Select Your Language

Notifications

webdunia
webdunia
webdunia
webdunia

ಯೋಗೇಂದ್ರ ಶಿಲಾನಾಥ್ ಬಾಬಾ

ಯೋಗೇಂದ್ರ ಶಿಲಾನಾಥ್ ಬಾಬಾ
ದೇವಾಸ್ ನಗರದ ಶ್ರೀ ಗುರು ಯೋಗೇಂದ್ರ ಶಿಲಾನಾಥ್ ಆಶ್ರಮದಲ್ಲಿ ಪವಿತ್ರವಾದ ದೀಪ ಬೆಳಗುತ್ತಿರುತ್ತದೆ. ಇವತ್ತಿಗೂ ಬಾಬಾ ಅವರ ಕಟ್ಟಿಗೆಯ ಪಾದರಕ್ಷೆಗಳು ಹಾಸಿಗೆಯನ್ನು ಕಾಣಬಹುದಾಗಿದೆ. 100ವರ್ಷಗಳು ಕಳೆದರೂ ಇಂದಿಗೂ ಹೊಸತನ ಕಂಡುಬರುತ್ತದೆ.
WD

ಯೋಗೇಂದ್ರ ಬಾಬಾ ಅವರ ಆಶ್ರಮದಲ್ಲಿ ಪ್ರತಿಯೊಬ್ಬರಿಗೂ ಶಾಂತಿ ಮತ್ತು ನೆಮ್ಮದಿಯ ಅನುಭವವಾಗುತ್ತದೆ. ಬಾಬಾ ಯೋಗೇಂದ್ರ ಅವರಿಗೆ ತಲೆಬಾಗಿ ಕೈಮುಗಿದಲ್ಲಿ ಏಳಿಗೆ ಮತ್ತು ಶಾಂತಿ ದೊರೆಯುತ್ತದೆ. ಯಶಸ್ಸು ಕೂಡಿ ಬಂದು ಅಡೆತಡೆಗಳೆಲ್ಲಾ ನಿವಾರಣೆಯಾಗುತ್ತವೆ ಎನ್ನುವ ನಂಬಿಕೆ ಭಕ್ತರಲ್ಲಿ ಮನೆಮಾಡಿದೆ.

ಭಕ್ತರ ಪ್ರಕಾರ ಬಾಬಾ ಅವರು ಈ ಸ್ಥಳ ಶುದ್ದ ಮತ್ತು ಪವಿತ್ರವಾಗಿದ್ದರಿಂದ ತುಂಬಾ ಇಷ್ಟಪಡುತ್ತಿದ್ದರು.ಇಲ್ಲಿನ ಶಾಂತಿಯನ್ನು ಯಾರಾದರೂ ಕದಡಲು ಯತ್ನಿಸಿದಲ್ಲಿ ಬಾಬಾ ಅವರ ಅಕ್ರೋಶಕ್ಕೆ ಗುರಿಯಾಗುತ್ತಿದ್ದರು.ಮಲಹಾರ್ ಧೂನಿ (ಬೆಂಕಿ ಹಚ್ಚುವ ಸ್ಥಳ) ಹಾಗೂ ಸಮಾಧಿ ಸ್ಥಳಗಳು ಅವರ ಶಿಸ್ತನ್ನು ಎತ್ತಿ ತೋರಿಸುತ್ತವೆ.

ಬಾಬಾ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ . ಬಾಬಾ ಅವರು ಧ್ಯಾನಕ್ಕಾಗಿ ಧೂನಿಯ ಹತ್ತಿರ ಕುಳಿತಾಗ ಪ್ರಾಣಿಗಳು ಬಾಬಾ ಅವರ ಹತ್ತಿರ ಬಂದು ಕುಳಿತುಕೊಳ್ಳುತ್ತಿದ್ದವು. ಹುಲಿಯೊಂದು ಬಾಬಾ ಅವರ ಸುತ್ತ ಸದಾ ಉಪಸ್ಥಿತವಾಗಿರುತ್ತಿತ್ತು. ಬಾಬಾ ಅವರಿಗೆ ಹುಲಿ ಎಂದರೆ ತುಂಬಾ ಪ್ರೀತಿ.
webdunia
WD

ಯೋಗೇಂದ್ರ ಬಾಬಾ ಅವರ ಇತಿಹಾಸ ಜನರ ಏಳಿಗೆಗಾಗಿ ಮಾಡಿದ ಕಾರ್ಯಗಳು ಪೂರ್ಣ ಪವಾಡಗಳಿಂದ ಕೂಡಿದೆ.ಪ್ರತಿ ಗುರುವಾರದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಶ್ರಮಕ್ಕೆ ಭೇಟಿ ನೀಡಿ ಬಾಬಾ ಅವರ ಆಶೀರ್ವಾದವನ್ನು ಪಡೆಯುತ್ತಾರೆ. ಬಾಬಾ ಅವರು 1901ರಿಂದ 1921ರವರೆಗೆ ದೇವಾಸ್‌ನಲ್ಲಿದ್ದರೆಂದು ಉಲ್ಲೇಖಿಸಲಾಗಿದೆ. ನಂತರ ಹೃಷಿಕೇಶ್‌ಗೆ ತೆರಳಿದ ಬಾಬಾ ಚೈತ್ರ ಕೃಷ್ಣ 14ನೇಯ ಗುರುವಾರದಂದು 1977ರಲ್ಲಿ ಇಹಲೋಕ ತ್ಯಜಿಸಿದರು.

Share this Story:

Follow Webdunia kannada