ಮುಟ್ಟಮ್‌ನ ಸೆಂಟ್ ಮೇರಿ ಚರ್ಚ್
, ಸೋಮವಾರ, 24 ಡಿಸೆಂಬರ್ 2007 (11:47 IST)
ಈ ಬಾರಿಯ ಕ್ರಿಸ್‌ಮಸ್ ಹಬ್ಬಕ್ಕೆ ಮುನ್ನ ಕೇರಳದ ಸುಪ್ರಸಿದ್ದ ಕನ್ಯೆ ಮಾತೆ ಮೇರಿಯ ಚರ್ಚ್ ಕುರಿತು ಧಾರ್ಮಿಕ ಯಾತ್ರೆಯ ಕಥಾ ಸರಣಿಯಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.
ಕನ್ಯೆ ಮಾತೆ ಮೇರಿ, ಭಗವಾನ್ ಏಸುವಿಗೆ ಜನ್ಮ ನೀಡಿದ ತಾಯಿ. ಆದ್ದರಿಂದ ಕ್ರೈಸ್ತ ಧರ್ಮಿಯರು ತಮಗೆ ದೈವದ ಕರುಣೆ ತೋರಿದ ಮಹಿಳೆ ಎಂದು ಗೌರವಿಸುತ್ತಾರೆ. ಕ್ರೈಸ್ತ ಧರ್ಮದಲ್ಲಿ ಧರ್ಮೋಪದೇಶ ಮತ್ತು ದೈವದ ಕರುಣೆಯನ್ನು ಗಳಿಸಿದವಳು ಮತ್ತು ದೇವದೂತ ಗ್ಯಾಬ್ರಿಯಲ್‌ನ ಆಶಿರ್ವಾದ ಹೊಂದಿದವಳು ಎಂದು ಹೇಳಲಾಗುತ್ತದೆ. ಕೇರಳದ ಅಲಪ್ಪುಜಾ ಜಿಲ್ಲೆಯ ಮುಟ್ಟಮ್‌ನಲ್ಲಿ ಇರುವ ಸೆಂಟ್ ಮೇರಿ ಚರ್ಚ್‌ಗೆ ಮೇರಿಯ ಭಕ್ತರು ವಿವಿಧ ಭಾಗಗಳಿಂದ ಮೇರಿಯ ದರ್ಶನಕ್ಕೆ ಆಗಮಿಸುತ್ತಾರೆ. ಮಾತಾ ಅಮೋಲ್‌ಭವಾ ಚರ್ಚ್‌ನಲ್ಲಿ ಭಕ್ತಿಯಿಂದ ಬೇಡಿಕೊಂಡಲ್ಲಿ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ ಎಂದು ಭಕ್ತರು ನಂಬಿದ್ದಾರೆ.
ಎರಡು ಶತಮಾನಗಳ ಹಿಂದೆ ಮೇರಿಯ ಮೂರ್ತಿಯನ್ನು ಫ್ರಾನ್ಸ್‌ನಿಂದ ತರಲಾಗಿದೆ. ಚರ್ಚ್‌ನ ಮಧ್ಬಹಾ ಪೋರ್ತುಗೀಸ್ ಶೈಲಿಯ ವಾಸ್ತು ಶಿಲ್ಪವನ್ನು ಹೊಂದಿದೆ. ಅಂದಾಜು 900 ವರ್ಷಗಳ ಇತಿಹಾಸವಿರುವ ಈ ಚರ್ಚಿಗೆ ಸೆಂಟ್ ಮೇರಿಸ್ ಫೆರೋನಾ ಚರ್ಚ್ ಎಂದು ಕರೆಯುತ್ತಾರೆ.
