ಮಾತೆಯನ್ನು ನಕಾಟಿ ಮಾತೆಯೆಂದು ಗುರುತಿಸಲಾಗುತ್ತಿತ್ತು.ದಾದಾಜಿ ಧುನಿವಾಲೆಯವರ ಸಲಹೆಯಂತೆ ಭವಾನಿ ಮಾತೆಯೆಂದು ಕರೆಯಲಾಗುತ್ತದೆ. ಮಂದಿರದ ಆವರಣ ತುಂಬಾ ಸೊಗಸಾಗಿದ್ದು ಮನಸೆಳೆಯುವಂತಿದೆ. ಮಂದಿರದ ದ್ವಾರದಲ್ಲಿರುವ ಕಂಬಗಳು ಹಾಗೂ ಆವರಣದಲ್ಲಿರುವ ಬೃಹತ್ ದೀಪಸ್ಥಂಬಗಳು ಶಂಕುವಿನಾಕಾರದಲ್ಲಿವೆ.
ಭವಾನಿ ಮಾತೆಯ ಮಂದಿರಕ್ಕೆ ಹತ್ತಿಕೊಂಡಂತೆ ಶ್ರೀರಾಮಮಂದಿರ, ತುಳಜೇಶ್ವರ ಮಹಾದೇವ್ ಮಂದಿರ ಮತ್ತು ತುಳಜೇಶ್ವರ ಹನುಮಾನ ಮಂದಿರಗಳಿವೆ. ಮಂದಿರದಲ್ಲಿರುವ ದೇವರ ಹಾಗೂ ದೇವತೆಗಳ ಮೂರ್ತಿಗಳು ಸುಂದರವಾಗಿ ಆಕರ್ಷಕವಾಗಿವೆ. ನಿಮಾಂದ್ ಪ್ರದೇಶದಲ್ಲಿ ತುಳಜಾಭವಾನಿ ಮಾತೆಯ ಮಂದಿರ ಭಕ್ತರ ನಂಬಿಕೆ ಹಾಗೂ ಭರವಸೆಯ ಆಶಾಕಿರಣವಾಗಿದೆ. ಮಂದಿರಕ್ಕೆ ಭೇಟಿ ನೀಡಿದ ಭಕ್ತರ ಕಷ್ಟಗಳು ಪರಿಹಾರವಾಗಿ ನೆಮ್ಮದಿ ದೊರೆಯುತ್ತದೆ. ಬೇಡಿಕೆಗಳು ಈಡೇರುತ್ತವೆ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ.
ತಲುಪುವುದು ಹೇಗೆ
ಖಾಂಡ್ವಾಗೆ ದೇಶದ ಎಲ್ಲ ಮೂಲೆಗಳಿಂದ ರೈಲ್ವೆ ಹಾಗೂ ರಸ್ತೆಯ ಮೂಲಕ ಸುಲಭ ಸಂಪರ್ಕವಿದ್ದು , ಹತ್ತಿರದ ವಿಮಾನ ನಿಲ್ದಾಣವೆಂದರೆ 140 ಕಿ.ಮಿ. ದೂರದಲ್ಲಿರುವ ಇಂದೋರ್.