Select Your Language

Notifications

webdunia
webdunia
webdunia
webdunia

ಮಹಾಕೇದಾರೇಶ್ವರ ಮಂದಿರ

ಮಹಾಕೇದಾರೇಶ್ವರ ಮಂದಿರ
WD
ದೇವರು ಮತ್ತು ಭಕ್ತರ ನಡುವೆ ಭಕ್ತಿ ಮತ್ತು ನಂಬಿಕೆಯ ವಿಶೇಷ ಭಾಂದವ್ಯವಿರುವುದರಿಂದ ಜಗತ್ತಿನ ಮೂಲೆಮೂಲೆಗಳಿಂದ ಭಕ್ತರು ಧಾರ್ಮಿಕ ಸ್ಥಳಗಳತ್ತ ಆಕರ್ಷಿತರಾಗುತ್ತಾರೆ . ಧರ್ಮಯಾತ್ರೆಯ ಸರಣಿಯಲ್ಲಿ ನಾವು ನಿಮ್ಮನ್ನು ಪರಮಾತ್ಮನು ಆಶೀರ್ವದಿಸಿದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತೇವೆ. ಆ ಪವಿತ್ರ ಸ್ಳಳದ ಹೆಸರು ಮಹಾಕೇದಾರೇಶ್ವರ ಮಂದಿರ.

ಮಧ್ಯಪ್ರದೇಶದ ರತ್ಲಾಮ್‌ನಿಂದ 25 ಕಿ.ಮಿ. ದೂರದಲ್ಲಿರುವ ಸೈಲಾನಾ ಗ್ರಾಮದ ಹತ್ತಿರದಲ್ಲಿ ಕೇದಾರೇಶ್ವರ ಮಂದಿರವಿದೆ.ದಟ್ಟ ಅರಣ್ಯ ಪ್ರದೇಶ ಹಾಗೂ ಬೆಟ್ಟಗಳಿಂದ ಆವೃತ್ತವಾಗಿದ್ದು ಪೃಕೃತಿ ಸೌಂದರ್ಯ ಸವಿಯ ಬಯಸುವವರಿಗೆ ಉತ್ತಮ ಆರಾಧನಾ ತಾಣವಾಗಿದೆ. ದೇಶದ ಅನೇಕ ಕಡೆಗಳಿಂದ ಭಕ್ತರು ಶಿವನ ಪೂಜೆಯನ್ನು ನೆರವೇರಿಸಲು ಆಗಮಿಸುತ್ತಾರೆ. ಮಂದಿರದ ಹತ್ತಿರ ಸುಂದರವಾದ ಜಲಪಾತವಿದ್ದು, ಅದರಿಂದ ಹರಿಯುವ ನೀರು ಕುಂಡದಲ್ಲಿ ಬಂದು ಬೀಳುವುದು ವಿಶೇಷ ಸಂಗತಿ.
webdunia
WD


