ಇಲ್ಲಿ ದೇವಿಯು ಅಶ್ವಿಜ ಶುದ್ಧ ಏಕಾದಶಿ(ಹಿಂದೂ ಕ್ಯಾಲೆಂಡರಿನ 11ನೆ ದಿನ) ಯಂದು ಅವತರಿಸಿರುವ ಕಾರಣ ಆ ದಿನದಂದು ಇಲ್ಲಿ ಉತ್ಸವ ನಡೆಯುತ್ತದೆ. ಮಂದಿರದಲ್ಲಿ ದೇವಿಯ ಮುಖವು ಮಹೂರ್ಗರ್ ನತ್ತ ತಿರುಗಿದೆ. ಈ ದೇವಾಲಯದ ಬಳಿ ಶಿವದೇವಾಲಯ ಮತ್ತು ಒಂದು ಪ್ರಾಚೀನ ಕೊಳವಿದೆ. ತಮ್ಮೆಲ್ಲ ವ್ಯಾಧಿಗಳ ಪರಿಹಾರಕ್ಕಾಗಿ ಭಕ್ತರು ಈ ಕೊಳದಲ್ಲಿ ಮೀಯುತ್ತಾರೆ. ಈ ಮಂದಿರಕ್ಕೆ ಭೇಟಿ ನೀಡಿದ ಪ್ರತಿ ಭಕ್ತರೂ, ಮಾತಾ ಜಗದಂಬೆಯ ಪವಾಡಗಳನ್ನು ಕೊಂಡಾಡುತ್ತಾರೆ.ಈ ಮಂದಿರದ ಕುರಿತು ಒಂದು ಪ್ರಸಿದ್ಧ ಘಟನೆ ಜನಜನಿತವಾಗಿದೆ. ಒಮ್ಮೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಈ ಹಳ್ಳಿಯಲ್ಲಿ ಅಣೆಕಟ್ಟೊಂದರ ಉದ್ಘಾಟನೆಗಾಗಿಗಿ ಬಂದಿದ್ದರು. ಆ ಸಂದರ್ಭದಲ್ಲಿ ಅವರಿಗೆ ಕನಸಿನಲ್ಲಿ ದೇವತೆ ಕಾಣಿಸಿಕೊಂಡಿದ್ದಳಂತೆ. ಇದರ ಮರುದಿನ ಮುಂಜಾನೆ ಅವರು ಮಂದಿರಕ್ಕೆ ಭೇಟಿ ನೀಡಿದ್ದು, ದೇವಾಲಯಕ್ಕೆ ಭಕ್ತರು ಸುಲಭವಾಗಿ ತೆರಳಲು ಅನುಕೂಲವಾಗುವಂತೆ ಮೆಟ್ಟಿಲುಗಳನ್ನು ನಿರ್ಮಿಸಲು ಸ್ಥಳಿಯಾಡಳಿತಕ್ಕೆ ತಿಳಿಸಿದರು.
ದೇವಾಲಯದ ಜೀರ್ಣೋದ್ಧಾರಕ್ಕಾಗಿ, ಹೊಸ ಯೋಜನೆಯನ್ನು ವಿನ್ಯಾಸಗೊಳಿಸಿರುವುದಾಗಿ ದೇವಾಲಯದ ಟ್ರಸ್ಟಿಗಳಲ್ಲೊಬ್ಬರಾದ ಸುರೇಶ್ ಬಾಲಚಂದ್ರ ಅವರು ನಮ್ಮ ತಂಡಕ್ಕೆ ತಿಳಿಸಿದರು. ಜೀರ್ಣೋದ್ಧಾರದ ವೆಚ್ಚ ಸುಮಾರು 15 ಕೋಟಿ ಎಂಬುದಾಗಿ ಅಂದಾಜಿಸಲಾಗಿದೆ. ದೇವಾಲಯದ ಸುತ್ತಮುತ್ತ ಸುಮಾರು 20 ಸಾವಿರ ಔಷಧೀಯ ಗಿಡಮೂಲಿಕೆಗಳು ಮತ್ತು ಇತರ ಸಸಿಗಳನ್ನು ಬೆಳೆಸಲಾಗಿದೆ.
ಈ ಕಾರಣಿಕ ದೇವಾಲಯಕ್ಕೆ ಪ್ರತಿ ವರ್ಷ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡಿ ಮಾತೆ ಜಗದಾಂಬೆಯ ದರ್ಶನದಿಂದ ಪಾವನರಾಗುತ್ತಾರೆ.
ಇಲ್ಲಿಗೆ ತಲುಪಲು:
ರಸ್ತೆಯ ಮೂಲಕ: ಮೋಹಟೆಯ ಅಹ್ಮದ್ ನಗರದಿಂದ ಪಟಾರ್ಡಿ ಮೂಲಕವಾಗಿ 70 ಕಿಲೋ ಮೀಟರ್ ದೂರವಿದೆ.
ರೈಲು ಮುಖಾಂತರ: ರಾಷ್ಟ್ರದ ಎಲ್ಲಾ ಭಾಗಗಳಿಂದಲೂ ಅಹ್ಮದ್ ನಗರಕ್ಕೆ ರೈಲು ಸಂಪರ್ಕವಿದೆ.
ವಾಯುಯಾನ: ಪೂನಾ ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣ. ಪೂನಾವು ಅಹ್ಮದ್ ನಗರದಿಂದ 180 ಕಿಮೀ ದೂರದಲ್ಲಿದೆ.