Article Santa Banta Jokes %e0%b2%a8%e0%b2%be%e0%b2%af%e0%b2%bf %e0%b2%95%e0%b2%be%e0%b2%9f 108100100014_1.htm

Select Your Language

Notifications

webdunia
webdunia
webdunia
webdunia

ನಾಯಿ ಕಾಟ

ಹಾಸ್ಯ
WD
ಸಂತಾ ವೈದ್ಯರ ಬಳಿಗೆ ಹೋಗಿ, ನಮ್ಮ ಮನೆಯ ಅಕ್ಕಪಕ್ಕ ನಾಯಿಗಳದ್ದೇ ಸಮಸ್ಯೆ. ನಾಯಿಗಳೆಲ್ಲಾ ಸೇರಿ ರಾತ್ರಿಯಿಡೀ ಬೊಗಳುವುದರಿಂದ ರಾತ್ರಿ ನಿದ್ದೆನೇ ಬರುವುದಿಲ್ಲ ಎಂದು ತನ್ನ ಸಮಸ್ಯೆ ತೋಡಿಕೊಂಡಾಗ, ವೈದ್ಯರು ಒಂದಿಷ್ಟು ಮಾತ್ರೆಗಳನ್ನು ಕೊಟ್ಟು ಇದನ್ನು ತಗೋ ನಿನ್ನ ಸಮಸ್ಯೆ ಪರಿಹಾರ ಆಗುತ್ತದೆ ಎಂದರು.

ಎರಡು ದಿನ ಬಿಟ್ಟು ಮತ್ತೆ ವೈದ್ಯರ ಬಳಿಗೆ ಬಂದ ಸಂತಾ ಇನ್ನಷ್ಟು ಸುಸ್ತಾಗಿದ್ದ. ಕಣ್ಣೆಲ್ಲಾ ಕೆಂಪಗಾಗಿತ್ತು. ಏನಾಯ್ತು ಎಂದು ವೈದ್ಯರು ಆತಂಕದಿಂದ ಕೇಳಿದರು.

ಏನು ಹೇಳಲಿ, ನಾಯಿಗಳನ್ನು ಹಿಡಿಯಲು ಅವುಗಳ ಹಿಂದೆ ಓಡಿ ಓಡಿ ಸುಸ್ತಾಯ್ತು. ಹಿಡಿದ ಬಳಿಕ ಅವುಗಳಿಗೆ ಮಾತ್ರೆ ತಿನ್ನಿಸಲು ಇನ್ನೂ ಕಷ್ಟವಾಯ್ತು ಎಂದ ಸುಸ್ತಾದ ಸಂತಾ.

Share this Story:

Follow Webdunia kannada