ಧಾರ್ಮಿಕ ಯಾತ್ರೆಯ ಈ ಸರಣಿಯಲ್ಲಿ ನಾವು ನಿಮ್ಮನ್ನು ನಾಥ ಸಮುದಾಯದ ನಾಥ ಗುರುವಿನ ಮಂದಿರಕ್ಕೆ ಕರೆದೊಯ್ಯುತ್ತಿದ್ದೇವೆ. ಕಾನಿಫ್‌ನಾಥ್ ಮಹಾರಾಜ ಮಂದಿರ ಎಂದು ಈ ಸ್ಥಳವನ್ನು ಕರೆಯಲಾಗುತ್ತಿದ್ದು, ಇದು ಮಹಾರಾಷ್ಟ್ರದ ಮಧಿ ಎಂಬ ಪುಟ್ಟ ಗ್ರಾಮದಲ್ಲಿದೆ. ಸಹ್ಯಾದ್ರಿ ಪರ್ವತಶ್ರೇಣಿಯ ಗರ್ಭಗಿರಿಯ ಮೂಲಕ ಹರಿಯುವ ಪವನಗಿರಿ ನದಿಯ ಸಮೀಪದಲ್ಲಿ ಈ ಗ್ರಾಮವಿದೆ.1710
ರಲ್ಲಿ ಫಾಲ್ಗುಣ ಮಾಸದ ವೈದ್ಯ ಪಂಚಮಿಯಂದು ಕಾನಿಫ್‌ನಾಥ್ ಮಹಾರಾಜರು ಸಮಾಧಿ ಸ್ಥಿತಿಗೆ ತಲುಪಿದ್ದರು ಎಂದು ಹೇಳಲಾಗುತ್ತದೆ. ಈ ಮಂದಿರವು ಮೂರು ಮುಂಬಾಗಿಲನ್ನು ಹೊಂದಿದೆ. ನಂಬಿಕೆಯ ಪ್ರಕಾರ, ರಾಣಿ ಯೇಸುಬಾಯ್ ತನ್ನ ಪತಿ ಮಹಾರಾಜ್ ಛತ್ರಪತಿ ಶಾಹು ಅವರು ಮೊಗಲ್ ದೊರೆ ಔರಂಗಜೇಬನ ಬಂಧನದಿಂದ ಬಿಡುಗಡೆಗೊಳ್ಳಲು ಕಾನಿಫ್‌ನಾಥ್ ಅವರನ್ನು ಪ್ರಾರ್ಥಿಸಿದ್ದರು. ಇದರಂತೆಯೇ ಪತಿಯು ಬಿಡುಗಡೆಗೊಂಡಾಗ, ಸಂತೋಷದಲ್ಲಿ ರಾಣಿಯು ಇಲ್ಲಿ ಮಂದಿರವನ್ನು ನಿರ್ಮಿಸಿದ್ದರು.ಮಂದಿರ ನಿರ್ಮಾಣದ ಸಂದರ್ಭದಲ್ಲಿ ಹಿಂದುಳಿದ ವರ್ಗದ ಜನರು ಸಾಕಷ್ಟು ಕೊಡುಗೆ ನೀಡಿದ್ದರು. ಇದರ ಫಲವಾಗಿ ಇದನ್ನು ದಲಿತರ ಪಾಂಧಾರಿ ಅಂತಲೂ ಕರೆಯುತ್ತಾರೆ, ಈ ಪ್ರದೇಶದಲ್ಲಿ ವಾಸಿಸುತ್ತಿರುವ ಮಂದಿಯು ಕಾನಿಫ್‌ನಾಥ್ ಮಹಾರಾಜನನ್ನು ಕುಲದೈವವೆಂದೇ ಪೂಜಿಸುತ್ತಾರೆ. ಕಾನಿಫ್‌ನಾಥ್ ಮಹಾರಾಜರ ಮಂದಿರದ ಜೊತೆಗೆ, ಗರ್ಭಗಿರಿ ಬೆಟ್ಟವು ಪ್ರಮುಖ ನಾಥ ಗುರುಗಳಾದ ಗೋರಖ್‌ನಾಥ್ ಮಹಾರಾಜ್, ಮಚ್ಚೇಂದ್ರನಾಥ್ ಮಹಾರಾಜ್, ಗೋಹಿನಿನಾಥ್ ಮಹಾರಾಜ್ ಮತ್ತು ಜಲಿಂದರ್‌ನಾಥ್ ಮಹಾರಾಜ್ ಮುಂತಾದವರ ಮಂದಿರವನ್ನೂ ಹೊಂದಿದೆ.