Select Your Language

Notifications

webdunia
webdunia
webdunia
webdunia

ದಟ್ಟವಾದ ಕಾಡುಗಳ ಮಧ್ಯೆ ನೆಲೆಗೊಂಡ ಮಲೆ ಮಹದೇಶ್ವರ ಬೆಟ್ಟ

ದಟ್ಟವಾದ ಕಾಡುಗಳ ಮಧ್ಯೆ ನೆಲೆಗೊಂಡ ಮಲೆ ಮಹದೇಶ್ವರ ಬೆಟ್ಟ
ಬೆಂಗಳೂರು , ಬುಧವಾರ, 3 ಆಗಸ್ಟ್ 2016 (15:27 IST)
ಮೈಸೂರಿನಿಂದ 135 ಕಿಮೀ ದೂರದಲ್ಲಿ, ಹೋಗೇನಕಲ್‌ನಿಂದ 98ಕಿಮೀ ದೂರದಲ್ಲಿರುವ ಮತ್ತು ಬೆಂಗಳೂರಿನಿಂದ 209 ಕಿಮೀ ದೂರವಿರುವ ಮಲೆ ಮಹದೇಶ್ವರ ಬೆಟ್ಟವು ಚಾಮರಾಜನಾಗರದ ಕೊಳ್ಳೆಗಾಲದ ಪೂರ್ವಭಾಗದಲ್ಲಿರುವ ಪವಿತ್ರ ಯಾತ್ರಾ ಸ್ಥಳ. ಸುಮಾರು 3000 ಅಡಿ ಎತ್ತರದಲ್ಲಿ ಇದು ನೆಲೆಗೊಂಡಿದೆ. ಮಲೆ ಮಹದೇಶ್ವರ ಬೆಟ್ಟ ಸುತ್ತಲೂ ದಟ್ಟವಾದ ಕಾಡುಗಳಿಂದ ಆವರಿಸಿದ್ದು, ಮಹದೇಶ್ವರನಿಗೆ ಮುಡಿಪಾದ ಮಲೈ ಮಹದೇಶ್ವರ ದೇವಾಲಯಕ್ಕೆ ಹೆಸರಾಗಿದೆ.
 
ಪ್ರಾಚೀನ ಮತ್ತು ಪವಿತ್ರ ಮಲೆ ಮಹದೇಶ್ವರ ಅತ್ಯಂತ ಜನಪ್ರಿಯ ಶೈವ ಯಾತ್ರಾಸ್ಥಳವಾಗಿದೆ. ದೇವಾಲಯವು ಪೂರ್ವಘಟ್ಟದ 77 ಬೆಟ್ಟಗಳಿಂದ ಸುತ್ತುವರಿದಿದೆ. ಕರ್ನಾಟಕ ಮತ್ತು ತಮಿಳುನಾಡಿದ ಯಾತ್ರಿಗಳು ಅಪಾರ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಾರೆ. 
ಮಹದೇಶ್ವರ ದೇವಾಲಯವನ್ನು ಕುರುಬ ಗೌಡ ಭೂಮಾಲೀಕರಾದ ಜುಂಜೆ ಗೌಡ ನಿರ್ಮಿಸಿದ್ದರು. ಮಹದೇಶ್ವರ ಭಗವಾನ್ ಶಿವನ ಅವತಾರವೆಂದು ನಂಬಲಾಗಿದೆ.

ಸಂತ ಮಹದೇಶ್ವರ 15ನೇ ಶತಮಾನದಲ್ಲಿ ಪ್ರಾಯಶ್ಚಿತಕ್ಕಾಗಿ ಇಲ್ಲಿಗೆ ಆಗಮಿಸಿ ಮಂದಿರದ ಗರ್ಭಗುಡಿಯಲ್ಲಿ ಲಿಂಗದ ರೂಪದಲ್ಲಿ ಈಗಲೂ ಪ್ರಾಯಶ್ಚಿತ ನಿರ್ವಹಿಸುತ್ತಿದ್ದಾರೆಂದು ನಂಬಲಾಗಿದೆ. ಮಲೆ ಮಹದೇಶ್ವರ ಸ್ವಾಮಿ ಪುಲಿ ವಾಹನ ಎಂಬ ಹುಲಿಯ ಸವಾರಿ ಮಾಡುತ್ತಿದ್ದು, ಬೆಟ್ಟದಲ್ಲಿ ಅನೇಕ ಪವಾಡಗಳನ್ನು ಮಾಡಿ ಅಲ್ಲಿ ವಾಸಿಸುತ್ತಿದ್ದ ಜನರನ್ನು, ಸಂತರನ್ನು ರಕ್ಷಿಸಿದ್ದ ಎಂಬ ಪ್ರತೀತಿ ಇದೆ. 
 ಈ ಸ್ಥಳವು ಪ್ರಕೃತಿ ಸೌಂದರ್ಯಕ್ಕೆ ಕೂಡ ಹೆಸರಾಗಿದ್ದು, ಕಾವೇರಿ ಮತ್ತು ಪಾಲಾರ್ ನದಿಗಳಿಂದ ಸುತ್ತುವರಿದ ದಟ್ಟವಾದ ಕಾಡಿನಲ್ಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವಡೋದರ ಕಾಶಿ ವಿಶ್ವನಾಥ ಮಂದಿರ