Select Your Language

Notifications

webdunia
webdunia
webdunia
webdunia

ಇಂಧೋರಿನ ಬಿಜಾಸನ್ ದೇವಾಲಯ

ಇಂಧೋರಿನ ಬಿಜಾಸನ್ ದೇವಾಲಯ
WDWD
ವೆಬ್‌ದುನಿಯಾ ತನ್ನ ಈ ಬಾರಿಯ ಧಾರ್ಮಿಕ ಯಾತ್ರೆಯಲ್ಲಿ ಬಿಜಾಸನ್ ಮಾತೆಯ ಸಾನಿಧ್ಯಕ್ಕೆ ನಿಮ್ಮನ್ನು ಕರೆದೊಯ್ಯುತ್ತಿದೆ.

ಇಂಧೋರಿನಲ್ಲಿರುವ ಮಾತಾ ಬಿಜಾಸನ್ ದೇವಾಯದಲ್ಲಿ ಚೈತ್ರ ನವರಾತ್ರಿಯ ವೇಳೆ ಸಂಭ್ರಮದ ಹೊಳೆ ಉಕ್ಕುತ್ತದೆ. ನವರಾತ್ರಿಯ ವೇಳೆ ಮಾತಾರಾಣಿ ದೇವಾಲಯದಲ್ಲಿ ಭಕ್ತರ ಅತಿ ದೊಡ್ಡ ಸರತಿಯ ಸಾಲು ಕಣ್ಣಿಗೆ ಗೋಚರಿಸುತ್ತದೆ.
webdunia
WDWD


ಈ ದೇವಾಲಯದಲ್ಲಿ ವರ್ಷಂಪ್ರತಿ ನವರಾತ್ರಿಯ ವೇಳೆ ವಿಶೇಷ ಕಾರ್ಯಕ್ರಮಗಳು ಜರಗುತ್ತಿದ್ದು, ಈ ಸಂದರ್ಭದಲ್ಲಿ ನಡೆಯುವ ಶತಚಂಡಿ ಮಹಾಯಜ್ಞದಲ್ಲಿ ಭಕ್ತರು ಭಕ್ತಿಪೂರ್ವಕವಾಗಿ ಪಾಲ್ಗೊಳ್ಳುತ್ತಾರೆ.

ವೈಷ್ಣವ ದೇವಿ ಮಾತೆಯಂತೆಯೇ ಇಲ್ಲಿಯೂ ಸಹ ಕಲ್ಲಿನ ಮೂರ್ತಿ ಇದೆ. ಇಲ್ಲಿನ ಪೂಜಾರಿ ಹೇಳುವಂತೆ ಇದು ಸ್ವಯಂಭು ಮೂರ್ತಿ. ಆದರೆ ಇವುಗಳ ಐತಿಹಾಸಿಕ ಮೂಲಗಳ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಮೂರ್ತಿಗಳು ಸಾವಿರಾರು ವರ್ಷಗಳಿಂದ ಇಲ್ಲಿ ಸ್ಥಾಪಿತವಾಗಿದ್ದು ತಲೆತಲಾಂತರದ ಮಂದಿ ಇದನ್ನು ಪೂಜೆ ಮಾಡುತ್ತಿದ್ದಾರೆ ಎಂಬುದು ಮಾತಾ ಬಿಜಾಸನ ದೇವಾಲಯದ ಪೂಜಾರಿಯ ನಂಬುಗೆ.

webdunia
WDWD
ಹೋಳ್ಕರ್ ಆಡಳಿತ ಕಾಲದಲ್ಲಿ ಇಲ್ಲಿನ ಸುತ್ತಮುತ್ತಲ ಪ್ರದೇಶಗಳನ್ನು ಬೇಟೆಗಾಗಿ ಬಳಸಲಾಗುತ್ತಿತ್ತು. 1920ರಲ್ಲಿ ಕುಲೀನ ಮನೆತನದ ಮಂದಿಗಳ ಈ ಜಾಗದಲ್ಲಿ ದೇವಾಲಯವೊಂದನ್ನು ನಿರ್ಮಿಸಲಾಯಿತು. ಮಾತೆಯ ಆಶೀರ್ವಾದ ಪಡೆದಲ್ಲಿ ಎಲ್ಲ ಇಚ್ಛೆಗಳು ಪೂರೈಸುತ್ತವೆ ಎಂಬುದು ಭಕ್ತಾದಿಗಳ ನಂಬುದೆ. ದೇವಾಲಯದಲ್ಲಿ ಇರುವ ಕೆರೆಯಲ್ಲಿರುವ ಮೀನುಗಳಿಗೆ ಆಹಾರ ಒದಗಿಸುವುದೂ ಪುಣ್ಯದ ಕಾರ್ಯ ಎಂಬ ನಂಬುಗೆಯೂ ಇದೆ.

ಇಲ್ಲಿ ಜೈನ ಧರ್ಮಕ್ಕೆ ಸೇರಿದ ಎರಡು ಪವಿತ್ರ ಸ್ಥಳಗಳಿವೆ. ಗೊಮ್ಮಟಗಿರಿ ಮತ್ತು ಹಿನಕರ್‌ಗಿರಿಗಳು ದೇವಾಲಯದ ಬಳಿ ಇದ್ದು ಪ್ರತೀವರ್ಷ ಇಲ್ಲಿಗೆ ಜೈನ ಮುನಿಗಳು ಆಗಮಿಸುತ್ತಾರೆ.

Share this Story:

Follow Webdunia kannada