Select Your Language

Notifications

webdunia
webdunia
webdunia
webdunia

ಚಂದ್ರಿಕಾ ದೇವಿ ಪುಣ್ಯ ಕ್ಷೇತ್ರ

ಚಂದ್ರಿಕಾ ದೇವಿ ಪುಣ್ಯ ಕ್ಷೇತ್ರ
WD
ಲಖ್ನೋದಿಂದ ಅಂದಾಜು 11 ಕಿಮಿ ದೂರ ಅಂತರದಲ್ಲಿ ಇರುವ ಚಂದ್ರಿಕಾ ದೇವಿ ಮಂದಿರವು ಅತ್ಯಂತ ಪುರಾತನವಾದದ್ದು ಎಂದು ಹೇಳಲಾಗುತ್ತಿದೆ. ನವದುರ್ಗಾ ದೇವಿಯ ಮೂರ್ತಿಯನ್ನು ಇಲ್ಲಿನ ಮಹಿಸಾಗರ ಸಂಗಮದ ತಟದಲ್ಲಿ ಇರುವ ಪ್ರಾಚೀನ ಕಾಲದ ಬೇವಿನ ಮರದ ಅಡಿ ಪ್ರತಿಷ್ಟಾಪಿಸಲಾಗಿದೆ. 18ನೇ ಶತಮಾನದ ಆದಿಯಲ್ಲಿ ಇಲ್ಲಿ ಮೊದಲ ಬಾರಿಗೆ ಪೂರ್ಣಿಮೆಯ ದಿನದಂದು ಜಾತ್ರೆ ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೂ ಅನುಚಾನವಾಗಿ ಜಾತ್ರೆ ಪ್ರತಿ ಹುಣ್ಣಿಮೆಯ ದಿನದಂದು ನಡೆಯುತ್ತಿದೆ.

ಹರಕೆಯೊಂದಿಗೆ ಬರುವ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸಿದ ನಂತರ ದೇವಿಗೆ ಚುನರಿ ಎಂದು ಹೇಳಲಾಗುವ ಕುಂಕುಮ ಲೇಪಿತ ದಾರವನ್ನು ಮತ್ತು ಪ್ರಸಾದದ ಜೊತೆಗೆ ಗಂಟೆಯನ್ನು ಅರ್ಪಿಸುತ್ತಾರೆ. ವಿಚಿತ್ರ ಎಂದರೆ ಇಲ್ಲಿ ಮತ್ತಾವುದೇ ರೀತಿಯಲ್ಲಿ ದೇವಿಗೆ ಹರಕೆ ಸಲ್ಲಿಸುವಂತಿಲ್ಲ. ತೆಂಗಿನಕಾಯಿಯನ್ನು ಇಲ್ಲಿ ಅರ್ಪಿಸುವಂತಿಲ್ಲ.

ಚಂದ್ರಿಕಾ ದೇವಿಯ ಮಂದಿರಕ್ಕೆ ಬರುವ ಎಲ್ಲ ವರ್ಗಗಳ ಜನರನ್ನು ಸಮಾನ ರೀತಿಯಲ್ಲಿ ನೋಡಲಾಗುತ್ತದೆ. ಇಲ್ಲಿ ಉಚ್ಚ ನೀಚ ಎಂಬ ಭೇದ ಬಾವವೇ ಇಲ್ಲ. ಈ ದೇವಸ್ಥಾನದ ಮುಖ್ಯಸ್ಥರಾಗಿರುವುದು ಅಖಿಲೇಶ್ ಸಿಂಗ್ ಎನ್ನುವವರು ಇವರೇ ಪಕ್ಕದ ಕತ್ವಾರಾ ಹಳ್ಳಿಯ ಪ್ರಮುಖರು. ದೇವಸ್ಥಾನದ ಮುಖ್ಯ ಅರ್ಚಕರಾಗಿ ಬ್ರಾಹ್ಮಣರು ಒಬ್ಬರಿದ್ದಾರೆ. ಈ ಮಂದಿರದ ಆವರಣದಲ್ಲಿ ಇರುವ ಭೈರವನ ದರ್ಶನಕ್ಕೆ ಹಿಂದುಳಿದ ವರ್ಗದವರು ಬರುತ್ತಾರೆ.
webdunia
WD

ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವಂತೆ ಘಟೊತ್ಕಜನ ಮಗ ಬರ್ಬರಿಕ ಇಲ್ಲಿನ ಮಹಿಸಾಗರದ ಬಳಿ ಕಠಿಣ ತಪಸ್ಸು ಮಾಡಿದನು. ಚಂದ್ರಿಕಾ ದೇವಿಯ ವಾಯವ್ಯ ದಿಕ್ಕಿನಲ್ಲಿ ಇರುವ ಮಹಿಸಾಗರ ಸರೋವರವಿದ್ದು ಇಲ್ಲಿ ಯಾವುದೇ ಕಾಲಕ್ಕೆ ನೀರಿನ ಕೊರತೆ ಉಂಟಾಗುವುದಿಲ್ಲ.ಈ ಸರೋವರದ ಜಲಮೂಲ ಪಾತಾಳದಲ್ಲಿದೆ ಎಂಬ ನಂಬಿಕೆ ಇಲ್ಲಿನವರಲ್ಲಿದೆ.

ಒಂದು ನಂಬಿಕೆಯ ಪ್ರಕಾರ ದಕ್ಷ ಪ್ರಜಾಪತಿಯ ಶಾಪ ವಿಮೋಚನೆಗೆ ಚಂದ್ರನು ಇಲ್ಲಿ ಸ್ನಾನ ಮಾಡಿದನು ಎಂದು ಹೇಳಲಾಗುತ್ತದೆ. ತ್ರೇತಾಯುಗದಲ್ಲಿ ಇದ್ದ ಲಕ್ಷ್ಮಣನ ಪುತ್ರ ಚಂದ್ರಕೇತು ಮತ್ತು ಆತನ ತಾಯಿ ಉರ್ಮಿಳೆ ಇಲ್ಲಿನ ದಟ್ಟವಾದ ಕಾಡುಗಳಲ್ಲಿ ಭಯದಿಂದ ತತ್ತರಿಸುತ್ತಿದ್ದರು. ಆಗ ಚಂದ್ರಕೇತು ಚಂದ್ರಿಕಾದೇವಿಯನ್ನು ಸ್ಮರಿಸಿ ಕಾಡಿನ ಭಯದಿಂದ ಹೊರಗೆ ಬಂದನು ಎನ್ನಲಾಗುತ್ತಿದೆ. ಪ್ರಾಚೀನ ಕಾಲದ ಲಕ್ಷ್ಮಣಪುರಿಯೇ ಇಂದು ಲಖ್ನೋ ಆಗಿದೆ.
webdunia
WD

ಈ ಚಂದ್ರಿಕಾ ದೇವಿಯ ಮಂದಿರಕ್ಕೆ ಮಹಾಭಾರತದ ಸಂಬಂಧವೂ ಇದೆ. ಧರ್ಮರಾಜನು ಅಶ್ವಮೇಧಯಾಗವನ್ನು ಮಾಡಿದ ನಂತರ ಯಾಗದ ಕುದುರೆಯು ಚಂದ್ರಿಕಾ ಕುಂಡವನ್ನು ತಲುಪಿತಂತೆ. ಆ ಪ್ರದೇಶದ ರಾಜನಾದ ಹಂಸರಾಜನು ಯುಧಿಷ್ಟೀರನ ಅಶ್ವವನ್ನು ತಡೆದು ಪಾಂಡವರೊಂದಿಗೆ ಯುದ್ದ ಮಾಡಿದನು. ಈ ಯುದ್ದದಲ್ಲಿ ಹಂಸರಾಜನ ಒರ್ವ ಪುತ್ರ ಸುರತ್ ಪಾಲ್ಗೊಂಡರೆ ಇನ್ನೊರ್ವ ಪುತ್ರನಾದ ಸುದನ್ವನು ನವದುರ್ಗೆಯ ಪೂಜೆಯಲ್ಲಿ ನಿರತನಾಗಿದ್ದರಿಂದ ಆತನನ್ನು ಹಂಸರಾಜನು ಕುದಿಯುವ ಎಣ್ಣೆಯಲ್ಲಿ ಕೈ ಹಾಕಿ ಶಿಕ್ಷಿಸಿದನು. ಆದರೆ ಸುಧನ್ವನಿಗೆ ಏನೂ ಆಗಲಿಲ್ಲ. ಕುದಿಯುವ ಎಣ್ಣೆಯನ್ನು ಇಡಲಾಗಿದ್ದ ಸ್ಥಳ ಸುದನ್ವ ಕುಂಡ ಎಂದು ಹೆಸರು ಪಡೆಯಿತು.

Share this Story:

Follow Webdunia kannada