Select Your Language

Notifications

webdunia
webdunia
webdunia
webdunia

ದಿನನಿತ್ಯ ದೈವಾರಾಧನೆ ಮಾಡುವ ಪೂಜಾ ಮಂದಿರ ಹೇಗಿರಬೇಕು..?

ದಿನನಿತ್ಯ ದೈವಾರಾಧನೆ ಮಾಡುವ ಪೂಜಾ ಮಂದಿರ ಹೇಗಿರಬೇಕು..?
ಬೆಂಗಳೂರು , ಮಂಗಳವಾರ, 18 ಏಪ್ರಿಲ್ 2017 (16:39 IST)
ಪೂಜಾ ಮಂದಿರ ಹಿಂದೂಗಳ ಮನೆಯ ಹೃದಯ ಭಾಗ. ಪ್ರತಿ ನಿತ್ಯ ದೈವಾರಾಧನೆ ಮಾಡುವ ಈ ಸ್ಥಳ ಅತ್ಯಂತ ಶ್ರೇಷ್ಠ ಮತ್ತು ವಿಶಿಷ್ಟವಾದದ್ದು. ಹೀಗಾಗಿ, ಈ ಪೂಜಾ ಮಂದಿರದ ಪಾವಿತ್ರ್ಯತೆ ಮತ್ತು ಧನಾತ್ಮಕ ಅಂಶಗಳನ್ನ ಕಾಯ್ದುಕೊಳ್ಳಲು ಅತ್ಯಂತ ಹೆಚ್ಚಿನ ಗಮನ ಹರಿಸಲಾಗುತ್ತೆ.. ಹಾಗಾದರೆ, ಪೂಜಾ ಮಂದಿರ ಹೇಗಿರಬೇಕು..? ಎಂಬುದರ ಉಪಯುಕ್ತ ಟಿಪ್ಸ್ ಇಲ್ಲಿವೆ.

  
1.    ದೇವರ ಮನೆಯಲ್ಲಿರುವ ದೇವರ ವಿಗ್ರಹಗಳನ್ನ ಪಕ್ಕ ಪಕ್ಕದಲ್ಲಿ ಇಡಬೇಡಿ. ಕನಿಷ್ಠ ಪಕ್ಷ ಒಂದು ಇಂಚಿನಷ್ಟು ಅಂತರವಿರಲಿ.

2.  ಒಂದೇ ದೇವರ ವಿಗ್ರಹಗಳು ಒಂದಕ್ಕಿಂತ ಹೆಚ್ಚಿದ್ದರೆ ಎದುರು ಬದುರಾಗಿ ಇಡಬೇಡಿ. ಇದು ಮನೆಯಲ್ಲಿ ಸಮಸ್ಯೆ ಸೃಷ್ಟಿಮಾಡುತ್ತೆ.  

3.  ಮೆಟ್ಟಿಲಿನ ಕೆಳಗೆ ಅಥವಾ ಕತ್ತಲು ಆವರಿಸಿರುವ ಜಾಗದಲ್ಲಿ ಪೂಜಾ ಮಂದಿರ ನಿರ್ಮಿಸುವುದು ಶೂಭದಾಯಕವಲ್ಲ. ಇದರಿಂದ ನಿಮ್ಮ ಪ್ರಾರ್ಥನೆ ಫಲಪ್ರದವಾಗುವುದಿಲ್ಲ.

4.  ದಕ್ಷಿಣ ಮತ್ತು ಪಶ್ಚಿಮ ಭಾಗಕ್ಕೆ ಪೂಜಾಗೃಹ ನಿರ್ಮಿಸುವುದು ಸೂಕ್ತವಲ್ಲ. ಪೂರ್ವ ಮತ್ತು ಉತ್ತರಕ್ಕೆ ಪೂಜಾ ಗೃಹ ನಿರ್ಮಾಣ ಶ್ರೇಷ್ಠವಾದದ್ದು. ಇದರಿಂದ ಮನೆಗೆ ಧನಾತ್ಮಕ ಶಕ್ತಿ ಬರಲಿದೆ.

5.   ಮಲಗುವಾಗ ನಿಮ್ಮ ಕಾಲನ್ನ ಪೂಜಾ ಮಂದಿರದ ಕಡೆ ಹಾಕಬೇಡಿ

6.  ಪೂಜಾ ಮಂದಿರದ ಛಾವಣಿ ಮನೆಗೆ ಛಾವಣಿ ನಡುವಿನ ಜಾಗದಲ್ಲಿ ಕತ್ತಲು ಆವರಿಸದಂತೆ ನೋಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀರಾಮಚಂದ್ರನ ಜನ್ಮದಿನಕ್ಕೆ ಕೋಸಂಬರಿ ಹಂಚಿರೋ..