ಕಾನಿಫ್‌ನಾಥ್ ಮಹಾರಾಜರು ಹಿಮಾಲಯದಲ್ಲಿ ಆನೆಯ ಕಿವಿಯ ಮೂಲಕ ಜನ್ಮ ತಾಳಿದರು ಎಂದು ಹೇಳಲಾಗುತ್ತದೆ. ಬದರೀನಾಥ ಧಾಮದ ಭಾಗೀರಥಿ ನದಿ ತೀರದಲ್ಲಿ ಸುಮಾರು 12 ವರ್ಷಗಳ ಕಠಿಣ ತಪಸ್ಸನ್ನು ಇವರು ಮಾಡಿದ್ದು, ದಟ್ಟ ಕಾಡಿನಲ್ಲಿ ಅನೇಕ ವರ್ಷಗಳ ಕಾಲ ಯೋಗಾಭ್ಯಾಸವನ್ನು ನಡೆಸಿದ್ದರು. ಇದರ ನಂತರ, ತನ್ನ ಧಾರ್ಮಿಕ ಪ್ರವಚನಗಳ ಮೂಲಕ ಬಡವರ್ಗದ ಜನರನ್ನು ಧಾರ್ಮಿಕ ನಂಬಿಕೆಯತ್ತ ಕೊಂಡೊಯ್ಯುವಲ್ಲಿ ಸಫಲರಾಗಿದ್ದರು, ಸಬರಿ ಆಡುಭಾಷೆಯಲ್ಲಿ ಭಕ್ತಿ ಶ್ಲೋಕಗಳನ್ನು ಇವರು ಬರೆದಿದ್ದು, ಇದನ್ನು ಪಠಿಸಿದರೆ ಸಾಮಾನ್ಯ ಜನರ ನೋವುಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ಮಂದಿರದ ಸಮೀಪದಲ್ಲಿ ದಾಳಿಂಬೆಯ ಮರವಿದ್ದು, ಇದು ಕಾನಿಫ್‌ನಾಥ್ ಅವರ ಶಿಷ್ಯೆ ದಾಲಿ ಬಾಯಿ ಅವರ ನೆನಪಿಗಾಗಿ ಪೂಜಿಸಲ್ಪಡುತ್ತಿದೆ. ನಾಥ ಪಂಗಡಕ್ಕೆ ಸೇರಲು ದಾಲಿಬಾಯಿ ಅನೇಕ ತಪಸ್ಸನ್ನು ಮಾಡಿದ್ದರು. ಮೋಕ್ಷಕ್ಕಾಗಿ ಸಮಾಧಿ ಸ್ಥಿತಿಗೆ ತಲುಪಬೇಕೆನ್ನುವಷ್ಟರಲ್ಲಿ ಕಾನಿಫ್‌ನಾಥ್ ಪ್ರತ್ಯಕ್ಷರಾಗಿದ್ದರು. ಸಮಯ ಕಳೆದಂತೆ ದಾಳಿಂಬೆ ಗಿಡವೊಂದು ಅಲ್ಲೇ ಹುಟ್ಟಿಕೊಂಡಿದ್ದು, ನಂಬಿಕೆಯ ಸ್ಥಳವಾಗಿ ಮಾರ್ಪಟ್ಟಿತು.
ಇತ್ತೀಚಿನ ದಿನಗಳಲ್ಲಿ ಈ ಪವಿತ್ರ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಒಂದನ್ನೂ ಸಂಘಟಿಸಲಾಗಿದೆ.
ಹೋಗುವುದು ಹೇಗೆ?
ರಸ್ತೆ ಮಾರ್ಗ: ಮಾದಿ ಗ್ರಾಮವು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯಿಂದ 55 ಕಿ,.ಮೀ. ದೂರದಲ್ಲಿದೆ. ಈ ಪ್ರದೇಶಕ್ಕೆ ಹೋಗಲು ಬಸ್ ಅಥವಾ ಟ್ಯಾಕ್ಸಿಗಳು ಸುಲಭವಾಗಿ ದೊರೆಯುತ್ತವೆ.
ರೈಲು ಮಾರ್ಗ: ಇಲ್ಲಿಗೆ ಪಕ್ಕದ ರೈಲು ಮಾರ್ಗ ಅಹ್ಮದ್‌ನಗರ್
ವಾಯು ಮಾರ್ಗ: ಅಹ್ಮದ್‌ನಗರ್‌ನಿಂದ ಪುಣೆ ಅತ್ಯಂತ ಸಮೀಪದ ವಿಮಾನ ನಿಲ್ದಾಣ.