Select Your Language

Notifications

webdunia
webdunia
webdunia
webdunia

ಗವಿಗಂಗಾಧರೇಶ್ವರ: ಪ್ರಾಚೀನ ಶಿಲ್ಪಿಗಳ ವಾಸ್ತುಶಾಸ್ತ್ರ ಜ್ಞಾನಕ್ಕೆ ನಿದರ್ಶನ

ಗವಿಗಂಗಾಧರೇಶ್ವರ: ಪ್ರಾಚೀನ ಶಿಲ್ಪಿಗಳ ವಾಸ್ತುಶಾಸ್ತ್ರ ಜ್ಞಾನಕ್ಕೆ ನಿದರ್ಶನ
ಬೆಂಗಳೂರು , ಮಂಗಳವಾರ, 9 ಆಗಸ್ಟ್ 2016 (20:10 IST)
ಗವಿ ಗಂಗಾಧರೇಶ್ವರ ದೇವಾಲಯವು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯಲ್ಲಿ ನೆಲೆಗೊಂಡಿದೆ. ಸಿಟಿ ಮಾರುಕಟ್ಟೆಯಿಂದ ಕೇವಲ 6 ಕಿಮೀ ದೂರದಲ್ಲಿದೆ. ಗವಿಪುರಂ ಗುಹಾ ದೇವಾಲಯ ಅಥವಾ ಗವಿ ಗಂಗಾಧರೇಶ್ವರ ದೇವಾಲಯವು ಭಾರತದ ಶಿಲಾ ಕೆತ್ತನೆಯ ವಾಸ್ತುಶಾಸ್ತ್ರಕ್ಕೆ ನಿದರ್ಶನವಾಗಿದೆ.

ದೇವಾಲಯದ ಆವರಣದಲ್ಲಿ ಕೆಲವು ನಿಗೂಢ ಕಲ್ಲಿನ ತಟ್ಟೆಗಳ ಜತೆಗೆ ವರ್ಷದ ಒಂದು ನಿರ್ದಿಷ್ಟ ಕಾಲದಲ್ಲಿ ಸೂರ್ಯನ ಬೆಳಕು ಗರ್ಭಗುಡಿಯೊಳಗೆ ಪ್ರವೇಶಿಸುವಂತಹ ನಿಖರ ಯೋಜನೆಯಿಂದ ಗವಿ ಗಂಗಾಧರೇಶ್ವರ ದೇವಾಲಯ ಜನಪ್ರಿಯವಾಗಿದೆ.
 
ಗವಿ ಗಂಗಾಧರೇಶ್ವರ ಅತ್ಯಂತ ಪ್ರಾಚೀನ ದೇವಾಲಯವಾಗಿದ್ದು, ಬಹುಶಃ 9ನೇ ಶತಮಾನದಲ್ಲಿ ಬೃಹತ್ ಗಾತ್ರದ ಕಲ್ಲಿನಿಂದ ಕೆತ್ತಲಾಗಿದೆ. ಈ ದೇವಾಲಯವು ಭಗವಾನ್ ಶಿವನಿಗೆ ಅರ್ಪಿತವಾಗಿದ್ದು, ಶಿವಲಿಂಗ ಮುಖ್ಯ ಮೂರ್ತಿಯಾಗಿದೆ. ದೇವಾಲಯದ ಮುಂಭಾಗದಲ್ಲಿ ಭಗವಾನ್ ಶಿವನ ವಾಹನ ನಂದಿ ಕೆತ್ತನೆಯನ್ನು ಕಾಣಬಹುದು.
 
ಮುಖ್ಯ ದ್ವಾರಕ್ಕೆ ಎಡಭಾಗದಲ್ಲಿ ಶಕ್ತಿ ಗಣಪತಿಯ ಮೂರ್ತಿಯಿದ್ದು, 12 ಕೈಗಳಿಂದ ಕೂಡಿದೆ. ಆವರಣದಲ್ಲಿ ನಾಲ್ಕು ಸ್ತಂಭಗಳಿದ್ದು, ಡಮರು ಮತ್ತು ತ್ರಿಶೂಲ ಮತ್ತು ಎರಡು ಫ್ಯಾನ್‌ಗಳಿವೆ.
 
ಅಗ್ನಿ ದೇವರ ಅಪರೂಪದ ಮೂರ್ತಿ ಇಡೀ ದಕ್ಷಿಣ ಭಾರತದಲ್ಲೇ ವಿಶಿಷ್ಟವಾಗಿದೆ. ಅಗ್ನಿ ದ್ವಿಶಿರಗಳಿಂದ ಕೂಡಿದ್ದು, ಏಳು ಕೈಗಳು ಮತ್ತು ಮೂರು ಕಾಲುಗಳಿವೆ. ಈ ದೇವರನ್ನು ಪೂಜಿಸುವುದರಿಂದ ಕಣ್ಣಿನ ಸಮಸ್ಯೆಗಳು ನಿವಾರಣೆಯಾಗುತ್ತದೆಂದು ನಂಬಲಾಗಿದೆ. ಮಕರ ಸಂಕ್ರಾಂತಿಯ ಜನವರಿ 14 ಅಥವಾ 15ರಂದು ಪ್ರತಿವರ್ಷ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ. ಅದೊಂದು ವಿಶೇಷ ಸಂದರ್ಭವಾಗಿದ್ದು, ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ನೇರವಾಗಿ ಒಂದು ಗಂಟೆಯ ಕಾಲ ಬೀಳುತ್ತದೆ.
 
ಮಂದಿರದ ಹೊರಗೆ ಕಲ್ಲಿನಿಂದ ಕೆತ್ತಿದ ನಂದಿಯ ಕೊಂಬುಗಳ ನಡುವೆ ಸೂರ್ಯನ ಕಿರಣಗಳು ತೂರಿ ನೇರವಾಗಿ ಶಿವಲಿಂಗದ ಮೇಲೆ ಬೀಳುವಂತೆ ಮಾಡಿದ ಪ್ರಾಚೀನ ಶಿಲ್ಪಿಗಳ ವಾಸ್ತುಶಾಸ್ತ್ರ ಮತ್ತು ಖಗೋಳಶಾಸ್ತ್ರದ ಜ್ಞಾನಕ್ಕೆ ನಿದರ್ಶನವಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಕೂಡಲಸಂಗಮದಲ್ಲಿ 850 ವರ್ಷ ಪ್ರಾಚೀನ ಸಂಗಮೇಶ್ವರ ದೇವಾಲಯ