Select Your Language

Notifications

webdunia
webdunia
webdunia
webdunia

ಇಗಾಟ್‌ಪುರಿಯ ಘಟನ್‌ ದೇವಿ ಮಂದಿರ

ಇಗಾಟ್‌ಪುರಿಯ ಘಟನ್‌ ದೇವಿ ಮಂದಿರ
ಅಭಿನಯ್ ಕುಲ್‌‌ಕರ್ಣಿ
ಧಾರ್ಮಿಕ ಯಾತ್ರೆಯ ಈ ಸರಣಿಯಲ್ಲಿ ನಾವು ನಿಮ್ಮನ್ನು ಐತಿಹಾಸಿಕ ಮಂದಿರದತ್ತ ಕರೆದೊಯ್ಯಿತ್ತಿದ್ದೇವೆ. ಮುಂಬೈನಿಂದ ನಾಸಿಕ ಮಾರ್ಗವಾಗಿ ಸಾಗುವ ದಾರಿಯಲ್ಲಿ ಸಮುದ್ರ ಮಟ್ಟದಿಂದ 1900 ಅಡಿ ಎತ್ತರದಲ್ಲಿರುವ ಇಗಾಟ್‌ಪುರಿ ಎನ್ನುವ ಸಣ್ಣ ಗ್ರಾಮ ಸಿಗುತ್ತದೆ. ಇಗಾಟ್‌ಪುರಿ ಗ್ರಾಮ ಘಟನ್‌‌ದೇವಿ ಮಂದಿರದಿಂದಾಗಿ ಪ್ರಖ್ಯಾತಿ ಹೊಂದಿದೆ.

ಕ್ಯಾಮಲ್ ಕಣಿವೆಯನ್ನು ದಾಟಿದ ನಂತರ ಬಲಗಡೆಗೆ ಇಗಾಟ್‌ಪುರಿ ಗ್ರಾಮ ಸಿಗುತ್ತದೆ. ಗ್ರಾಮದಲ್ಲಿ ಘಟನ್‌ದೇವಿ ಮಂದಿರ( ಬೆಟ್ಟದ ದೇವರು) ವನ್ನು ಸುಂದರವಾಗಿ ನಿರ್ಮಿಸಲಾಗಿದೆ. ಮಂದಿರದ ಹಿಂಭಾಗದಲ್ಲಿ ಟ್ರಿಂಗಲ್‌ವಾಡಿ ಕೋಟೆ ಇದೆ. ದುರ್‌‌ವಾರ್ ಉಟ್ವಾಡ್, ಟ್ರಿಮಾಕ್ ಮತ್ತು ಹರಿಹರ್ ಹೆಸರುಳ್ಳ ಪರ್ವತಗಳ ಸಾಲುಸಾಲು ಮನೋಹರವಾಗಿ ಕಂಗೊಳಿಸುತ್ತದೆ.
WD


ಘಟನ್‌ದೇವಿ ಮಂದಿರ ಇಗಾಟ್‌‌ಪುರಿಯ ಹಚ್ಚಹಸಿರಿನ ಪಕೃತಿಯಲ್ಲಿದೆ. ಘಟನ್‌ದೇವಿ ಬೆಟ್ಟಗಳಲ್ಲಿರುವ ದುಷ್ಟಶಕ್ತಿಗಳಿಂದ ತಮ್ಮನ್ನು ಸಂರಕ್ಷಿಸುತ್ತಾಳೆ ಎನ್ನುವ ನಂಬಿಕೆಯಿಂದ ಸ್ಥಳೀಯರು ದೇವಿನ್ನು ಪೂಜಿಸುತ್ತಾರೆ. ಪ್ರತಿನಿತ್ಯ ಸಾವಿರಾರು ಭಕ್ತರು ದೇವಿಯ ದರುಶನಕ್ಕೆ ಆಗಮಿಸುತ್ತಾರೆ. ಈ ಯಾತ್ರೆಯ ಸಂದರ್ಭದಲ್ಲಿ ಪಕೃತಿಯ ಐಸಿರಿ ನಿಮ್ಮ ಕಣ್ಮನ ಸೆಳೆಯುತ್ತದೆ.

