ರುಕ್ಮನು ತನ್ನ ತಂಗಿಯನ್ನು ಶಿಶುಪಾಲನಿಗೆ ಕೊಟ್ಟು ಮದುವೆ ಮಾಡಿಸಬೇಕೆಂಬ ಆಕಾಂಕ್ಷೆ ಹೊಂದಿದ್ದ. ಆದರೆ, ರುಕ್ಮಿಣಿಯು ಶ್ರೀಕೃಷ್ಣನಲ್ಲಿ ಅನುರಕ್ತಳಾಗಿದ್ದಳು. ರುಕ್ಮಿಣಿಯ ಸಂದೇಶದಿಂದಾಗಿ ಶ್ರೀಕೃಷ್ಣನು ತನ್ನ ರಥದಲ್ಲಿ ಆಗಮಿಸಿ ರುಕ್ಮಿಣಿಯನ್ನು ಅಪಹರಿಸಿ ಒಯ್ದನು. ಆದರೆ ರುಕ್ಮ ಪ್ರತಿರೋಧ ತೋರಿದನು. ಯುದ್ಧ ಸಂಭವಿಸಿತು. ರುಕ್ಮ ಸೋತು ಓಡಿದನು. ಅವಮಾನಗೊಂಡ ರುಕ್ಮ ತನ್ನ ರಾಜ್ಯ ತೊರೆದು ಭೋಪಾವರ ಎಂಬ ಪಟ್ಟಣವನ್ನು ನಿರ್ಮಿಸಿ, ಅಲ್ಲೇ ನೆಲಸಿದನು. ಭೋಪಾವರದಲ್ಲಿ ಶಾಂತಿನಾಥ ತೀರ್ಥಕರರ ವಿಗ್ರಹ ಸಂಸ್ಥಾಪಿಸಿದ್ದು ರುಕ್ಮ ಎಂಬ ನಂಬಿಕೆಯೂ ಇದೆ.ಭೋಪಾವರದ ಐತಿಹಾಸಿಕ ವಿಶೇಷ ಶ್ರೀಕೃಷ್ಣನ ತಾಯ್ನಾಡು ಮಥುರಾದಲ್ಲಿರುವ ಜೈನ ಸ್ತೂಪಗಳಲ್ಲಿರುವ ಶಿಲಾಶಾಸನಗಳಲ್ಲಿ, ಶ್ರೀಕೃಷ್ಣನ ಯುಗದಲ್ಲಿ ಕೆತ್ತಿಸಲಾದ ವಿಗ್ರಹಗಳ ವಿವರಣೆಗಳಿವೆ. ಅದರಲ್ಲಿ ಭೋಪಾವರದ ಶಾಂತಿನಾಥ ತೀರ್ಥಂಕರ ವಿಗ್ರಹದ ಹೆಸರನ್ನೂ ಉಲ್ಲೇಖಿಸಲಾಗಿದೆ.ಪವಾಡಮಯ ವಿಗ್ರಹ
ಈ ವಿಗ್ರಹದ ಪವಾಡಮಯ ಶಕ್ತಿಯ ಬಗ್ಗೆ ಸಾಕಷ್ಟು ಕಥೆಗಳಿವೆ. ಇವೆಲ್ಲ ಕಥೆಗಳು ಶಾಂತಿನಾಥನ ಮೇಲೆ ಭಕ್ತರ ನಂಬಿಕೆ ಬಲಗೊಳ್ಳಲು ಕಾರಣವಾಗಿವೆ. ಭಕ್ತರು ಹೇಳುವಂತೆ, ವಿಗ್ರಹದ ತಲೆಯಿಂದ ಜೇನು ಹರಿದುಬರುತ್ತಿರುವುದನ್ನು ಅವರು ಕಣ್ಣಾರೆ ಕಂಡಿದ್ದಾರಂತೆ. ಈ ಪರಿಸರದಲ್ಲಿ ಹಲವು ಬಾರಿ ಶ್ವೇತ ವರ್ಣದ ನಾಗನನ್ನು ಅವರು ಕಂಡಿದ್ದಾರಂತೆ. ಕೆಲವೊಮ್ಮೆ, ಗರ್ಭ ಗುಡಿಯು ಹಾಲಿನಿಂದ ತುಂಬಿ ಹೋಗಿರುತ್ತದೆ ಎಂದೂ ಹೇಳುವವರಿದ್ದಾರೆ.
ಪ್ರತಿವರ್ಷ ಕನಿಷ್ಠ ಒಂದು ನಾಗರ ಹಾವು ತನ್ನ ಚರ್ಮವನ್ನು ಇಲ್ಲಿ ತೊರೆಯುತ್ತದೆ. ಈ ಹಾವಿನ ಒಣಗಿದ ಚರ್ಮಗಳನ್ನು ಮಂದಿರದಲ್ಲಿ ಕಾಯ್ದಿಡಲಾಗಿದೆ.
ಹೋಗುವುದು ಹೇಗೆ?
ರಸ್ತೆ ಮಾರ್ಗ: ಭೋಪಾವರವು ಮಧ್ಯಪ್ರದೇಶದ ಇಂದೋರ್‌ನಿಂದ 107 ಕಿ.ಮೀ. ದೂರದಲ್ಲಿದೆ. ಬಸ್ಸು ಮತ್ತು ಖಾಸಗಿ ವಾಹನ ಸೌಲಭ್ಯ ಸಾಕಷ್ಟಿದೆ.
ರೈಲು ಮಾರ್ಗ: ಸಮೀಪದ ರೈಲು ನಿಲ್ದಾಣವೆಂದರೆ 77 ಕಿ.ಮೀ. ದೂರದಲ್ಲಿರುವ ಮೇಘನಗರ.
ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣ, ಇಂದೋರಿನ ದೇವಿ ಅಹಿಲ್ಯಾ ವಿಮಾನ ನಿಲ್ದಾಣ.