ಚೆನ್ನೈಗೆ ಬಂದಿದ್ದ ಸರ್ದಾರ್ಜಿಗೆ ಬರ್ಮಾ ಬಜಾರ್ ಹೋಗಬೇಕೆಂದು ಮನಸ್ಸಾಗುತ್ತದೆ. ಬರ್ಮಾ ಬಜಾರ್ನಲ್ಲಿ ಬೆಲೆ ತುಂಬಾ ಹೆಚ್ಚು ಯಾವುದೇ ವಸ್ತುವನ್ನು ಅದರ ಅರ್ಧ ಬೆಲೆಯಲ್ಲಿ ಕೊಡುವಂತೆ ನೀನು ಕೇಳಬೇಕು ಎಂದು ಸರ್ಜಾರ್ಜಿಯ ತಮಿಳ್ ಸ್ನೇಹಿತ ಸಲಹೆ ನೀಡುತ್ತಾನೆ.
ಬರ್ಮಾ ಬಜಾರ್ಗೆ ಬಂದ ಸರ್ದಾರ್ಜಿ ಒಂದು ಸ್ಟೀರಿಯೋಕ್ಕೆ ಎಷ್ಟು ರೂ. ಎಂದು ಕೇಳುತ್ತಾನೆ. ಅಂಗಡಿಯವ 2000 ರೂ. ಎನ್ನುತ್ತಾನೆ. ಸರ್ದಾರ್ಜಿ 1,000ಕ್ಕೆ ಕೊಡು ಎಂದಾಗ ವ್ಯಾಪಾರಿಯು 1800ಕ್ಕೆ ಕೊಡಬಲ್ಲೆ ಎನ್ನುತ್ತಾನೆ.
ಆಗ ಸರ್ದಾರ್ಜಿ 900ಕ್ಕೆ ಕೊಡು ಎಂದು ಕೇಳುತ್ತಾನೆ. ವ್ಯಾಪಾರಿಯೂ ಸಾಧ್ಯವೇ ಇಲ್ಲ ಬೇಕಾದರೆ 1,500ಕ್ಕೆ ಕೊಡಬಲ್ಲೆ ಎನ್ನುತ್ತಾನೆ.
ಪಟ್ಟು ಬಿಡದ ಸರ್ದಾರ್ಜಿ ಹಾಗಾದರೆ 750ಕ್ಕೆಂ ಕೊಡು ಎನ್ನುತ್ತಾನೆ. ಹೀಗೇ ಚರ್ಚೆ ಮುಂದುವರಿಯುತಿರುತ್ತದೆ.
ಸರ್ದಾರ್ಜಿ ಚರ್ಚೆಯಿಂದ ರೋಸಿ ಹೋದ ವ್ಯಾಪಾರಿಯೂ ನಿನಗೆ ಉಚಿತವಾಗಿಯೇ ನೀಡುತ್ತೇನೆ ಒಮ್ಮೆ ಇಲ್ಲಿಂದ ಹೋಗು ಮಾರಾಯಾ? ಎನ್ನುತ್ತಾನೆ. ಆಗ ಸರ್ದಾರ್ಜಿ ಹಾಗಾದರೆ ಎರಡು ಸ್ಟೀರಿಯೋ ಕೊಡು ಎನ್ನುತ್ತಾನೆ.