ಮಹಾಕೇದಾರೇಶ್ವರ ಮಂದಿರಕ್ಕೆ 278 ವರ್ಷಗಳ ಇತಿಹಾಸವಿದ್ದು ಐತಿಹಾಸಿಕವಾಗಿಯೂ ಮಹತ್ವ ಪಡೆದಿದೆ. 1730ರಲ್ಲಿ ಕೇವಲ ನೈಸರ್ಗಿಕ ಶಿವಲಿಂಗ ಮಾತ್ರವಿತ್ತು. 1736ರಲ್ಲಿ ಸೈಲಾನಾದ ಮಹಾರಾಜಾ ಜಯಸಿಂಗ್ ಶಿವಲಿಂಗದ ಸುತ್ತಲು ಸುಂದರವಾದ ಮಂದಿರವನ್ನು ಕಟ್ಟಿಸಿದನು. ಕೆಲವೇ ದಿನಗಳಲ್ಲಿ ಮಂದಿರ ಮಹಾಕೇದಾರೇಶ್ವರ ಮಂದಿರದಂತೆ ಪ್ರಸಿದ್ದಿಯಾಯಿತು. ನಂತರ 1859-95ರಲ್ಲಿ ಮಹಾರಾಜಾ ದುಲೆಸಿಂಗ್ ತಮ್ಮ ಅಧಿಕಾರವಧಿಯಲ್ಲಿ 1ಲಕ್ಷ 50 ಸಾವಿರ ರೂಪಾಯಿಗಳನ್ನು ಮಂದಿರ ಹಾಗೂ ಕುಂಡದ ಪುನರ್‌ನಿರ್ಮಾಣಕ್ಕಾಗಿ ನೀಡಿದರೆಂದು ಹೇಳಲಾಗಿದೆ. ರಾಜಾ ಜಸ್ವಂತ್ ಸಿಂಗ್ ಮಂದಿರದ ಅರ್ಚಕರಿಗೆ ಜೀವನವನ್ನು ಸಾಗಿಸಲು ತುಂಡು ಭೂಮಿಯನ್ನು ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.1991-92ರಲ್ಲಿ ಮಂದಿರದ ಜೀರ್ಣೋದ್ಧಾರಕ್ಕಾಗಿ ರತ್ಲಾಮ್ ಜಿಲ್ಲಾಡಳಿತ 2 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿ ಸಹಾಯಹಸ್ತ ನೀಡಿ ನೆರವಾಯಿತು.

webdunia
WD
ಮಂದಿರದ ಅರ್ಚಕ ಆವಂತಿಲಾಲ್ ತ್ರಿವೇದಿ ಮಾತನಾಡಿ ಸೈಲಾನಾದ ರಾಜ ಅಧಿಕಾರದಲ್ಲಿದ್ದಾಗಿನಿಂದ ಇಲ್ಲಿ ಮಂದಿರವಿದೆ.ರಾಜ ಕುಟುಂಬದ ನಾಲ್ಕನೇ ವಂಶಜರು ಶಿವನ ಪೂಜೆಯನ್ನು ನೆರವೇರಿಸುತ್ತಾರೆ. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಂದಿರಕ್ಕೆ ಆಗಮಿಸುವ ಭಕ್ತರು ಶಿವನನ್ನು ಪೂಜಿಸುತ್ತಾರೆ ಎಂದು ವಿವರಿಸಿದರು .

ವೈಶಾಖ ಪೂರ್ಣಿಮ ಮತ್ತು ಕಾರ್ತಿಕ ಪೂರ್ಣಿಮೆ ಮತ್ತು ಮಹಾಶಿವರಾತ್ರಿಯಂದು ಜಾತ್ರೆ ನಡೆಯುತ್ತಿದ್ದು ,ಶ್ರಾವಣ ತಿಂಗಳಿನಲ್ಲಿ ಪ್ರತಿನಿತ್ಯ ನೂರಾರು ಭಕ್ತರು ಮಹಾಕೇದಾರೇಶ್ವರ ಮಂದಿರಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆಯುತ್ತಾರೆ.


ತಲುಪುವುದು ಹೇಗೆ?

ರಸ್ತೆ ಮೂಲಕ: ರತ್ಲಾಮ್‌ನಿಂದ ಟ್ಯಾಕ್ಸಿ ಮತ್ತು ಬಸ್ ಸೇವೆ ಲಭ್ಯವಿದೆ.

ರೈಲು ಮೂಲಕ: ದೆಹಲಿ-ಮುಂಬೈಗೆ ತೆರಳುವ ರೈಲುಗಳು ರತ್ಲಾಮ್‌ ಮಾರ್ಗದ ಮೂಲಕ ತೆರಳುತ್ತವೆ.

ವಿಮಾನದ ಮೂಲಕ: ಹತ್ತಿರದಲ್ಲಿರುವ ವಿಮಾನ ನಿಲ್ದಾಣವೆಂದರೇ 150 ಕಿ.ಮಿ. ದೂರದ ಇಂದೋರ್‌ನಲ್ಲಿರುವ ದೇವಿ ಅಹಲ್ಯಾಬಾಯಿ ಹೋಳ್ಕರ್ ವಿಮಾನ ನಿಲ್ದಾಣ.

Share this Story:

Follow Webdunia kannada