ದುರಾಸಪ್ತಸತಿಯ ವಿವರಣೆಯಂತೆ ದೇವಿಯ ಒಂಬತ್ತು ಅವತಾರಗಳಿವೆ ಎಂದು ವರ್ಣಿಸಲಾಗಿದೆ. ಅದರಲ್ಲಿ ಘಟನ್‌ದೇವಿಯ ಶೈಲಪುತ್ರಿ ಅವತಾರವೂ ಒಂದು. ದೇವಿಯ ಬಗ್ಗೆ ಪುರಾಣದಲ್ಲಿ ಕಥೆಯೊಂದು ಉಲ್ಲೇಖಿತವಾಗಿದೆ. ವಜ್ರೇಶ್ವರಿಯಿಂದ ಪುಣೆ ಬಳಿಯಲ್ಲಿರುವ ಭೀಮಾಶಂಕರ ಜ್ಯೋತಿರ್ಲಿಂಗ ನೋಡಲು ಹೊರಟಾಗ ಇಗಾಟ್‌ಪುರಿಯ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿ ಇಲ್ಲೆ ನೆಲಸಲು ನಿರ್ಧರಿಸಿದಳು ಎಂದು ವಿವರಣೆ ನೀಡಲಾಗಿದೆ. ಮರಾಠರ ಆರಾಧ್ಯದೈವ ಸಾಮ್ರಾಟ್ ಶಿವಾಜಿ ಮಹಾರಾಜ್ ಕೂಡಾ ಕಲ್ಯಾಣ ನಗರವನ್ನು ಲೂಟಿ ಮಾಡಿ ರಾಯಗಢ್‌ಗೆ ಮರಳುತ್ತಿರುವಾಗ ಮಂದಿರಕ್ಕೆ ಭೇಟಿ ನೀಡಿದ್ದ ಎಂದು ಐತಿಹಾಸಿಕ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಘಟ್ಟಗಳ ಸುಂದರವಾದ ಪ್ರಕೃತಿಯ ಮಡಿಲಲ್ಲಿರುವ ಘಟನ್‌ ದೇವಿ ಮಂದಿರ ನಿಸರ್ಗದತ್ತವಾಗಿದ್ದು, ಇಲ್ಲಿಗೆ ಭೇಟಿ ನೀಡುವುದೇ ಒಂದು ವಿಶಿಷ್ಟ ಅನುಭವ.
webdunia
WD

ಇಲ್ಲಿಗೆ ಭೇಟಿ ನೀಡುವುದು ಹೇಗೆ:
ವಿಮಾನದ ಮೂಲಕ: ಮುಂಬೈನ ಛತ್ರಪತಿ ಶಿವಾಜಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಹತ್ತಿರದ ವಿಮಾನ ನಿಲ್ದಾಣವಾಗಿದೆ.

ರೈಲು ಮೂಲಕ: ಮುಂಬೈನ ವಿ.ಟಿ ರೈಲು ನಿಲ್ದಾಣದಿಂದ ತಪೋವನ ಎಕ್ಸ್‌ಪ್ರೆಸ್ ಮೂಲಕ ಕಸಾರಾವರೆಗೆ ತಲುಪಿ, ಅಲ್ಲಿಂದ ಟ್ಯಾಕ್ಸಿಯ ಮೂಲಕ ಇಗಾಟ್‌ಪುರಿಯನ್ನು ತಲುಪಬಹುದಾಗಿದೆ.

ರಸ್ತೆ ಮೂಲಕ: ಮುಂಬೈ, ನಾಸಿಕ್, ಕಸಾರಾ ಮೂಲಕ ಇಗಾಟ್‌ಪುರಿಯನ್ನು ತಲುಪಬಹುದಾಗಿದೆ.

Share this Story:

Follow Webdunia kannada