Select Your Language

Notifications

webdunia
webdunia
webdunia
webdunia

ತಿರುಚಾನೂರ್ ಪದ್ಮಾವತಿ ಮಂದಿರ

ತಿರುಚಾನೂರ್ ಪದ್ಮಾವತಿ ಮಂದಿರ
WD
ತಿರುಚಾನೂರ್ ತಿರುಪತಿಯ ಹತ್ತಿರವಿರುವ ಚಿಕ್ಕ ಪಟ್ಟಣ. ಚಿಕ್ಕಪಟ್ಟಣದಲ್ಲಿ ಸುಂದರ ಪದ್ಮಾವತಿಯ ದೇವಾಲಯ. ಭಕ್ತರು ಮನಸ್ಸಿನಿಂದ ಪೂಜಿಸಿದಲ್ಲಿ ಬೇಡಿದ ವರವನ್ನು ಕೊಡುವ ಮಾತೆ ಎಂದು ಪ್ರಸಿದ್ದಳಾಗಿದ್ದಾಳೆ. ವಿಶಾಲವಾದ ಮಂದಿರವನ್ನು "ಅಲುಮೇಲುಮಂಗಪುರಂ" ಎಂದು ಕರೆಯುತ್ತಾರೆ.ತಿರುಪತಿಯಿಂದ ಕೇವಲ ಐದು ಕಿ.ಮಿ. ದೂರದಲ್ಲಿರುವ ಚಿರುಚಾನೂರ್‌ಗೆ ಭೇಟಿ ನೀಡಿದಲ್ಲಿ ಮಾತ್ರ ತಿರುಪತಿಗೆ ಭೇಟಿ ನೀಡಿದ ಸಾರ್ಥಕವಾಗುತ್ತದೆ ಎಂದು ಭಕ್ತರಲ್ಲಿ ನಂಬಿಕೆ ಇದೆ.

ಇತಿಹಾಸ

webdunia
WD
ತಿರುಚಾನೂರ್ ಪಟ್ಟಣದಲ್ಲಿ ವೆಂಕಟೇಶ್ವರ ದೇವಾಲಯವಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನೇರವೇರಿಸಲು ಸ್ಥಳದ ಅಭಾವದ ಹಿನ್ನೆಲೆಯಲ್ಲಿ ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು. ಮೂಲ ಸ್ಥಳದಲ್ಲಿ ಕೇವಲ ಎರಡು ಸಮಾರಂಭಗಳನ್ನು ನಡೆಸಲು ತೀರ್ಮಾನ ತೆಗೆದುಕೊಳ್ಳಲಾಯಿತು. ಆದರೆ ಸ್ಥಳಾಂತರಿತ ಜಾಗದಲ್ಲಿ ಕೂಡಾ ಸ್ಥಳದ ಅಭಾವದ ಹಿನ್ನೆಲೆಯಲ್ಲಿ ತಿರುಪತಿಗೆ ಸ್ಥಳಾಂತರಿಸಲಾಗಿದ್ದರಿಂದ ಚಿರುಚಾನೂರ್ ಹೆಚ್ಚಿನ ಮಹತ್ವ ಕಳೆದುಕೊಂಡಿತು.

12ನೇಯ ಶತಮಾನದಲ್ಲಿ ಯಾದವ್ ರಾಜರು ಶ್ರೀಕೃಷ್ಣ ಬಲರಾಮ್ ಮಂದಿರವನ್ನು ನಿರ್ಮಿಸಿದಾಗ ಚಿರುಚಾನೂರ್ ಪಟ್ಟಣ ಮತ್ತೆ ಮಹತ್ವ ಪಡೆದುಕೊಂಡಿತು.16ನೇ ಮತ್ತು 17 ನೇಯ ಶತಮಾನದಲ್ಲಿ ತಿರುಚಾನೂರ್ ವೈಭವತೆಯನ್ನು ಪಡೆದುಕೊಂಡಿತು. ಭಕ್ತರಾದ ಸುಂದರ್ ವರದರಾಜನ್ ಮಾತೆ ಪದ್ಮಾವತಿ ಮಂದಿರವನ್ನು ಪ್ರತ್ಯೇಕವಾಗಿ ನಿರ್ಮಿಸಿದರು. ಮಾತೆ ಪದ್ಮಾವತಿ ತಿರಚಾನೂರ್‌ ಮಂದಿರದ ಆವರಣದಲ್ಲಿರುವ ಕಮಲದ ಕೊಳದಲ್ಲಿ ಜನ್ಮ ತಳೆದಳು ಎಂದು ಪೌರಾಣಿಕ ಕಥೆಗಳಲ್ಲಿ ಉಲ್ಲೇಖವಾಗಿದೆ.


