೆ ಸುಟ್ಟೋಯ್ತು ಅಂತ ಮರುಪ್ರಶ್ನೆ ಹಾಕಿದರು ವೈದ್ಯಮಹಾಶಯರು.
ಸಿಟ್ಟಿನಿಂದ ಕೆಂಪುಕೆಂಪಾಗಿದ್ದ ಸಂತಾ, ಆ ಮೂರ್ಖ ನನ್ಮಗ ಮತ್ತೊಮ್ಮೆ ಫೋನ್ ಮಾಡಿದ ಎಂದು ಆರ್ಭಟಿಸಿದ.