Publish Date: Sat, 07 Mar 2020 (08:57 IST)
Updated Date: Sat, 07 Mar 2020 (08:58 IST)
ಮುಂಬೈ: ವಿಶ್ವ ಕ್ರಿಕೆಟ್ ನ ಮಾಜಿ ದಿಗ್ಗಜರು ಪಾಲ್ಗೊಳ್ಳಲಿರುವ ರೋಡ್ ಸೇಫ್ಟೀ ವರ್ಲ್ಡ್ ಸೀರೀಸ್ ಕ್ರಿಕೆಟ್ ಇಂದಿನಿಂದ ಆರಂಭವಾಗುತ್ತಿದೆ.
ಮುಂಬೈನ ವಾಂಖೆಡೆ ಮೈದಾನದಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದ್ದು, ಸಚಿನ್ ತೆಂಡುಲ್ಕರ್ ನೇತೃತ್ವದ ಇಂಡಿಯನ್ ಲೆಜೆಂಡ್ಸ್ ಮತ್ತು ಬ್ರಿಯಾನ್ ಲಾರಾ ನೇತೃತ್ವದ ವೆಸ್ಟ್ ಇಂಡೀಸ್ ಲೆಜೆಂಡ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಕಲರ್ಸ್ ವಾಹಿನಿಯ ಸಿನಿಮಾ ವಾಹಿನಿ, ವಯೋಕಾಮ್ ನೆಟ್ ವರ್ಕ್ ಚಾನೆಲ್ ಗಳಲ್ಲಿ ಪಂದ್ಯದ ನೇರಪ್ರಸಾರ ವೀಕ್ಷಿಸಬಹುದಾಗಿದೆ. ಹಳೆಯ ದಿಗ್ಗಜರ ಕ್ರಿಕೆಟ್ ನ್ನು ಮತ್ತೆ ಮೈದಾನದಲ್ಲಿ ನೋಡಬೇಕೆಂದಿದ್ದರೆ ತಪ್ಪದೇ ನೋಡಿ.