Select Your Language

Notifications

webdunia
webdunia
webdunia
webdunia

ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ

ಅರ್ಧ ಶಕ್ತಿ ಪೀಠ: ನಾಸಿಕ್ ಸಪ್ತಶೃಂಗಿ ದೇವಿ
, ಭಾನುವಾರ, 9 ನವೆಂಬರ್ 2008 (14:45 IST)
ಮಹಾರಾಷ್ಟ್ರದಲ್ಲಿರುವ ಮೂರುವರೆ ಶಕ್ತಿ ಪೀಠಗಳಲ್ಲಿ ಸಪ್ತಶೃಂಗಿ ದೇವಿಯ ಅರ್ಧ ಪೀಠ ಇರುವುದು ನಾಸಿಕ್‌ನಿಂದ ಸುಮಾರು 65 ಕಿ.ಮೀ. ದೂರದ ಅಂತರದಲ್ಲಿ. ಸಹ್ಯಾದ್ರಿ ಪರ್ವತ ಶ್ರೇಣಿಯ ಬೆಟ್ಟದಲ್ಲಿ ಸಮುದ್ರ ಮಟ್ಟದಿಂದ 4,800 ಅಡಿ ಎತ್ತರದಲ್ಲಿದೆ ಈ ಪವಿತ್ರ ಕ್ಷೇತ್ರ.

ಇಲ್ಲಿ ಒಂದು ಕಡೆಯಿಂದ ದಟ್ಟವಾದ ಕಣಿವೆ ಮತ್ತೊಂದು ಕಡೆಯಿಂದ ಬೆಟ್ಟಗುಡ್ಡಗಳೊಂದಿಗೆ ಹಸಿರು ವನರಾಶಿ. ಇಲ್ಲಿಗೆ ಬಂದರೆ, ಶ್ರೀದೇವಿಯೇ ನಿಮ್ಮನ್ನು ಸುಂದರ ಪ್ರಕೃತಿಗೆ ಪರಿಚಯಿಸುತ್ತಿದ್ದಾಳೆ ಎಂಬ ಅನುಭವ ಉಂಟಾಗುತ್ತದೆ.

ಮಹಿಷಾಸುರನ ಉಪಟಳ ತಾಳಲಾರದ ದೇವಾನುದೇವತೆಗಳು ದೇವಿಯನ್ನು ಒಮ್ಮನಸ್ಸಿನಿಂದ ಪ್ರಾರ್ಥಿಸಿದಾಗ, ದೇವಿಯು ಸಪ್ತಶೃಂಗಿಯ ರೂಪದಲ್ಲಿ ಆವಿರ್ಭವಿಸಿದಳು ಎನ್ನಲಾಗುತ್ತಿದೆ. ಪುರಾಣಗಳಲ್ಲಿರುವಂತೆ ವಿಶ್ವಾದ್ಯಂತ 108 ಶಕ್ತಿ ಪೀಠಗಳಿದ್ದು, ಅವುಗಳಲ್ಲಿ ಮೂರುವರೆ ಶಕ್ತಿ ಪೀಠಗಳು ಮಹಾರಾಷ್ಟ್ರ ರಾಜ್ಯದಲ್ಲೇ ಇವೆ.
WD


ಸಪ್ತಶೃಂಗಿ ಪೀಠವನ್ನು ಅರ್ಧಶಕ್ತಿ ಪೀಠ ಎಂದು ಪರಿಗಣಿಸಲಾಗುತ್ತಿದ್ದು, ಪುರಾತನ ಹಿಂದೂ ಪುರಾಣಗಳಲ್ಲಿ ಬೇರಾವುದೇ ಅರ್ಧ ಶಕ್ತಿಪೀಠದ ಉಲ್ಲೇಖ ಇಲ್ಲ ಎನ್ನಲಾಗುತ್ತಿದೆ. ಈ ದೇವಿಯನ್ನು ಬ್ರಹ್ಮಸ್ವರೂಪಿಣಿ ಮಾತೆ ಎಂದೂ ಕರೆಯಲಾಗುತ್ತದೆ.

ಬ್ರಹ್ಮದೇವನ ಕಮಂಡಲದಿಂದ ಹೊರಬಂದ ಗಿರಿಜಾ ಮಹಾನದಿಯು ಸಪ್ತ ಶೃಂಗಿಯ ಮತ್ತೊಂದು ರೂಪ ಎನ್ನಲಾಗುತ್ತಿದೆ. ಸಪ್ತ ಶೃಂಗಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯರ ಐಕ್ಯರೂಪವಾಗಿಯೂ ಆರಾಧಿಸಲಾಗುತ್ತದೆ. ರಾಮ, ಸೀತೆ ಮತ್ತು ಲಕ್ಷ್ಮಣರು ನಾಸಿಕ್ ಬಳಿಯ ತಪೋವನಕ್ಕೆ ಬಂದಾಗ ಅವರು ಈ ಕ್ಷೇತ್ರಕ್ಕೆ ಭೇಟಿ ಇತ್ತಿದ್ದರು ಎಂದೂ ಹೇಳಲಾಗುತ್ತಿದೆ.

