Select Your Language

Notifications

webdunia
webdunia
webdunia
webdunia

ಅಹಮದಾಬಾದ್‌ನ ಜಗನ್ನಾಥ ರಥಯಾತ್ರೆ

ಅಹಮದಾಬಾದ್‌ನ ಜಗನ್ನಾಥ ರಥಯಾತ್ರೆ
ಈ ಸಲದ ಧಾರ್ಮಿಕ ಯಾತ್ರೆಯಲ್ಲಿ ನಮ್ಮ ಪಯಣ, ಜಗನ್ನಾಥ ದೇವರ ರಥಯಾತ್ರಾ ಹಬ್ಬ (ದೇವರ ಪ್ರತಿಮೆಯನ್ನಿರಿಸಿದ ರಥವನ್ನು ಎಳೆಯುವ ಮೆರವಣಿಗೆ) ವೀಕ್ಷಿಸಲು ಗುಜರಾತ್‌ಗೆ. ಪ್ರತಿ ವರ್ಷ ಆಷಾಢ ಶುದ್ಧ ದ್ವಿತೀಯಾದಂದು ಜರುಗುವ ಮೆರವಣಿಗೆಯಲ್ಲಿ ಸಾಗೋರೊಪಾದಿಯಲ್ಲಿ ಯಾತ್ರಾರ್ಥಿಗಳು ಪಾಲ್ಗೊಳ್ಳುತ್ತಾರೆ.
WD

ಈ ದಿನದಂದು ಅಹಮದಾಬಾದ್‌ನ ಜಗನ್ನಾಥ ದೇವಾಲಯದಿಂದ ಹಿರಿದಾದ ಮೆರವಣಿಗೆಯೊಂದು ಮೊದಲ್ಗೊಳ್ಳುತ್ತದೆ. ಮೆರವಣಿಗೆಯಲ್ಲಿ ಮೂರು ರಥಗಳಿರುತ್ತವೆ. ಅವುಗಳಲ್ಲಿ ಮೊದಲನೇಯದು ಜಗನ್ನಾಥ ದೇವರದು, ಎರಡನೇಯದು ಅವರ ತಂಗಿ ಸುಭದ್ರೆ ಮತ್ತು ಮೂರನೇಯದು ಅಣ್ಣ ಬಲರಾಮರದು. ನಗರದ ಎಲ್ಲಾ ರಸ್ತೆಗಳ ಮೂಲಕ ಯಾತ್ರೆಯು ಹಾದು ಹೋಗುತ್ತದೆ. ಜಾತ್ರೆಯಲ್ಲಿ ನೂರಾರು ಸಂತರು ಮತ್ತು ಸಾವಿರಾರು ಭಕ್ತಾದಿಗಳು ಭಾಗವಹಿಸುತ್ತಾರೆ ಮತ್ತು ಇಡೀ ಪರಿಸರದಲ್ಲಿ ಶ್ರದ್ಧೆ ಮತ್ತು ದೈವೀಕತೆಯ ಕಳೆ ತುಂಬಿರುತ್ತದೆ.

ಅಖಾಡಗಳು(ಜನರು ವ್ಯಾಯಾಮ ಮಾಡುವ ಸಾಂಪ್ರದಾಯಿಕ ವ್ಯಾಯಾಮ ಶಾಲೆಗಳು) ಜಾತ್ರೆಯ ಮುಂದಾಳತ್ವ ವಹಿಸುತ್ತವೆ ಮತ್ತು ಅಖಾಡದ ಸದಸ್ಯರು ಜಗನ್ನಾಥ ದೇವರ ಪ್ರತಿಯಾಗಿ ತಮ್ಮ ಶ್ರದ್ಧೆಯನ್ನು ವ್ಯಕ್ತ ಪಡಿಸಲು ವಿವಿಧ ರೀತಿಯ ರೋಮಾಂಚಕಾರಿ ಕಸರತ್ತುಗಳನ್ನು ಪ್ರದರ್ಶಿಸುತ್ತಾರೆ.
webdunia
WD

ಇಡೀ ನಗರ ಸುಂದರ ಬೆಳದಿಂಗಳ ಅಂಗಳದಂತೆ ಗೋಚರಿಸುತ್ತದೆ. ನಗರದ ಸಂದಿಗೊಂದಿಗಳು ಸಹ ಜಗನ್ನಾಥ ದೇವರ ಶ್ರದ್ಧಾ ಧಾರೆಯಲ್ಲಿ ಮಿಂದೇಳುತ್ತದೆ. ರಸ್ತೆಗಳಲ್ಲಿ ರಥಯಾತ್ರೆಯು ಸಾಗಿಬರುವಾಗ ಜನ ಜಗನ್ನಾಥ ದೇವರಿಗೆ ಪುಷ್ಪಗಳನ್ನು ಅರ್ಪಿಸಿ ಎದುರುಗೊಳ್ಳುತ್ತಾರೆ. ಪ್ರತಿಯೊಬ್ಬರು ಜಗನ್ನಾಥ ದೇವರ ಕಿರು ದರ್ಶನಕ್ಕಾಗಿ ತವಕಿಸುತ್ತಾರೆ.

