Publish Date: Mon, 22 Jan 2018 (16:45 IST)
Updated Date: Mon, 22 Jan 2018 (16:49 IST)
69 ನೇ ಗಣರಾಜ್ಯೋತ್ಸವಕ್ಕೆ ಪ್ರತಿ ವರ್ಷ ಸ್ನೇಹ ರಾಷ್ಟ್ರದ ನಾಯಕರೊಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸುವುದು ಪದ್ಧತಿ. ಈ ಬಾರಿ ಗಣರಾಜ್ಯೋತ್ಸವಕ್ಕೆ ಒಬ್ಬ ನಾಯಕನಲ್ಲ, 10 ರಾಷ್ಟ್ರಗಳ ನಾಯಕರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಇದೇ ಮೊದಲ ಬಾರಿಗೆ ಏಷಿಯಾನ್ ನಾಯಕರು ಭಾರತದ ಗಣರಾಜ್ಯೋತ್ಸವದ ವಿಶೇಷ ಅತಿಥಿಗಳಾಗಲಿದ್ದಾರೆ. ಇದು ಇದೇ ಮೊದಲು ಎನ್ನುವುದು ಇನ್ನೊಂದು ವಿಶೇಷ.
ಇಂಡೋನೇಷ್ಯಾ, ಮ್ಯಾನ್ಮಾರ್, ಸಿಂಗಾಪುರ್, ವಿಯೆನ್ನಾಂ, ಮಲೇಷ್ಯಾ, ಥಾಯ್ ಲೆಂಡ್, ಫಿಲಿಪೈನ್ಸ್ ಮೊದಲಾದ ಏಷಿಯಾನ್ ಶೃಂಗ ನಾಯಕರು ನಮ್ಮ ಅತಿಥಿಗಳಾಗಲಿದ್ದಾರೆ.