Select Your Language

Notifications

webdunia
webdunia
webdunia
webdunia

2016ರ ಸ್ಯಾಂಡಲ್‌ವುಡ್ ಮೇರು ನಟರ ಸಾಧನೆ.

2016ರ ಸ್ಯಾಂಡಲ್‌ವುಡ್ ಮೇರು ನಟರ ಸಾಧನೆ.
ಬೆಂಗಳೂರು , ಗುರುವಾರ, 15 ಡಿಸೆಂಬರ್ 2016 (16:49 IST)
ಕಳೆದ ವರ್ಷ ಸ್ಯಾಂಡಲ್‌ವುಡ್ ಪಾಲಿಗೆ ಅತ್ಯುತ್ತಮವಾಗಿದೆ ಎನ್ನಬಹುದಾಗಿದೆ. ಕಳೆದ ವರ್ಷ 160 ಕ್ಕೂ ಹೆಚ್ಚು ಸಿನೆಮಾಗಳು ಬಿಡುಗಡೆಯಾಗಿವೆ. ಖ್ಯಾತ ನಟರು ಸೇರಿದಂತೆ ಹೊಸಬರ ಚಿತ್ರಗಳು ತಾವೇನು ಕಮ್ಮಿಯಿಲ್ಲದಂತೆ ಯಶಸ್ಸು ಕಂಡಿವೆ. ದಕ್ಷಿಣ ಭಾರತದ ಇತರ ರಾಜ್ಯಗಳ ಭಾಷಾಚಿತ್ರಗಳಿಗೆ ಹೋಲಿಸಿದರೆ ಕನ್ನಡ ಸಿನೆಮಾ ರಂಗ ಅತ್ಯುತ್ತಮ ಸಾಧನೆಗೈದಿದೆ. ಸ್ಯಾಂಡಲ್‌ವುಡ್ ಖ್ಯಾತ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್, ದರ್ಶನ್ ಸೇರಿದಂತೆ ಇತರ ಹೊಸ ನಟರು  ನಟಿಸಿದ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡಿವೆ.
 
 
ಶಿವರಾಜ್ ಕುಮಾರ್
ಮೇರು ನಟ ಶಿವರಾಜ್ ಕುಮಾರ್ ಸಿನೆಮಾ ರಂಗದಲ್ಲಿ ಶತಕ ದಾಟಿ ಮುನ್ನುಗ್ಗುತ್ತಿದ್ದಾರೆ. ಅವರ ಕೈಯಲ್ಲಿ ಕನಿಷ್ಠ 10 ಚಿತ್ರಗಳಿವೆ ಎಂದು ಹೇಳಲಾಗುತ್ತಿದೆ. 2015ರಲ್ಲಿ ಕಂಡ ಯಶಸ್ಸು ಮುಂದಿನ ವರ್ಷದಲ್ಲೂ ಕೂಡಾ ಮುಂದುವರಿಯಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.
 
 
ಚಾಲೆಂಜಿಂಗ್ ಸ್ಟಾರ್ ದರ್ಶನ್
webdunia
ಜಗ್ಗುದಾದ, ವಿರಾಟ್‌ನಂತಹ ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಶಸ್ವಿ ನಟ ಮುಂದಿನ ವರ್ಷ ಕೂಡಾ ತಮ್ಮ ಯಶಸ್ವಿನ ಹಾದಿಯನ್ನು ಮುಂದುವರಿಸುತ್ತಾರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.ಕಠಿಣ ಪರಿಶ್ರಮ ಜೀವಿಯಾದ ದರ್ಶನ ಕಷ್ಟಪಟ್ಟು ಚಿತ್ರರಂಗದಲ್ಲಿ ಮೇಲೆ ಬಂದವರು. ಅವರ ಸಾಧನೆಗೆ ಅಭಿಮಾನಿಗಳಉ ಹ್ಯಾಟ್ಸಪ್ ಹೇಳಿದ್ದಾರೆ.
 
ಪುನೀತ್ ರಾಜ್ ಕುಮಾರ್
webdunia
ಡಾ.ರಾಜ್ ಪುತ್ರರಾದ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದೇ ಹೆಸರುವಾಸಿಯಾದವರು. ಕಳೆದ ವರ್ಷದ ಬಿಗ್ ಹಿಟ್ ಚಿತ್ರವಾದ ದೊಡ್ಮನೆ ಹುಡುಗ ಚಿತ್ರರಸಿಕರ ಮನಸೂರೆಗೊಳಿಸಿತ್ತು. ವರ್ಷದ ಚಕ್ರವ್ಯೂಹ ಚಿತ್ರ ಕೂಡಾ ಯಶಸ್ವಿಯಾಗಿದೆ. ಮುಂಬರುವ ವರ್ಷದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತಷ್ಟು ಯಶಸ್ವಿ ಚಿತ್ರಗಳಲ್ಲಿ ನಟಿಸಲಿ ಎನ್ನುವುದೇ ಅಭಿಮಾನಿಗಳ ಬಯಕೆಯಾಗಿದೆ. 
 