webdunia
WD
ಇಲ್ಲಿನ ಸಂಪ್ರದಾಯದಂತೆ, ಜಗನ್ನಾಥ ದೇವಾಲಯಕ್ಕೆ ಮೊದಲು ಭೇಟಿ ನೀಡುವುದು ಆನೆ (ಗಜರಾಜ) ಮತ್ತು ತದನಂತರ ರಾಜ್ಯದ ಹಿರಿಯ ಅಧಿಕಾರಿ (ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿ) ಚಿನ್ನದ ಪೊರಕೆಯಿಂದ ಸ್ಥಳವನ್ನು ಶುಚಿಗೊಳಿಸುತ್ತಾರೆ, ಆನಂತರ ರಥ ನಗರದತ್ತ ಚಲಿಸಲು ಆರಂಭಿಸುತ್ತದೆ. ಮುಂಜಾನೆ ಆರಂಭಗೊಳ್ಳುವ ಯಾತ್ರೆ ಸರಸ್‌ಪುರ್ ಬಳಿ ವಿಶ್ರಾಂತಿಗಾಗಿ ಕೆಲ ಕಾಲ ತಂಗುತ್ತದೆ. ಈ ವಿಶ್ರಾಂತಿಯ ವೇಳೆ ರಥಯಾತ್ರೆಯಲ್ಲಿ ಭಾಗವಹಿಸುತ್ತಿರುವ ಶ್ರದ್ಧಾಳುಗಳಿಗೆ ಆಹಾರ ಒದಗಿಸಲಾಗುತ್ತದೆ. ಇಲ್ಲಿ ಸುಮಾರು ಒಂದು ಲಕ್ಷ ಭಕ್ತಾದಿಗಳು ಆಹಾರ ಸ್ವೀಕರಿಸುತ್ತಾರೆ ಎಂದು ಹೇಳಲಾಗುತ್ತದೆ.

ಇತಿಹಾಸ: ಜಗನ್ನಾಥ ದೇವಾಲಯದ ಇತಿಹಾಸವು 443 ವರ್ಷಗಳಷ್ಟು ಹಿಂದಿನದು. 125 ವರ್ಷಗಳ ಹಿಂದೆ ನರಸಿಂಗಾಜಿ ಎಂಬ ದೇವಾಲಯದ ಅರ್ಚಕರ ಕನಸಿನಲ್ಲಿ ಕಾಣಿಸಿಕೊಂಡ ಜಗನ್ನಾಥ ದೇವರು ರಥಯಾತ್ರೆಯನ್ನು ಕೈಗೊಳ್ಳಲು ಆದೇಶಿಸಿದರು ಎಂದು ಹೇಳಲಾಗುತ್ತದೆ. ಆರ್ಚಕರು ಈ ಆದೇಶವನ್ನು ಪಾಲಿಸಿದರು ಮತ್ತು ಅಂದಿನಿಂದ ಇದು ಸಂಪ್ರದಾಯವಾಗಿ ಬೆಳೆದು ಬಂದಿದೆ. ಭಕ್ತಾದಿಗಳ ನಂಬಿಕೆಯ ಪ್ರಕಾರ ಜಗನ್ನಾಥ ದೇವರ ದರ್ಶನ ಪಡೆದವರನ್ನು ದೇವರು ಹರಸುತ್ತಾನೆ ಮತ್ತು ದೇವರ ರಥವನ್ನು ಎಳೆದರೆ ಜಗನ್ನಾಥ ದೇವರು ಅಂತಹವರ ಬದುಕಿನ ಬಂಡಿಯನ್ನು ಉಜ್ವಲ ಮತ್ತು ಸಮೃದ್ದ ಭವಿಷ್ಯದೆಡೆಗೆ ಒಯ್ಯುತ್ತಾನೆ.

ಸಾಂಪ್ರದಾಯಿಕವಾಗಿ ರಥಯಾತ್ರೆಯ ರಥವನ್ನು ಎಳೆಯುವ ಅಧಿಕಾರ ಅಂಬಿಗರ ಸಮುದಾಯಕ್ಕೆ ಮಾತ್ರ. ಆದರೆ ಇತ್ತೀಚಿನ ದಿನಗಳಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ರಥವನ್ನು ಎಳೆಯಲು ಮತ್ತು ಜಗನ್ನಾಥ ದೇವರ ಸೇವೆ ಮಾಡಲು ಬಯಸುತ್ತಾರೆ.
webdunia
WD

ರಥಯಾತ್ರೆಯನ್ನು ಸಾಮಾಜಿಕ ಸಾಮರಸ್ಯದ ದ್ಯೋತಕವಾಗಿ ಪರಿಗಣಿಸಲಾಗುತ್ತದೆ. ಈ ದಿನ ಮುಸ್ಲಿಮರು ಜಗನ್ನಾಥ ದೇವರ ಉಪಾಸಕರನ್ನು ಸ್ವಾಗತಿಸುತ್ತಾರೆ. ರಥಯಾತ್ರೆಯ ಸಂದರ್ಭದಲ್ಲಿ ಹೆಸರು ಮತ್ತು ಉದ್ದುಗಳನ್ನು ದೇವರಿಗೆ ಅರ್ಪಿಸಲಾಗುತ್ತದೆ. ಕಿಚಿಡಿ(ಅನ್ನ ಮತ್ತು ಧಾನ್ಯಗಳ ಮಿಶ್ರಣದಿಂದ ತಯಾರಿಸಿದ ವ್ಯಂಜನ), ಮತ್ತು ಕುಂಬಳಕಾಯಿಯ ವ್ಯಂಜನವನ್ನು ದೇವರಿಗೆ ಪ್ರಸಾದ ರೂಪವಾಗಿ ಸಮರ್ಪಿಸಲಾಗುತ್ತದೆ.

ಹೋಗುವುದು ಹೇಗೆ: ಅಹಮದಾಬಾದ್ ದೇಶದ ಎಲ್ಲಾ ಭಾಗಗಳಿಂದಲೂ ರಸ್ತೆ, ರೈಲು ಮತ್ತು ವಿಮಾನ ಸೌಕರ್ಯಗಳ ಸುಲಭ ಸಂಪರ್ಕ ಹೊಂದಿದೆ.

Share this Story:

Follow Webdunia kannada