ವೆಬ್‌ದುನಿಯಾ ತನ್ನ ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ಬಿಜಾಸನ್ ಮಾತೆಯ ಸಾನಿಧ್ಯಕ್ಕೆ ನಿಮ್ಮನ್ನು ಕರೆದೊಯ್ಯುತ್ತಿದೆ.
ಇಂಧೋರಿನಲ್ಲಿರುವ ಮಾತಾ ಬಿಜಾಸನ್ ದೇವಾಯದಲ್ಲಿ ಚೈತ್ರ ನವರಾತ್ರಿಯ ವೇಳೆ ಸಂಭ್ರಮದ ಹೊಳೆ ಉಕ್ಕುತ್ತದೆ. ನವರಾತ್ರಿಯ ವೇಳೆ ಮಾತಾರಾಣಿ ದೇವಾಲಯದಲ್ಲಿ ಭಕ್ತರ ಅತಿ ದೊಡ್ಡ ಸರತಿಯ ಸಾಲು ಕಣ್ಣಿಗೆ ಗೋಚರಿಸುತ್ತದೆ.
ಈ ದೇವಾಲಯದಲ್ಲಿ ವರ್ಷಂಪ್ರತಿ ನವರಾತ್ರಿಯ ವೇಳೆ ವಿಶೇಷ ಕಾರ್ಯಕ್ರಮಗಳು ಜರಗುತ್ತಿದ್ದು, ಈ ಸಂದರ್ಭದಲ್ಲಿ ನಡೆಯುವ ಶತಚಂಡಿ ಮಹಾಯಜ್ಞದಲ್ಲಿ ಭಕ್ತರು ಭಕ್ತಿಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ.ವೈಷ್ಣವ ದೇವಿ ಮಾತೆಯಂತೆಯೇ ಇಲ್ಲಿಯೂ ಸಹ ಕಲ್ಲಿನ ಮೂರ್ತಿ ಇದೆ. ಇಲ್ಲಿನ ಪೂಜಾರಿ ಹೇಳುವಂತೆ ಇದು ಸ್ವಯಂಭು ಮೂರ್ತಿ. ಆದರೆ ಇವುಗಳ ಐತಿಹಾಸಿಕ ಮೂಲಗಳ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಮೂರ್ತಿಗಳು ಸಾವಿರಾರು ವರ್ಷಗಳಿಂದ ಇಲ್ಲಿ ಸ್ಥಾಪಿತವಾಗಿದ್ದು ತಲೆತಲಾಂತರದ ಮಂದಿ ಇದನ್ನು ಪೂಜೆ ಮಾಡುತ್ತಿದ್ದಾರೆ ಎಂಬುದು ಮಾತಾ ಬಿಜಾಸನ ದೇವಾಲಯದ ಪೂಜಾರಿಯ ನಂಬುಗೆ.