webdunia
WD
ಸ್ಥಳೀಯರ ಬಾಯಲ್ಲಿ ಕೇಳಿಬರುತ್ತಿರುವ ಕಥೆಯ ಪ್ರಕಾರ, ಅದೊಂದು ದಿನ ವ್ಯಕ್ತಿಯೊಬ್ಬ ಜೇನುಗೂಡನ್ನು ನಾಶಪಡಿಸುತ್ತಿದ್ದಾಗ ಈ ವಿಗ್ರಹವನ್ನು ಕಂಡನಂತೆ. ಸಪ್ತಶೃಂಗಿ ದೇವಿಯ ಮೂರ್ತಿಯು 8 ಅಡಿ ಎತ್ತರವಿದೆ. ಮಹಿಷಾಸುರನ ವಧೆಗಾಗಿ ದೇವಾನುದೇವತೆಗಳು ಅವರವರ ಆಯುಧಗಳನ್ನು ಶ್ರೀದೇವಿಗೆ ನೀಡಿದ್ದು, ಅವುಗಳನ್ನು ಆಕೆ 18 ಹಸ್ತಗಳಲ್ಲಿ ಹಿಡಿದುಕೊಂಡಂತಿರುವ ಅನನ್ಯ ವಿಗ್ರಹವಿದು.

ಈಶ್ವರನ ತ್ರಿಶೂಲ, ವಿಷ್ಣುವಿನ ಚಕ್ರ, ವರುಣನ ಶಂಖ, ಅಗ್ನಿಯ ಜ್ವಾಲಾಯುಧ, ವಾಯುವಿನ ಬಿಲ್ಲುಬಾಣ, ಇಂದ್ರನ ವಜ್ರಾಯುಧ, ಯಮನ ದಂಡ, ದಕ್ಷ ಪ್ರಜಾಪತಿಯ ಸ್ಫಟಿಕ ಮಾಲೆ, ಬ್ರಹ್ಮನ ಕಮಂಡಲ, ಸೂರ್ಯನ ಕಿರಣ, ಕಾಲಸ್ವರೂಪಿಯ ಖಡ್ಗ, ಕ್ಷೀರಸಾಗರನ ಮಾಲೆ, ಕುಂಡಲ ಮತ್ತು ಕೈಕಡಗ, ವಿಶ್ವಕರ್ಮನ ಪರಶು ಮತ್ತಿತರ ಆಯುಧಗಳು 18 ಹಸ್ತಗಳಲ್ಲಿ ರಾರಾಜಿಸುತ್ತಿವೆ.
webdunia
WD


ಮಂದಿರಕ್ಕೆ 472 ಮೆಟ್ಟಿಲುಗಳನ್ನೇರಿ ಸಾಗಬೇಕು. ಚೈತ್ರ ಮತ್ತು ಆಶ್ವೀಜ ನವರಾತ್ರಿಯಲ್ಲಿ ಇಲ್ಲಿ ಉತ್ಸವಾದಿಗಳು ನೆರವೇರುತ್ತವೆ.

ಚೈತ್ರ ಮಾಸದಲ್ಲಿ ಶ್ರೀದೇವಿಯು ಹಸನ್ಮುಖಿಯಾಗಿರುತ್ತಾಳೆ ಮತ್ತು ನವರಾತ್ರಿ ಸಂದರ್ಭದಲ್ಲಿ ಆಕೆ ಗಂಭೀರ ವದನೆಯಾಗಿರುತ್ತಾಳೆ ಎಂಬ ನಂಬಿಕೆ ಇಲ್ಲಿದೆ. ಈ ಪರ್ವತ ಪ್ರದೇಶದಲ್ಲಿ ಒಟ್ಟು 108 ಜಲ ಕುಂಡಗಳಿದ್ದು, ಇದು ಈ ತಾಣದ ಭಕ್ತಿ, ಶಕ್ತಿ ಮತ್ತು ಸೌಂದರ್ಯವನ್ನು ಮತ್ತಷ್ಟು ವೃದ್ಧಿಸಿದೆ.

webdunia
WD
ಇಲ್ಲಿಗೆ ಹೋಗುವುದು ಹೇಗೆ?:

ವಾಯು ಮಾರ್ಗ: ಸಮೀಪದ ವಿಮಾನ ನಿಲ್ದಾಣವೆಂದರೆ ಮುಂಬಯಿ. ಅಲ್ಲಿಂದ ನಾಸಿಕ್‌ಗೆ ಬಸ್ ಅಥವಾ ಖಾಸಗಿ ವಾಹನಗಳ ಮೂಲಕ ಹೋಗಬಹುದು.

ರೈಲು ಮಾರ್ಗ: ನಾಸಿಕ್ ರೈಲು ನಿಲ್ದಾಣವು ದೇಶದ ಪ್ರಮುಖ ರೈಲು ನಿಲ್ದಾಣಗಳಿಂದ ಉತ್ತಮ ಸಂಪರ್ಕ ಹೊಂದಿದೆ. ರೈಲು ಅತ್ಯುತ್ತಮ ಸಂಚಾರಿ ಸಾಧನವಾಗಲೂಬಹುದು.

ರಸ್ತಮಾರ್ಗ: ಸಪ್ತಶೃಂಗಿಯನಾಸಿಕ್‌ನಿಂದ 65 ಿ.ೀ. ದೂರದಲ್ಲಿದೆ. ನಾಸಿಕ್‌ನಿಂಮಹಾರಾಷ್ಟ್ರಸ್ತಸಾರಿಗಸಂಸ್ಥೆಬಸ್ಸುಗಳಅಥವಖಾಸಗಿ ವಾಹನಗಳಸಾಕಷ್ಟಿವೆ.

Share this Story:

Follow Webdunia kannada