Select Your Language

Notifications

webdunia
webdunia
webdunia
webdunia

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಚಂದನೋತ್ಸವ

ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯ ಚಂದನೋತ್ಸವ
WD
ಜಗತ್ತಿನಲ್ಲಿ ಅತ್ಯಂತ ಪ್ರಾಚೀನ ದೇವಸ್ಥಾನ ಎಂದು ಹೆಸರು ಪಡೆದಿರುವ ಸಿಂಹಾಚಲದ ಲಕ್ಷ್ಮೀ ನರಸಿಂಹ ದೇವಸ್ಥಾನದ ಇತಿಹಾಸವು 11ನೇ ಶತಮಾನದ ಆದಿಯಿಂದ ಪ್ರಾರಂಭವಾಗುತ್ತದೆ. ಸಿಂಹಾಚಲ ಎಂದರೆ ಸಿಂಹದ ಪರ್ವತ ಎಂದು ಆಗುತ್ತದೆ. ವೈಶಾಖ ಮಾಸದ ಆಕ್ಷಯ ತೃತೀಯದಂದು ಶ್ರೀಲಕ್ಷ್ಮೀ ನರಸಿಂಹ ಸ್ವಾಮಿಗೆ ಚಂದನೋತ್ಸವವನ್ನು ನೆರವೇರಿಸಲಾಗುತ್ತದೆ. ಅಂದು ಮಾತ್ರ ನಾವು ಪೂರ್ಣ ವಿಗ್ರಹದ ದರ್ಶನವನ್ನು ಪಡೆಯಬಹುದು.

ಭಕ್ತ ಪ್ರಹ್ಲಾದನನ್ನು ರಕ್ಷಿಸುವುದಕ್ಕೆ ವಿಷ್ಣು, ನರಸಿಂಹನ ಅವತಾರ ತಳೆದನು ಎಂದು ಪೌರಾಣಿಕ ಹಿನ್ನಲೆ ಇದೆ. ಪ್ರಹ್ಲಾದನ ತಂದೆಯಾದ ಹಿರಣ್ಯ ಕಶ್ಯಪನು ಹರಿಯ ಭಕ್ತನಾದ ಪ್ರಹ್ಲಾದನನ್ನು ಸಮುದ್ರಕ್ಕೆ ತಳ್ಳುವ ಸಂದರ್ಭದಲ್ಲಿ ವಿಷ್ಣು ನರಸಿಂಹನ ಅವತಾರವೆತ್ತಿ ಪ್ರಹ್ಲಾದನನ್ನು ಇಲ್ಲಿ ರಕ್ಷಿಸಿದನು.

webdunia
WD
ಸ್ಥಳ ಪುರಾಣದ ಪ್ರಕಾರ ನರಸಿಂಹ ದೇವರಿಂದ ತಂದೆ ಹತ್ಯೆಯಾದ ನಂತರ ಪ್ರಲ್ಹಾದ್ ದೇವಾಲಯವನ್ನು ನಿರ್ಮಿಸಿದ ಮೊದಲ ವ್ಯಕ್ತಿಯೆಂದು ಹೇಳಲಾಗುತ್ತದೆ.ಕೃತಾ ಯುಗದ ಅಂತ್ಯವಾದ ನಂತರ ದೇವಾಲಯವನ್ನು ನಿರ್ಲಕ್ಷಿಸಲಾಗಿದ್ದರಿಂದ ನಶಿಸುತ್ತಾ ಬಂದಿತೆಂದು ಹೇಳಲಾಗುತ್ತದೆ.

ಪುರವಾ ರಾಜನು ತನ್ನ ಧರ್ಮಪತ್ನಿಯೊಂದಿಗೆ ರಥದಲ್ಲಿ ಸವಾರಿ ಮಾಡುತ್ತಾ ಸಿಂಹಾಚಲಂ ಪರ್ವತವನ್ನು ಪ್ರವೇಶಿಸಿದಾಗ ದೇವಾಲಯವನ್ನು ಕಂಡು ದೇವರ ಮೂರ್ತಿಯ ಸುತ್ತ ಬೆಳೆದಿದ್ದ ಮಣ್ಣನ್ನು ತೆಗಯುತ್ತಿದ್ದಾಗ ಆಕಾಶವಾಣಿಯೊಂದು ಕೇಳಿ ಬಂದು ದೇವರ ಮೂರ್ತಿಯನ್ನು ಪ್ರಕಟಿಸದೇ ಗಂಧದ ಪೇಯದಿಂದ ಮುಚ್ಚುವಂತೆ ಸಲಹೆ ನೀಡಿತು ಎನ್ನಲಾಗಿದೆ.

