Select Your Language

Notifications

webdunia
webdunia
webdunia
webdunia

ಜನಪ್ರಿಯ ಜೈನ ಯಾತ್ರಾಸ್ಥಳ ಶ್ರವಣಬೆಳಗೊಳದ ಬಾಹುಬಲಿ

ಜನಪ್ರಿಯ ಜೈನ ಯಾತ್ರಾಸ್ಥಳ ಶ್ರವಣಬೆಳಗೊಳದ ಬಾಹುಬಲಿ
ಬೆಂಗಳೂರು , ಶನಿವಾರ, 25 ಜೂನ್ 2016 (20:24 IST)
ಶ್ರವಣಬೆಳಗೊಳ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಜೈನ ಯಾತ್ರಾಸ್ಥಳವಾಗಿದೆ. ಪಟ್ಟಣದ ಮಧ್ಯದಲ್ಲಿರುವ ಕೊಳದಿಂದ ಈ ಪ್ರದೇಶಕ್ಕೆ ಹೆಸರು ಬಂದಿದೆ.(ಬೆಳ-ಕೊಳ ಅಂದರೆ ಬಿಳಿಯ ಕೊಳ). ಶ್ರವಣಬೆಳಗೊಳ ಬಾಹುಬಲಿ ಪ್ರತಿಮೆಗೆ ಪ್ರಖ್ಯಾತವಾಗಿದ್ದು, ಜಗತ್ತಿನಲ್ಲಿ ಅತೀ ಎತ್ತರದ ಶಿಲೆಯ ಪ್ರತಿಮೆ ಎಂದು ಹೆಸರು ಪಡೆದಿದೆ. 58 ಅಡಿ ಎತ್ತರದ ಈ ಮೂರ್ತಿಯನ್ನು ಗ್ರಾನೈಟ್‌ನ ಏಕಶಿಲೆಯಿಂದ ಕೆತ್ತಲಾಗಿದೆ.  3347 ಅಡಿ ಎತ್ತರದ ಬೆಟ್ಟದ ಮೇಲೆ ಗೋಮಟೇಶ್ವರ ಮಂದಿರವನ್ನು ನಿರ್ಮಿಸಲಾಗಿದೆ.

ಈ ಬೆಟ್ಟವನ್ನು ವಿಂದ್ಯಾಗಿರಿ ಎಂದು ಕರೆಯಲಾಗುತ್ತದೆ. ಬೆಟ್ಟದ ಅಡಿಯಿಂದ ಈ ದೇವಾಲಯ ತಲುಪಲು 620 ಮೆಟ್ಟಿಲುಗಳನ್ನು ಏರಬೇಕಾಗುತ್ತದೆ. ಮಂದಸ್ಮಿತ ಬಾಹುಬಲಿಯ  ನಗ್ನ ಮೂರ್ತಿಯನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಕೆತ್ತಲಾಗಿದೆ.
ಬಾಹುಬಲಿ ಮೊದಲ ಜೈನ ತೀರ್ಥಂಕರ ಆದಿನಾಥನ ಪುತ್ರ.

ಆದಿನಾಥನಿಗೆ 99 ಮಂದಿ ಮಕ್ಕಳಿದ್ದು, ರಾಜ್ಯಭಾರವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದಾಗ ಇಬ್ಬರು ಸೋದರರಾದ ಬಾಹುಬಲಿ ಮತ್ತು ಭರತನ ನಡುವೆ ಸಾಮ್ರಾಜ್ಯಕ್ಕಾಗಿ ದೊಡ್ಡ ಯುದ್ಧ ನಡೆಯುತ್ತದೆ. ಭರತ ಯುದ್ಧದಲ್ಲಿ ಸೋತರೂ ಬಾಹುಬಲಿಗೆ ತಮ್ಮನ ಸೋಲಿನಿಂದ ಸಂತೋಷದ ಭಾವನೆಯೇನೂ ಉಂಟಾಗಲಿಲ್ಲ. ತನ್ನ ಸೋದರನಿಗೆ ರಾಜ್ಯವನ್ನು ಒಪ್ಪಿಸಿ, ಸಕಲ ಧನಕನಕಗಳನ್ನು ತ್ಯಜಿಸಿ  ಕೇವಲಜ್ಞಾನವನ್ನು ಸಂಪಾದಿಸುತ್ತಾನೆ.
 
ಗಂಗಾ ರಾಜ ರಾಜಮಲ್ಲನ ಸಚಿವ ಚಾಮುಂಡರಾಯನ ಕಾಲದಲ್ಲಿ ಈ ವಿಗ್ರಹವನ್ನು ಕೆತ್ತಲಾಗಿದೆ. ಶ್ರವಣಬೆಳಗೊಳ ಪಟ್ಟಣವು ಅನೇಕ ಜೈನ ಮಂದಿರಗಳು ಮತ್ತು ಐತಿಹಾಸಿಕ ಸ್ಥಳಗಳಿಗೆ ಪ್ರಖ್ಯಾತವಾಗಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬೆಟ್ಟದ ಮೇಲೆ ನೆಲೆಗೊಂಡ ಆನೆಗುಡ್ಡೆ ವಿನಾಯಕ ದೇವಸ್ಥಾನ