Select Your Language

Notifications

webdunia
webdunia
webdunia
webdunia

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ

ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ
, ಗುರುವಾರ, 29 ಸೆಪ್ಟಂಬರ್ 2016 (12:46 IST)
ಶಕ್ತಿಯನ್ನು ಆರಾಧಿಸುವ ಹಬ್ಬವೇ ನವರಾತ್ರಿ. ಈ ಶಕ್ತಿಯಿಂದ ಸಂಪೂರ್ಣ ಬ್ರಹ್ಮಾಂಡವೇ ಚಲನೆಯನ್ನು ಪಡೆಯುತ್ತದೆ. ಶಕ್ತಿಯ ಆರಾಧನೆಯ ಈ ಒಂಬತ್ತು ದಿನಗಳು ಮಹತ್ವಪೂರ್ಣವಾಗಿವೆ. ಈ ಒಂಬತ್ತು ದಿನಗಳಲ್ಲಿ ಬ್ರಹ್ಮಾಂಡದ ಎಲ್ಲ ಶಕ್ತಿಗಳು ಜಾಗೃತಗೊಳ್ಳುತ್ತವೆ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿತವಾಗಿದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಶಕ್ತಿಯನ್ನು ಆರಾಧಿಸುವುದರಿಂದ ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲಾಗುತ್ತದೆ. ಈ ಹಬ್ಬವನ್ನು ನವರಾತ್ರಿ ಎಂದು ಕರೆಯುತ್ತಾರೆ.
 
 
 
 
ನವರಾತ್ರಿ ಎಂದರೆ ಮಹಾಶಕ್ತಿಯ ಆರಾಧನೆಯ ಹಬ್ಬ. ನವರಾತ್ರಿಯಲ್ಲಿ ಮಾತೆ ದುರ್ಗೆಯ ಒಂಬತ್ತು ರೂಪಗಳ ಪೂಜೆಯನ್ನು ನೆರವೇರಿಸಲಾಗುತ್ತದೆ. ದೇವಿ ಮಾತಾ ದುರ್ಗೆಯ ಈ ಒಂಬತ್ತು ರೂಪಗಳೆಂದರೆ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ.
 
ಭಾರತದಾದ್ಯಂತ ನವರಾತ್ರಿಯನ್ನು ವಿಭಿನ್ನವಾಗಿ ಆಚರಿಸಲಾಗುತ್ತದೆ. ಗುಜರಾತಿನಲ್ಲಿ ನವರಾತ್ರಿಯ ಈ ಒಂಬತ್ತು ದಿನಗಳು ಉಲ್ಲಾಸಮಯವಾಗಿರುತ್ತವೆ. ಬಂಗಾಲದಲ್ಲಿ ಷಷ್ಠಿಯಿಂದ ದಶಮಿಯವರೆಗೆ ದೇವಿಯ ಪೂಜೆಯನ್ನು ಆಚರಿಸಲಾಗುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನವರಾತ್ರಿ ನಿಮಿತ್ತ ಉಪವಾಸ, ದೇವಿ ಮಂದಿರಗಳಲ್ಲಿ ಪೂಜೆಕಾರ್ಯಗಳು ವಿಶೇಷವಾಗಿರುತ್ತವೆ. ಪಂಜಾಬ್ ರಾಜ್ಯದಲ್ಲಿ ಕೂಡಾ ಉಪವಾಸ ಮತ್ತು ಜಾಗರಣೆ ಹಾಗೂ ದೇವಿಯ ಪೂಜೆಯನ್ನು ನೆರವೇರಿಸುತ್ತಾರೆ.
 
ಈ ಒಂಬತ್ತು ದಿನಗಳಲ್ಲಿ ಕಿರಿಯ ವಯಸ್ಸಿನ ಬಾಲಕಿಯರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ನೀಡುವುದಲ್ಲದೇ ಅವರಿಗೆ ದಕ್ಷಿಣೆಯನ್ನು ಕೊಡಲಾಗುತ್ತದೆ. ಕುಮಾರಿಯರಿಗೆ ಪಾದ ಪೂಜೆ ಮಾಡಿ, ಮೃಷ್ಟಾನ್ನ ಭೋಜನ ಮಾಡುವ ನಿಯಮಗಳು ದೇಶದ ಎಲ್ಲ ರಾಜ್ಯಗಳಲ್ಲಿ ಕಂಡುಬರುತ್ತದೆ.
 
ಭಾರತದಲ್ಲಿ ಪ್ರತಿಯೊಂದು ಹಬ್ಬದ ಹಿಂದೆ ಒಂದು ಸಂದೇಶವಿರುತ್ತದೆ. ನವರಾತ್ರಿಯಲ್ಲೂ ಕೂಡಾ ಒಂದು ಸಂದೇಶವಿದೆ. ನಮ್ಮ ಸಮಾಜಕ್ಕೆ ಈ ಸಂದೇಶದ ಅಗತ್ಯವಿದೆ. ನವರಾತ್ರಿಯಲ್ಲಿ ಕುಮಾರಿಯರ ಪೂಜೆ ಮಾಡುವುದಲ್ಲದೇ ಅವರನ್ನು ದೇವಿಯ ರೂಪದಲ್ಲಿ ನೋಡಲಾಗುತ್ತದೆ. ಇದರಿಂದ ಮಹಿಳೆಯರಿಗೆ ಸಮಾಜದಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸುವಂತೆ ಸಂದೇಶವನ್ನು ನೀಡುತ್ತದೆ.
 
ನವರಾತ್ರಿಯ ಹಬ್ಬದ ಸಂದರ್ಭದಲ್ಲಿ ಮಹಿಳೆ ತನ್ನ ಶಕ್ತಿಯನ್ನು ಗುರುತಿಸಿಕೊಂಡು ಅನ್ಯಾಯ ಮತ್ತು ಅನೀತಿಗಳ ವಿರುದ್ಧ ಹೋರಾಡಲು ಶಕ್ತಿಯನ್ನು ಕೊಡುವಂತೆ ದುರ್ಗೆಯಲ್ಲಿ ಪ್ರಾರ್ಥಿಸಬೇಕು. ದುರ್ಗಾ ಮಾತೆಯಂತೆ ನಮ್ಮ ಅಸ್ತಿತ್ವವನ್ನು ಬಲಗೊಳಿಸಿ, ಮನಸ್ಸಿನಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದಾಗ ಮಾತ್ರ ನವರಾತ್ರಿ ಪೂಜೆ ಮಾಡುವುದು ಸಾರ್ಥಕವಾಗುತ್ತದೆ.
 
ನೂಪುರ್ ದೀಕ್ಷಿತ್


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ದಸರಾ ಉತ್ಸವ : ನಿಮಗೆ ಗೊತ್ತಿರುವ ಮತ್ತು ಗೊತ್ತಿರದ ಸಂಗತಿಗಳು