webdunia
WD
ವರ್ಷದ ವೈಶಾಖ ತಿಂಗಳಿನ ಮೂರನೇಯ ದಿನದಂದು ಮಾತ್ರ ನಿಜಸ್ವರೂಪವನ್ನು ಕಾಣಬಹುದಾಗಿದೆ.ಆಕಾಶವಾಣಿಯ ಸಲಹೆಯಂತೆ ದೇವರ ಮೂರ್ತಿಯನ್ನು ಗಂಧದ ಪೇಯದಿಂದ ಸಿಂಗರಿಸಿ ದೇವಾಲಯವನ್ನು ಪುನರ್‌ನಿರ್ಮಾಣ ಮಾಡಲಾಯಿತು ಎಂದು ಪುರಾಣಗಳಲ್ಲಿ ಉಲ್ಲೇಖವಾಗಿದೆ.

ದೇವಾಲಯದ ವಿಶೇಷತೆಗಳು

ಆಂಧ್ರಪ್ರದೇಶದ ವಿಶಾಖ್‌ಪಟ್ಟಣಂ ಉತ್ತರ ಭಾಗದಿಂದ 16 ಕಿ.ಮಿ ದೂರದಲ್ಲಿ ಸಮುದ್ರ ಮಟ್ಟದಿಂದ 800 ಅಡಿ ಎತ್ತರದಲ್ಲಿ ಹತ್ತಿರ ಮಂದಿರ ನಿರ್ಮಿಸಲಾಗಿದೆ.ನರಸಿಂಹ ದೇವಾಲಯವಿರುವದರಿಂದ ಪರ್ವತಕ್ಕೆ ದೇವರ ಹೆಸರನ್ನೆ ಇಡಲಾಗಿದೆ.

webdunia
WD
ದೇವಾಲಯಕ್ಕೆ ಹೋಗುವ ದಾರಿಯಲ್ಲಿ ದಟ್ಟ ಅರಣ್ಯವಿದ್ದು ದೇವಾಲಯವನ್ನು ತಲುಪಲು ಸಾವಿರ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಮೆಟ್ಟಿಲುಗಳಿಗೆ ದೀಪಾಲಂಕಾರ ಮಾಡಲಾಗಿದ್ದು ಯಾತ್ರಿಗಳಿಗೆ ಅನುಕೂಲವಾಗಿದೆ.

ಎಪ್ರಿಲ್‌ ತಿಂಗಳಿನಿಂದ ಜೂನ್ ತಿಂಗಳ ಪ್ರತಿ ಶನಿವಾರ ಹಾಗೂ ರವಿವಾರದಂದು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ.ಮಾರ್ಚ/ಎಪ್ರಿಲ್ ತಿಂಗಳಿನ ಏಕಾದಸಿ ಸಂದರ್ಭದಲ್ಲಿ ವಾರ್ಷಿಕ ಕಲ್ಯಾಣಂ ಹಬ್ಬವನ್ನು ಆಚರಿಸಲಾಗುತ್ತದೆ.

ತಲುಪುವುದು ಹೇಗ

ರಸ್ತೆ ಮೂಲಕ: ಚೆನ್ನೈ,ತಿರುಪತಿ ಹೈದರಾಬಾದ್, ವಿಜಯವಾಡಾಗಳಿಂದ ನೇರ ಬಸ್ ಸೇವೆಗಳು ಲಭ್ಯ

ರೈಲಿನ ಮೂಲಕ: ವಿಶಾಕ್‌ಪಟ್ಟಣ ವಾಣಿಜ್ಯ ನಗರವಾಗಿದ್ದರಿಂದ ಚೆನ್ನೈ ,ಕೋಲ್ಕತಾ, ಹೈದರಾಬಾದ್‌ಗಳಿಂದ ನೇರ ರೈಲು ಸೌಲಭ್ಯಗಳಿವೆ.

ವಿಮಾನ ಮೂಲಕ: ದೇಶದ ಪ್ರಮುಖ ಪಟ್ಟಣಗಳಿಂದ ನೇರ ವಿಮಾನ ಸೌಲಭ್ಯಗಳಿವೆ.

Share this Story:

Follow Webdunia kannada