ಪ್ರತಿ ಹುಣ್ಣಿಮೆಯ ದಿನದಂದು ಇಲ್ಲಿ ಬಹುದೊಡ್ಡ ಜಾತ್ರೆ ನಡೆಯುತ್ತಿದ್ದು, ಖ್ಯಾತ ಸಂತರು, ಸಂಗೀತಕಾರರು ಅಂಬಾ ಮಾತೆಯ ಗುಣಗಾನವನ್ನು ಮಾಡಿದ್ದಾರೆ. ಇಲ್ಲಿನ ಶಾಕ್ತ ಮತ್ತು ಭಕ್ತ ಪಂಥಗಳ ಅನುಯಾಯಿಗಳು ಅಂಬಾ ಮಾತೆಯ ಪೂಜೆ ಮಾಡುತ್ತಾರೆ.
ಭಾರತದಲ್ಲಿ ಇರುವ 51 ಶಕ್ತಿ ಪೀಠಗಳಲ್ಲಿ ಅಂಬಾಜಿಯೂ ಕೂಡ ಒಂದು ಎಂದು ಪ್ರಖ್ಯಾತಿ ಪಡೆದಿದೆ. ಶಕ್ತಿ ಪೀಠಗಳಲ್ಲಿ 12 ಪೀಠಗಳು ಪ್ರಮುಖ ಶಕ್ತಿ ಪೀಠಗಳು ಎಂದು ಹೆಸರು ಪಡೆದಿದ್ದು. ಉಜ್ಜೈನಿಯ ಭಗವತಿ ಮಹಾಕಾಳಿ, ಮಹಾಶಕ್ತಿ. ಕಂಚಿಯ ಕಾಮಾಕ್ಷಿ, ಮಲಯಗಿರಿಯ ಭ್ರಮರಾಂಭ, ಕನ್ಯಾಕುಮಾರಿಯ ಕುಮಾರಿಕಾ, ಮತ್ತು ಅನಾರ್ಟ್‌ನ ಅಂಬಾಜಿ.
ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ.
ಕೊಲ್ಹಾಪುರದ ಮಹಾಲಕ್ಷ್ಮೀ, ವಾರಣಾಸಿಯ ವಿಶಾಲಾಕ್ಷಿ, ಗಯಾದ ಮಂಗಳಾವತಿ, ಬಂಗಾಲದಲ್ಲಿರುವ ಸುಂದರಿ ಭವಾನಿ ಮತ್ತು ನೇಪಾಳದಲ್ಲಿ ಇರುವ ಗುಹ್ಯಕೇಶ್ವರಿ ಪ್ರಮುಖವಾಗಿವೆ. ಮೌಂಟ್ ಅಬುವಿನ ಹತ್ತಿರ ಅಂಬಾ ಭವಾನಿ ಮಂದಿರವಿದ್ದು, ಪಾಲನಪುರ್‍ದಿಂದ 65 ಕಿಮಿ ದೂರದಲ್ಲಿದೆ. ಅಂಬಾ ಭವಾನಿಯ ಮೂಲಸ್ಥಳ ಬೇಟ್ಟದ ಮೇಲಿದ್ದು ಇದು ಪಟ್ಟಣದಿಂದ ಮೂರು ಕಿಮಿ ದೂರದಲ್ಲಿದೆ. ಪೂರ್ವ ಆರ್ಯರ ಕಾಲದಲ್ಲಿ ಅಂಬಾ ಭವಾನಿ ಪೂಜಿಸಲ್ಪಡುತ್ತಿದ್ದಳು ಎಂಬ ನಂಬಿಕೆ ಇದ್ದು, ಆರ್ಯರ ಆಗಮನದ ನಂತರ ಅವರ ಸಂಸ್ಕೃತಿಯಲ್ಲಿ ಕೂಡ ಅಂಬಾ ಭವಾನಿಗೆ ಸ್ಥಾನ ಸಿಕ್ಕಿತು ಎಂದು ವಾದಿಸುವವರು ಇದ್ದಾರೆ.
ಪಕ್ಕದ ಅರಾವಳಿ ಪರ್ವತ ಶ್ರೇಣಿಯ ಪಾದದಡಿಯಲ್ಲಿ ಒಂದು ಅರಸೂರ ಎಂಬ ಗ್ರಾಮವಿದ್ದು ಅಲ್ಲಿ ಶ್ರೀಕೃಷ್ಣನ ಕೇಶ ಮುಂಡನವನ್ನು ಮಾಡಲಾಯಿತು. ಅಲ್ಲಿನ ದೇವಸ್ಥಾನದಲ್ಲಿ ಕೂಡ ಯಾವುದೇ ದೇವತೆಯ ಮೂರ್ತಿ ಇಲ್ಲ.ಅಲ್ಲಿನ ದೇವಸ್ಥಾನದಲ್ಲಿ 51 ಶ್ಲೋಕಗಳ ಪಟ್ಟಿ ಇದೆ.
ಇಲ್ಲಿನ ಅಂಬಾ ಭವಾನಿ ದೇವಸ್ಥಾನದಲ್ಲಿ ಪ್ರತಿ ನವರಾತ್ರಿ ಹಬ್ಬಕ್ಕೆ ಲಕ್ಷದ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
ತಲುಪುವುದು ಹೇಗೆ:
ಅಹ್ಮದಾಬಾದ್‌ನಿಂದ 180 ಕಿಮಿ
ಅಬು ರೋಡ್ ಸ್ಟೆಷನ್‌ನಿಂದ 180 ಕಿಮಿ
ಮೌಂಟ್ ಅಬುನಿಂದ 45 ಕಿಮಿ
ದೆಹಲಿಯಿಂದ 700 ಕಿಮಿ
ಸಮೀಪದ ರೈಲ್ವೆ ನಿಲ್ದಾಣ ಅಬು ರೋಡ್
ಸಮೀಪದ ವಿಮಾನ ನಿಲ್ದಾಣ ಅಹ್ಮದಾಬಾದ್