ಸಾವಿರಾರು ಭಕ್ತರು

webdunia
WD
ಮಂದಿರದ ಆವರಣದಲ್ಲಿ ಅನೇಕ ಸಂಖ್ಯೆಯ ಭಕ್ತರು ವಾಸವಾಗಿದ್ದಾರೆ.ಮಾತೆ ಪದ್ಮಾವತಿ ವೆಂಕಟೇಶ್ವರ ದೇವರ ಪತ್ನಿಯಾಗಿದ್ದು, ತಿರುಪತಿಯ ಪರಮ ಭಕ್ತಳಾಗಿದ್ದಾಳೆ. ಪದ್ಮಾಸನದ ಮೇಲೆ ವಿರಾಜಮಾನರಾಗಿರುವ ಪದ್ಮಾವತಿ ತಮ್ಮ ಎರಡು ಕೈಗಳಲ್ಲಿ ಕಮಲವನ್ನು ಎತ್ತಿಹಿಡಿದಿರುವ ಮೂರ್ತಿ ಭಕ್ತರಲ್ಲಿ ಗೌರವ ಭಾವನೆಯನ್ನು ಮೂಡಿಸುತ್ತದೆ. ಮಾತೆಯ ಪರಮ ಭಕ್ತರಾದ ಶ್ರೀಕೃಷ್ಣ, ಬಲರಾಮ, ಸುಂದರರಾಜಾ ಸ್ವಾಮಿ, ಮತ್ತು ಸೂರ್ಯನಾರಾಯಣ ಸ್ವಾಮಿ ಅವರ ಪ್ರತಿಮೆಗಳು ಆಕರ್ಷಕವಾಗಿವೆ.

ಮಾತೆ ವಿರಾಜಮಾನರಾಗಿ ಸಾಗುವ ಆನೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಂದಿರದಲ್ಲಿರುವ ಧ್ವಜದ ಮೇಲೆ ಆನೆಯ ಚಿಹ್ನೆಯನ್ನು ಬಳಸಿಕೊಳ್ಳಲಾಗಿದೆ.ಮಂದಿರಕ್ಕೆ ಭೇಟಿ ನೀಡುವ ಪ್ರವಾಸಿಗರು ಧಾರ್ಮಿಕತೆಯ ಸಂತಸದಿಂದ ಮರಳುತ್ತಾರೆ.


ತಲುಪುವುದು ಹೇಗೆ

ತಿರುಪತಿ ರೈಲ್ವೆ ನಿಲ್ದಾಣದಿಂದ ಕೇವಲ ಐದು ಕಿ.ಮಿ.ದೂರದಲ್ಲಿರುವ ತಿರುಚಾನೂರ್ ಪಟ್ಟಣ ಉತ್ತಮ ರಸ್ತೆಸಂಪರ್ಕವನ್ನು ಹೊಂದಿದ್ದು ತಿರುಪತಿಯಿಂದ ಸಾಕಷ್ಟು ಬಸ್‌ ಸೇವೆ ಲಭ್ಯವಿದೆ

ರಸ್ತೆ: ಹೈದ್ರಾಬಾದ್‌ನಿಂದ ತಿರುಪತಿ 547 ಕಿ.ಮಿ. ದೂರವಿದ್ದು ಉತ್ತಮ ರಸ್ತೆ ಸಂಪರ್ಕವಿದೆ.

ರೈಲು ಮಾರ್ಗ: ಹೈದ್ರಾಬಾದ್‌ನಿಂದ ತಿರುಪತಿ 547 ಕಿ.ಮಿ. ದೂರವಿದ್ದು ಉತ್ತಮ ರೈಲು ಸಂಪರ್ಕವಿದೆ.

ವಿಮಾನ:
ತಿರುಪತಿ, ಹೈದ್ರಾಬಾದ್ ಚೆನ್ನೈ, ಬೆಂಗಳೂರು ವಿಮಾನ ನಿಲ್ದಾಣಗಳಿಂದ ನೇರ ಸಂಪರ್ಕವಿದೆ.

Share this Story:

Follow Webdunia kannada