Publish Date: Sun, 06 Apr 2008 (15:30 IST)
Updated Date: Sun, 06 Apr 2008 (15:30 IST)
ಮಧ್ಯಪ್ರದೇಶದ ದೇವಸ್ ನಗರ ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆ ಮಂದಿರಗಳಿಗೆ ಪ್ರಸಿದ್ದವಾದ ಪಟ್ಟಣ .ಎರಡು ಮಂದಿರಗಳು ನಗರದಲ್ಲಿರುವ ಬೆಟ್ಟದ ಮೇಲೆ ನಿರ್ಮಾಣವಾಗಿವೆ.ಮಂದಿರದಲ್ಲಿರುವ ತುಳಜಾಭವಾನಿ ಹಾಗೂ ಚಮುಂಡಾ ಮಾತೆಯರನ್ನು ಹಿರಿಯ ಮಾತೆ ಹಾಗೂ ಕಿರಿಯ ಮಾತೆ ಎಂದು ಕರೆಯುತ್ತಾರೆ
ಮಂದಿರದ ಬಗ್ಗೆ ಕುತೂಹಲಭರಿತರಾಗಿ ಅರ್ಚಕರಿಗೆ ಮಂದಿರದ ಇತಿಹಾಸ ತಿಳಿಸಿ ಎಂದು ಕೋರಿದಾಗ ಅರ್ಚಕರು ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆ ಸಹೋದರಿಯರಾಗಿದ್ದಾರೆ. ಒಂದು ಬಾರಿ ಇಬ್ಬರ ನಡುವೆ ಉಂಟಾದ ವೈಮನಸ್ಸಿನಿಂದಾಗಿ ಹಿರಿಯ ಮಾತೆ ಮಂದಿರವನ್ನು ತ್ಯಜಿಸಿ ಬೆಟ್ಟದ ಇನ್ನೊಂದು ಭಾಗದಲ್ಲಿ ನೆಲೆಸಿದ್ದಾಳೆ ಎಂದು ವಿವರಣೆ ನೀಡಿದರು.
ಇಬ್ಬರ ನಡುವಣವಿರುವ ಭಿನ್ನಮತದ ಪರಿಸ್ಥಿತಿಯನ್ನು ಅರಿತ ಹನುಮಾನ್ ದೇವರು ಹಾಗೂ ಭೈರವರು ಮಾತೆ ತುಳಜಾಭವಾನಿ ಹಾಗೂ ಚಮುಂಡಾ ಮಾತೆಯರನ್ನು ಶಾಂತವಾಗಿರುವಂತೆ ಪ್ರಾರ್ಥಿಸಿದರು. ಇದನ್ನು ಒಪ್ಪಿಕೊಂಡ ಉಭಯ ದೇವತೆಯರು ಸ್ಥಳವನ್ನು ತ್ಯಜಿಸುವ ನಿರ್ಧಾರವನ್ನು ಕೈಬಿಟ್ಟರು. ಈ ಸಂದರ್ಭದಲ್ಲಿ ವಿಚಿತ್ರ ಘಟನೆ ನಡೆದು ಹಿರಿಯ ಮಾತೆಯ ದೇಹದ ಅರ್ಧಭಾಗ ಭೂಮಿಯಲ್ಲಿ ಹುದುಗಿ ಹೋಯಿತು. ಪ್ರಸ್ತುತವು ಹಿರಿಯ ಮಾತೆಯ ಮೂರ್ತಿಯ ಅರ್ಧ ಭಾಗ ಭೂಮಿಯಲ್ಲಿರುವುದನ್ನು ಕಾಣಬಹುದಾಗಿದೆ.