ಎಸು ಕ್ರಿಸ್ತನ ಅನುಯಾಯಿ ಸೆಂಟ್ ಥಾಮಸ್ ದಕ್ಷಿಣ ಭಾರತಕ್ಕೆ ಭೇಟಿ ನೀಡಿದ ಸಮಯದಲ್ಲಿ ಇಲ್ಲಿ ವಾಸಿಸುತ್ತಿದ್ದನೆಂದೂ ನಂತರ ಈ ಸ್ಥಳ ಕೊಕ್ಕಮಂಗಲಮ್ ಎಂದು ಹೆಸರು ಪಡೆಯಿತು. ಕೇರಳದಲ್ಲಿ ಸೆಂಟ್ ಥಾಮಸ್ ಸ್ಥಾಪಿಸಿದ ಏಳು ಚರ್ಚ್‌ಗಳ ಪೈಕಿ ಇದು ಒಂದು. ಕಾಲಾನಂತರದಲ್ಲಿ ಈ ಪ್ರದೇಶದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಬಲವಾಗುತ್ತಿದ್ದಂತೆ ಮತ್ತೊಂದು ಚರ್ಚ್ ಅಸ್ತಿತ್ವಕ್ಕೆ ಬಂತು. ಕ್ರಿ.ಶ. 1023ರಲ್ಲಿ ಈಗಿನ ಚರ್ಚ್ ಸ್ಥಾಪನೆಗೊಂಡಿತು. 1476ರಲ್ಲಿ ಪೋಪ್ ಸಿಕ್ಟಸ್ ಕ್ರಿಸ್ತ ಧರ್ಮಿಯರಲ್ಲಿ ಆಚರಿಸುವ ಪರಿಶುದ್ಧತೆಯನ್ನು ಪರಿಚಯಿಸಿದರು. ಚರ್ಚ್ ಕುರಿತು ಡೊಗ್ಮಾ ಹೇಳಿದ ಯಾವುದೇ ವಿಚಾರಗಳಿಗೆ ವ್ಯಾಖ್ಯಾನ ನೀಡದೆ ಮಾತೆ ಮೇರಿ ಕುರಿತು ಇರುವ ನಂಬಿಕೆಗಳನ್ನು ನಂಬುವುದು ಬಿಡುವುದನ್ನು ರೋಮನ್ ಕ್ಯಾಥೋಲಿಕ್‌ರಿಗೆ ಬಿಟ್ಟ ವಿಚಾರ ಎಂದು ಹೇಳಿದರು. ಈ ಚರ್ಚಿನಲ್ಲಿ ಎರಡು ಹಬ್ಬಗಳನ್ನು ಆಚರಿಸಲಾಗುತ್ತದೆ. ಡಿಸೆಂಬರ್ 8ರ ನಂತರ ಬರುವ ಮೊದಲ ರವಿವಾರದಂದು ಮಾತೆಯ ಹಬ್ಬವನ್ನು ಆಚರಿಸಲಾಗುತ್ತದೆ. ಎರಡನೆ ಹಬ್ಬ ಜನೇವರಿ 21ರಂದು ಆಚರಿಸಲಾಗುತ್ತದೆ. ಇದು ಮಾತೆಯ ವಿವಾಹದ ಹಬ್ಬ ಎಂಬ ನಂಬಿಕೆ ಇದೆ.
16ನೇ ಶತಮಾನದಲ್ಲಿ ಪೋರ್ತುಗೀಸ್ ಶೈಲಿಯಲ್ಲಿ ಬೃಹತ್ತಾದ ಚರ್ಚ್ ನಿರ್ಮಿಸಲಾಯಿತು. ಸೆಂಟ್ ಪ್ರಾನ್ಸಿಸ್ ಗೋವಾ ಮತ್ತು ಕೇರಳಗಳಿಗೆ ಭೇಟಿ ನೀಡಿದ್ದ ಸಮಯದಲ್ಲಿ ಈ ಚರ್ಚಿನಲ್ಲಿ ವಾಸವಾಗಿದ್ದನು. ಅರ್ಚ್ ಡೈಯಾಸಿಸ್ ಎರ್ನಾಕುಲಂ ಮತ್ತು ಅಂಗಾಮಲಿ, ಈ ಚರ್ಚ್‌ನ್ನು ಮಾತೆ ಮೇರಿಯ ಯಾತ್ರಾ ಸ್ಥಳ ಎಂದು ಗುರುತಿಸಿದ್ದಾರೆ.