ಮೆಡಿಲ್ಲಿಯೊನ್ ಮೇಲ್ಬಾಗದಲ್ಲಿ ತ್ರಿಮೂರ್ತಿ ದೇವತೆಗಳಾದ ತಂದೆ , ಮಗ ಮತ್ತು ಅತಿಮಾನುಷ ಚೇತನದ ಮೂರ್ತಿಗಳನ್ನು ಚಿತ್ರಿಸಲಾಗಿದೆ. ಸೇವಾಕಾರ್ಯಗಳು ನಡೆಯುವ ಚರ್ಚಿನ ಎಡಭಾಗದಲ್ಲಿ ಧಾರ್ಮಿಕ ಕ್ರಿಯೆಗಳನ್ನು ನಡೆಸಲಾಗುತ್ತಿದ್ದು, ಬಲಭಾಗದಲ್ಲಿ ಪೂಜ್ಯ ಸೆಂಟ್ ಝೆವಿಯರ್ ಪೂಜ್ಯ ಅವಶೇಷಗಳನ್ನು ಬೆಳ್ಳಿಯ ಸಣ್ಣಪೆಟ್ಟಿಗೆಯಲ್ಲಿ ಇಡಲಾಗಿದೆ. ಚರ್ಚ್‌ನ ಒಳಭಾಗದಲ್ಲಿ ಸಂತರ ಜೀವನಚರಿತ್ರೆಯನ್ನು ಚಿತ್ರಗಳಲ್ಲಿ ಬರೆದು ಅಲಂಕರಿಸಲಾಗಿದೆ.1552
ರಲ್ಲಿ ಚೀನಾಗೆ ಸಮುದ್ರಯಾನ ಕೈಗೊಂಡ ಸಂದರ್ಭದಲ್ಲಿ ಸೆಂಟ್ ಝೇವಿಯರ್ ಇಹಲೋಕ ತ್ಯಜಿಸಿದರು. ಝೇವಿಯರ್ ಆಶಯದಂತೆ ಅವರನ್ನು ಗೋವಾದಲ್ಲಿ ಸಮಾಧಿ ಮಾಡಲು ಹೊರಟಾಗ ಅವರ ಮೃತದೇಹವು ತಾಜಾತನದಲ್ಲಿದ್ದು ಬಳಿಕ ಅದನ್ನು ರಕ್ಷಿಸಿಡಲಾಯಿತು . ಅಂದಿನಿಂದ ಇಂದಿನವರೆಗೆ ಮೃತದೇಹ ತಾಜಾತನವನ್ನು ಹೊಂದಿದ್ದು ಅಲೌಕಿಕ ಪವಾಡ ಇಂದಿಗೂ ಮುಂದುವರಿದಿದ್ದು, ಪ್ರತಿ ಹತ್ತು ವರ್ಷಗಳಿಗೊಮ್ಮೆ ಸೆಂಟ್ ಝೇವಿಯರ್ ದೇಹ ಪ್ರದರ್ಶನಕ್ಕೆ ಇಡಲಾಗುತ್ತಿದ್ದು ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುತ್ತಿದೆ.
ಪ್ರತಿ ವರ್ಷ ಡಿಸೆಂಬರ್ 3 ರಂದು ಚರ್ಚ್‌ನಲ್ಲಿ ಸೆಂಟ್ ಝೇವಿಯರ್ ಧಾರ್ಮಿಕ ಆಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಬ್ಬವನ್ನು ಕ್ರಿಶ್ಚಿಯನ್ನರ ಪ್ರಮುಖ ಹಬ್ಬವಾಗಿ ಪರಿಗಣಿಸಲಾಗುತ್ತಿದೆ. ಈ ಸಂದರ್ಭದಲ್ಲಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ದರ್ಶನಕ್ಕಾಗಿ ಆಗಮಿಸುತ್ತಾರೆ
ತಲುಪುವುದು ಹೇಗೆ
ರಸ್ತೆಯ ಮೂಲಕ: ಗೋವಾದ ರಾಜಧಾನಿ ಪಣಜಿಯಿಂದ ಹಳೆಯ ಗೋವಾ 10 ಕಿ.ಮಿ. ದೂರವಿದ್ದು ಬಸ್, ಟ್ಯಾಕ್ಸಿ, ಮತ್ತು ಅಟೋರಿಕ್ಷಾಗಳು ಲಭ್ಯವಿವೆ.
ರೈಲು ಮೂಲಕ: ಕೊಂಕಣ ರೈಲ್ವೆ ಮೂಲಕ ದೇಶದ ಪ್ರಮುಖ ನಗರಗಳಿಗೆ ಗೋವಾ ಸಂಪರ್ಕವಿದೆ. ಮಾರ್ಗೊವಾ ಮತ್ತು ವಾಸ್ಕೊ ಡ ಗಾಮಾ ಗೋವಾದ ಪ್ರಮುಖ ನಿಲ್ದಾಣಗಳಾಗಿವೆ.
ವಿಮಾನದ ಮೂಲಕ: ದೇಶದ ಪ್ರಮುಖ ನಗರಗಳಿಂದ ಸಂಪರ್ಕವಿರುವ ವಾಸ್ಕೊ ಡ ಗಾಮಾದಲ್ಲಿರುವ ದಾಬೊಲಿಮ್ ವಿಮಾನ ನಿಲ್ದಾಣ ಏಕೈಕ ವಿಮಾನ ನಿಲ್ದಾಣವಾಗಿದೆ.