ನಟ ಕಿಚ್ಚ ಸುದೀಪ್
webdunia
ಪಂಚಭಾಷಾ ನಟರಾದ ಸುದೀಪ್ ನಟನೆಯ ಕೋಟಿಗೊಬ್ಬ-2 ಮತ್ತು ಮುಕುಂದ ಮುರಾರಿ ಚಿತ್ರಗಳು ಭರ್ಜರಿ ಪ್ರದರ್ಶನ ಕಂಡಿವೆ. ಅವರು ತುಂಬಾ ಬೇಡಿಕೆಯ ನಟರಾಗಿದ್ದರು, ಅತ್ಯುತ್ತಮ ಚಿತ್ರಕಥೆ ಆಯ್ಕೆಗೆ ಹೆಚ್ಚಿನ ಒತ್ತು ನೀಡುತ್ತಾರೆ ಎನ್ನುವುದು ಗಾಂಧಿನಗರದ ವಾದ. ಮುಂಬರುವ ದಿನಗಳಲ್ಲಿ ಮತ್ತಷ್ಟು ಯಶಸ್ವಿ ಚಿತ್ರಗಳನ್ನು ನೀಡಲಿ ಎನ್ನುವುದೇ ಸ್ಯಾಂಡಲ್‌ವುಡ್ ಪ್ರೇಕ್ಷಕರ ಹಾರೈಕೆ.   
 
 
ರಿಯಲ್ ಸ್ಟಾರ್ ಉಪೇಂದ್ರ
webdunia
ಕಳೆದ ವರ್ಷ ನಟ ಉಪೇಂದ್ರ ಅವರಿಗೂ ಲಕ್ಕಿ ವರ್ಷವಾಗಿದೆ. ಅವರು ನಟಿಸಿದ ಕಲ್ಪನಾ-2 ಮತ್ತು ಮುಕುಂದ ಮುರಾರಿ ಚಿತ್ರಗಳು ಭರ್ಜರಿ ಯಶಸ್ವಿಯಾಗಿದ್ದವು. ಮುಂದಿನ ವರ್ಷ ತಮ್ಮದೇ ಬ್ಯಾನರ್‌ ಅಡಿಯಲ್ಲಿ ಚಿತ್ರ ಮಾಡಲಿದ್ದಾರೆ ಎನ್ನುತ್ತವೆ ಗಾಂಧಿನಗರದ ವರದಿಗಳು. ಯಾವುದೇ ಚಿತ್ರದಲ್ಲಿ ನಟಿಸಿದರೂ ತಮ್ಮದೇ ಆದ ಛಾಪು ಮೂಡಿಸುವ ನಟನಾಕೌಶಲ್ಯವನ್ನು ಹೊಂದಿರುವ ಉಪೇಂದ್ರ ಎಲ್ಲರಿಗು ಅಚ್ಚುಮೆಚ್ಚು.  
 
ಗೋಲ್ಡನ್ ಸ್ಟಾರ್ ಗಣೇಶ್
webdunia
ಸ್ಟೈಲ್ ಕಿಂಗ್ ಎನ್ನುವ ಬಿರುದು ಪಡೆದಿರುವ ಗೋಲ್ಡನ್ ಸ್ಟಾರ್ ನಟ ಗಣೇಶ್‌ಗೆ ಮುಂಗಾರು ಮಳೆ-2, ಜೂಮ್, ಚಿತ್ರಗಳ ಯಶಸ್ಸು ಅವರಿಗೆ ಬಹುಬೇಡಿಕೆ ತಂದಿದೆ. ಕೈತುಂಬಾ ಚಿತ್ರಗಳನ್ನು ಹೊಂದಿರುವ ಗಣೇಶ್‌ಗೆ ಮುಂದಿನ ವರ್ಷ ಕೂಡಾ ಗೋಲ್ಡನ್ ವರ್ಷವಾಗಲಿ ಎನ್ನುವುದೇ ಅಭಿಮಾನಿಗಳ ಆಸೆಯಾಗಿದೆ.   
 
ನಟ ಯಶ್
webdunia
ರಾಕಿಂಗ್ ಸ್ಟಾರ್ ಯಶ್‌ಗೆ ಜೀವನದಲ್ಲಿಯೇ ನೆನಪಿಡುವಂತಹ ವರ್ಷವೆಂದರೆ 2015ನೇ ವರ್ಷ. ಯಾಕೆಂದರೆ, ತಮ್ಮ ಪ್ರಿಯತಮೆ ರಾಧಿಕಾ ಪಂಡಿತ್‌ರೊಂದಿಗೆ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಂತು ಸ್ಟ್ರೈಟ್ ಫಾರ್ವಾರ್ಡ್. ಲವರ್ ಬಾಯ್ ಚಿತ್ರಗಳಲ್ಲಿ ನಟಿಸಿ ಲಕ್ಷಾಂತರ ಅಭಿಮಾನಿ ಬಳಗ ಹೊಂದಿರುವ ಯಶ್‌ ಯಶಸ್ವಿಯಾಗಲಿ ಎಂದು ಹಾರೈಸೋಣವೇ?  
 
ದುನಿಯಾ ವಿಜಯ್
webdunia
ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಗತ್ತು ಗಮ್ಮತ್ತಿನಿಂದ ಯಶಸ್ವಿನ ಶಿಖರವೇರಿರುವ ದುನಿಯಾ ವಿಜಿ, ಮಾಸ್ತಿಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ನಡೆದ ದುರಂತದಿಂದ ನೋವನುಭವಿಸಿದ್ದರೂ ಅದನ್ನು ಮರೆಮಾಚಿ ಮತ್ತೊಂದು ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ದನಕಾಯೋನು ಚಿತ್ರಕ್ಕೆ ಕೂಡಾ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಮುಂದಿನ ವರ್ಷ ಕೂಡಾ ಅವರ ಚಿತ್ರಗಳು ನೂರು ದಿನ ಓಡಲಿ ಎನ್ನುವುದೇ ಅಭಿಮಾನಿಗಳು ಹಾರೈಕೆಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಅಕ್ರಮ ಸಂಬಂಧ ಮುಚ್ಚಿ ಹಾಕಲು ಮಗಳನ್ನೇ ಕೊಂದ ತಾಯಿ